MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಅಭಿವೃದ್ಧಿಗಿಲ್ಲ ಕರ್ನಾಟಕ ಸರ್ಕಾರದ ಬಳಿ ಹಣ, ನಿಂತಲ್ಲೆ ನಿಂತಿವೆ ಬಹುತೇಕ ಕಾಮಗಾರಿ!

ಅಭಿವೃದ್ಧಿಗಿಲ್ಲ ಕರ್ನಾಟಕ ಸರ್ಕಾರದ ಬಳಿ ಹಣ, ನಿಂತಲ್ಲೆ ನಿಂತಿವೆ ಬಹುತೇಕ ಕಾಮಗಾರಿ!

ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು ಅಂದಾಜು 6 ತಿಂಗಳುಗಳಾಗಿವೆ. ಆದರೆ, ಕರ್ನಾಟಕ ಚುನಾವಣೆಗೆ ಹೋದ ದಿನದಿಂದ ನಿಂತು ಹೋಗಿದ್ದ ಬೆಂಗಳೂರಿನ ಕೆಲವು ಕಾಮಗಾರಿಗಳಿಗೆ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾದರೂ ಚಾಲನೆ ಸಿಕ್ಕಿಲ್ಲ.Photo: Ravi, Kannada Prabha

2 Min read
Author : Santosh Naik
| Updated : Nov 06 2023, 05:59 PM IST
Share this Photo Gallery
  • FB
  • TW
  • Linkdin
  • Whatsapp
114

ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು ಅಂದಾಜು ಆರು ತಿಂಗಳಾಗಿವೆ. ಹನಿಮೂನ್‌ ಸಮಯ ಮುಗಿದು ಈಗಾಗಲೇ ಸರ್ಕಾರದ ಒಳಗೆ ಅಧಿಕಾರದ ಕಚ್ಚಾಟಗಳು ಆರಂಭವಾಗಿದೆ.

214

ಇದರ ನಡುವೆ ಜನರ ಬವಣೆ ಮಾತ್ರ ಹೇಳತೀರದಾಗಿದೆ. ಅದರಲ್ಲೂ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಹೊಸ ಸರ್ಕಾರದ ಈವರೆಗಿನ ಪ್ರಯತ್ನ ಸಂಪೂರ್ಣ ಶೂನ್ಯ.

314

ಬಿಜೆಪಿ ಸರ್ಕಾರ ಅವಧಿಯಲ್ಲಿನ ಗುತ್ತಿಗೆಗಳ ತನಿಖೆ ಎನ್ನುವ ಹೆಸರಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಬಹುತೇಕ ಎಲ್ಲಾ ರಸ್ತೆಗಳ ಕಾಮಗಾರಿಗಳು ನಿಂತಿ ಹೋಗಿವೆ.

414

ಇದು ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಒಂದಾದ ನಾಗರಭಾವಿಯ ರಸ್ತೆ ಚಿತ್ರಗಳು. ಅರ್ಧಂಬರ್ಧ ಕಾಮಗಾರಿ ನಡೆದು ಹಲವು ತಿಂಗಳುಗಳೇ ಆಗಿವೆ. ಸದ್ಯದ ಮಟ್ಟಿಗೆ ಇದು ಮುಕ್ತಾಯಗೊಳ್ಳವ ಯಾವ ಸೂಚನೆಯೂ ಕಾಣುತ್ತಿಲ್ಲ.

514

ರಸ್ತೆಗಳ ಪಕ್ಕದ ಒಳಚರಂಡಿ ವ್ಯವಸ್ಥೆಗಳು ನವೀಕರಣ, ಫುಟ್‌ಪಾತ್‌ ನವೀಕರಣ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಉಳಿದುಕೊಂಡು ಈಗಾಗಲೇ ತಿಂಗಳುಗಳ ಮೇಲಾಗಿದೆ.

614

ಇವುಗಳನ್ನು ಮುಕ್ತಾಯ ಮಾಡಿ ಜನರಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ಯಾವ ಯೋಚನೆಯೂ ಸರ್ಕಾರದ ಮುಂದೆ ಇದ್ದಂತೆ ಕಾಣುತ್ತಿಲ್ಲ.

714

ಸ್ವತಃ ಡಿಸಿಎಂ ಡಿಕೆ ಶಿವಕುಮಾರ್‌ ಗ್ಯಾರಂಟಿಗಳ ಕಾರಣದಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳಿದ್ದರು. ಈಗ ಅವರು ಹೇಳಿದ್ದ ಮಾತು ನಿಜವೆನ್ನುವಂತೆ ನಗರದ ಬಹುತೇಕ ಎಲ್ಲಾ ರಸ್ತೆ ಕಾಮಗಾರಿಗಳು ನಿಂತು ಹೋಗಿದೆ.

814

ನಾಗರಭಾವಿಯ ನಮ್ಮೂರ ತಿಂಡಿಯಿಂದ ಅಂಬೇಡ್ಕರ್‌ ಸರ್ಕಲ್‌ವರೆಗಿನ ರಸ್ತೆಯ ವೈಟ್‌ ಟ್ಯಾಪಿಂಗ್‌ ಸದ್ಯಕ್ಕೆ ಮುಗಿಯುವ ಲಕ್ಷಣವಿಲ್ಲ. ಇನ್ನು ಟ್ರಾಫಿಕ್‌ನಲ್ಲಿ ಕಿಲೋಮೀಟರ್‌ಗಟ್ಟಲೆ ಕ್ಯೂ ನಿಲ್ಲೋದು ಜನರಿಗೂ ತಪ್ಪಿದ್ದಲ್ಲ.

914

ಕೆಲವು ದೂರದವರೆಗಿನ ರಸ್ತೆಗೆ ವೈಟ್‌ ಟ್ಯಾಪಿಂಗ್‌ ಮಾಡಲಾಗಿದೆ. ಅದರ ಪಕ್ಕದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಲಾಗಿದ್ದು, ವಾಹನ ಸವಾರರು ಬೈಕ್‌ ರೈಡ್‌ ಮಾಡುವ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

1014

ನಾಗರಭಾವಿ ಮಾತ್ರವಲ್ಲ ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್‌ ರೈಲ್ವೇ ಸ್ಟೇಷನ್‌ನ ಎದುರಿನ ರಸ್ತೆಯ ಕೆಲಸ ಕೂಡ ಅರ್ಧಕ್ಕೆ ನಿಂತುಕೊಂಡು ತಿಂಗಳುಗಳೇ ಕಳೆದಿದೆ.

1114

ಅದರೊಂದಿಗೆ ಡ್ರೇನೇಜ್‌ ಲೈನ್‌ಗಳ ಗುಂಡಿಗಳ ಕೆಲಸವನ್ನು ಸಮರ್ಪಕವಾಗಿ ಮಾಡಲಾಗಿಲ್ಲ. ರಾತ್ರಿಯ ವೇಳೆ ಯಾರಾದರೂ ಅದರಲ್ಲಿ ಬಿದ್ದು ಸಾವು ಕಂಡರೂ ಕೇಳೋರಿಲ್ಲ.

1214

ಸರ್ಕಾರ ಈಗಾಗಲೇ ಬೆಂಗಳೂರಿನ ಕಾಮಗಾರಿಗಳಿಗೆ ಚಾಲನೆ ನೀಡಿರುವುದಾಗಿ ಹೇಳಿದ್ದರೂ, ಅದೆಲ್ಲಿಯೂ ಕಾರ್ಯರೂಪಕ್ಕ ಬಂದಂತೆ ಕಾಣುತ್ತಿಲ್ಲ.

1314

ಇನ್ನು ಗ್ಯಾರಂಟಿಗಳ ಹಣ ಹೊಂದಿಸುವುದರಲ್ಲಿ ನಿರವಾಗಿರುವ ಸರ್ಕಾರ, ಅಭಿವೃದ್ಧಿ ವಿಚಾರಗಳತ್ತ ಯಾವಾಗ ಕಣ್ಣು ಹಾಯಿಸುತ್ತದೆ ಎನ್ನೋದೇ ಜನರ ಪ್ರಶ್ನೆಯಾಗಿದೆ.

1414

ಇನ್ನೊಂದೆಡೆ ಬಿಬಿಎಂಪಿ ಕೂಡ ಈ ಯಾವ ವಿಚಾರಗಳೆ ಬಗ್ಗೆಯೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಗೋಡೆ ಬಿದ್ದರೆ ಜಗುಲಿ ಮೇಲೆ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕಾಂಗ್ರೆಸ್

Latest Videos
Recommended Stories
Recommended image1
ಚಿಕ್ಕಮಗಳೂರು: ಚೀಲದಲ್ಲಿ ಗೋವಿನ ಕಳೇಬರ ತುಂಬಿ ರಸ್ತೆಗೆಸೆದು ಹೋದ ದುಷ್ಕರ್ಮಿಗಳು : ಪ್ರತಿಭಟಿಸಿದವರ ವಿರುದ್ಧ FIR
Recommended image2
ಕಿವಿ ಹರ್ಕೊಂಡು ಒಂದು ಕೊಂಬು ಮುರ್ಕೊಂಡಿರೋ ಕಾಡಾನೆ ಭೀಮಾ: ಕಾಫಿ ತೋಟದ ಬೇಲಿಗಳೆಲ್ಲಾ ಪುಡಿ ಪುಡಿ
Recommended image3
ಮಾಲೀಕ ಆಸ್ಪತ್ರೆಯಲ್ಲಿದ್ದಾಗ ಕುರಿ ಶೆಡ್‌ಗೆ ಬೆಂಕಿ: 30ಕ್ಕೂ ಹೆಚ್ಚು ಕುರಿಗಳು ಸಜೀವ ದಹನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved