MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಕೈ-ಕಾಲು ಕತ್ತರಿಸಿದರೆ ಮಾತ್ರ ಜನರಿಗೆ ಕಾನೂನಿನ ಬಗ್ಗೆ ಭಯ ಬರುತ್ತೆ: ಕರ್ನಾಟಕ ಹೈಕೋರ್ಟ್‌

ಕೈ-ಕಾಲು ಕತ್ತರಿಸಿದರೆ ಮಾತ್ರ ಜನರಿಗೆ ಕಾನೂನಿನ ಬಗ್ಗೆ ಭಯ ಬರುತ್ತೆ: ಕರ್ನಾಟಕ ಹೈಕೋರ್ಟ್‌

ಅ*ತ್ಯಾಚಾರ ಆರೋಪ ಎದುರಿಸುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ವಿಚಾರಣೆ ವೇಳೆ, ನ್ಯಾಯಮೂರ್ತಿಗಳು ದೇಶದ ಕಾನೂನು ವ್ಯವಸ್ಥೆಯು ದುರ್ಬಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

2 Min read
Author : Santosh Naik
Published : Jun 02 2026, 12:24 PM IST
Share this Photo Gallery
  • FB
  • TW
  • Linkdin
  • Whatsapp
15
ಇಂಜಿನಿಯರಿಂಗ್ ವಿದ್ಯಾರ್ಥಿಯ ಜಾಮೀನು ಅರ್ಜಿ ತಿರಸ್ಕಾರ ಮತ್ತು ಹೈಕೋರ್ಟ್ ಆಕ್ರೋಶ
Image Credit : Asianet News

ಇಂಜಿನಿಯರಿಂಗ್ ವಿದ್ಯಾರ್ಥಿಯ ಜಾಮೀನು ಅರ್ಜಿ ತಿರಸ್ಕಾರ ಮತ್ತು ಹೈಕೋರ್ಟ್ ಆಕ್ರೋಶ

ಅ*ತ್ಯಾಚಾರದ ಗಂಭೀರ ಆರೋಪ ಎದುರಿಸುತ್ತಿರುವ 23 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಳ್ಳಿಹಾಕಿದೆ. ಈ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿನ ಅಪರಾಧ ನ್ಯಾಯ ವ್ಯವಸ್ಥೆ ಹಾಗೂ ನ್ಯಾಯಾಂಗದ ಕುರಿತು ದೇಶಾದ್ಯಂತ ಭಾರಿ ಚರ್ಚೆ ಮತ್ತು ಸಂವಾದಕ್ಕೆ ಕಾರಣವಾಗುವಂತಹ ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
'ಪ್ರಜಾಪ್ರಭುತ್ವ ಇರೋದ್ರಿಂದಲೇ ಎಲ್ಲರೂ ದುರುಪಯೋಗ ಪಡಿಸಿಕೊಳ್ತಿದ್ದಾರೆ..' ಎಂದ ಜಡ್ಜ್
Image Credit : stockPhoto

'ಪ್ರಜಾಪ್ರಭುತ್ವ ಇರೋದ್ರಿಂದಲೇ ಎಲ್ಲರೂ ದುರುಪಯೋಗ ಪಡಿಸಿಕೊಳ್ತಿದ್ದಾರೆ..' ಎಂದ ಜಡ್ಜ್

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರು, "ನಾವು ಅಪರಾಧಿಗಳನ್ನು ಕಠಿಣವಾಗಿ ನಡೆಸಿಕೊಳ್ಳದ ಕಾರಣ ಇವತ್ತು ಕಾನೂನು ತನ್ನ ಹಲ್ಲುಗಳನ್ನು ಕಳೆದುಕೊಂಡಿದೆ (Law has lost its teeth). ಒಂದು ವೇಳೆ ಅಪರಾಧ ಮಾಡಿದವರ ಕೈಯನ್ನೋ ಅಥವಾ ಕಾಲನ್ನೋ ಕತ್ತರಿಸುವಂತಹ ಕಠಿಣ ಶಿಕ್ಷೆ ಜಾರಿಗೆ ತಂದರೆ, ಆಗ ಬಹುಶಃ ಜನರು ಕಾನೂನನ್ನು ಪಾಲಿಸಲು ಮತ್ತು ಗೌರವಿಸಲು ಕಲಿಯುತ್ತಾರೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದರಿಂದಲೇ ಪ್ರತಿಯೊಬ್ಬರೂ ಇದರ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Articles

Related image1
ಜೀವನಾಂಶ ಕೊಡದ ಗಂಡಂದಿರಿಗೆ ಹೈಕೋರ್ಟ್‌ ಶಾಕ್‌! ಪತ್ನಿಗೆ ಹಣ ನೀಡದಿದ್ದರೆ ಜೈಲು ಫಿಕ್ಸ್‌? ಹೈ ಮಹತ್ವದ ತೀರ್ಪು, ಏನಿದು ಪ್ರಕರಣ?
Related image2
1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್‌, ದಂಡ ಕಟ್ಟಿ ಎಂದ ಮದ್ರಾಸ್‌ ಹೈಕೋರ್ಟ್‌
35
ಪಶ್ಚಿಮ ಏಷ್ಯಾ ದೇಶಗಳ ಕಠಿಣ ಶಿಕ್ಷಾ ಪದ್ಧತಿಯ ಉಲ್ಲೇಖ
Image Credit : stockPhoto

ಪಶ್ಚಿಮ ಏಷ್ಯಾ ದೇಶಗಳ ಕಠಿಣ ಶಿಕ್ಷಾ ಪದ್ಧತಿಯ ಉಲ್ಲೇಖ

ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸದ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅತ್ಯಂತ ಸಹಜವಾಗಿ ಮತ್ತು ಯಾವುದೇ ಭಯವಿಲ್ಲದೆ ಅಪರಾಧಗಳು ನಡೆಯುತ್ತಿವೆ ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಭಾರತದ ಪ್ರಸಕ್ತ ಪರಿಸ್ಥಿತಿಯನ್ನು ಕೆಲವು ಪಶ್ಚಿಮ ಏಷ್ಯಾ (ಗಲ್ಫ್) ದೇಶಗಳಲ್ಲಿನ ಕಠಿಣ ಶಿಕ್ಷಾ ಪದ್ಧತಿಗಳೊಂದಿಗೆ ಹೋಲಿಸಿ ಮಾತನಾಡಿದ ಅವರು, ಅಲ್ಲಿನ ಕಠಿಣ ಕಾನೂನುಗಳು ಅಪರಾಧದ ಪ್ರಮಾಣವನ್ನು ಹೇಗೆ ತಡೆಗಟ್ಟುತ್ತವೆ ಎಂಬುದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

45
ಭದ್ರಕೋಟೆಯಂತಿದ್ದ ಜೈಲು ವಾಸ: ವಕೀಲರ ವಾದ ಹಾಗೂ ನ್ಯಾಯಾಲಯದ ತಿರುಗೇಟು
Image Credit : Asianet News

ಭದ್ರಕೋಟೆಯಂತಿದ್ದ ಜೈಲು ವಾಸ: ವಕೀಲರ ವಾದ ಹಾಗೂ ನ್ಯಾಯಾಲಯದ ತಿರುಗೇಟು

ವಿಚಾರಣೆ ವೇಳೆ ಪ್ರತಿವಾದಿ (ಆರೋಪಿ) ಪರ ವಕೀಲರು ವಾದ ಮಂಡಿಸಿ, 'ತಮ್ಮ ಕಕ್ಷಿದಾರ ತಾನು ಮಾಡದ ಅಪರಾಧಕ್ಕಾಗಿ ಈಗಾಗಲೇ ಸುಮಾರು ಎರಡು ತಿಂಗಳಿನಿಂದ ಜೈಲಿನಲ್ಲಿದ್ದಾನೆ. ಇದಲ್ಲದೆ ಈ ಆರೋಪಗಳು ಸುಮಾರು ಮೂರು ವರ್ಷಗಳಷ್ಟು ಹಳೆಯದಾದ ಘಟನೆಗೆ ಸಂಬಂಧಿಸಿವೆ..' ಎಂದು ಕೋರಿದರು. ಇದಕ್ಕೆ ತಕ್ಷಣವೇ ಕಟುವಾದ ಶೈಲಿಯಲ್ಲೇ ತಿರುಗೇಟು ನೀಡಿದ ನ್ಯಾಯಾಧೀಶರು, 'ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು (If you eat salt, you got to drink water). ಅವನು ಇನ್ನೊಂದು ನಾಲ್ಕೈದು ದಿನ ಜೈಲಿನಲ್ಲೇ ಇರಲಿ, ಜೈಲು ವಾಸಕ್ಕೆ ಒಗ್ಗಿಕೊಳ್ಳಲಿ. ಮುಂದೆ ಒಂದು ವೇಳೆ ಅಪರಾಧ ಸಾಬೀತಾಗಿ ಶಿಕ್ಷೆಯಾದರೆ ಮತ್ತೆ ಅಲ್ಲಿಗೇ ಹೋಗಬೇಕಾಗುತ್ತದೋ ಯಾರಿಗೆ ಗೊತ್ತು!" ಎಂದರು.

55
ಪ್ರಕರಣದ ಹಿನ್ನೆಲೆ, ರಾಷ್ಟ್ರೀಯ ಮಹಿಳಾ ಆಯೋಗದ ಮಧ್ಯಪ್ರವೇಶ ಹಾಗೂ ಮುಂದಿನ ವಿಚಾರಣೆ
Image Credit : our own

ಪ್ರಕರಣದ ಹಿನ್ನೆಲೆ, ರಾಷ್ಟ್ರೀಯ ಮಹಿಳಾ ಆಯೋಗದ ಮಧ್ಯಪ್ರವೇಶ ಹಾಗೂ ಮುಂದಿನ ವಿಚಾರಣೆ

ಪ್ರಕರಣದ ತನಿಖೆ ನಡೆಸಿರುವ ಪೊಲೀಸರ ಪ್ರಕಾರ, ಆರೋಪಿತ ವಿದ್ಯಾರ್ಥಿಯು ಸೆಪ್ಟೆಂಬರ್ 12, 2023 ರಂದು ತನ್ನ ಹಳೆಯ ಸಹಪಾಠಿಯಾಗಿದ್ದ ಯುವತಿಯನ್ನು ನಂಬಿಸಿ ಅಪಾರ್ಟ್‌ಮೆಂಟ್‌ವೊಂದಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಸಂತ್ರಸ್ತೆ ಮೊದಲು ನವದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗವನ್ನು (NCW) ಸಂಪರ್ಕಿಸಿ ದೂರು ನೀಡಿದ ಬಳಿಕವಷ್ಟೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯು ಏಪ್ರಿಲ್ ಆರಂಭದಿಂದಲೂ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸದ್ಯ ಹೈಕೋರ್ಟ್ ಈ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 8 ಕ್ಕೆ ಮುಂದೂಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕರ್ನಾಟಕ ಸುದ್ದಿ
ಹೈಕೋರ್ಟ್
ಕ್ರೈಮ್ ನ್ಯೂಸ್
ಸುದ್ದಿ
ಮಹಿಳೆಯರು

Latest Videos
Recommended Stories
Recommended image1
Now Playing
ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
Recommended image2
Now Playing
ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
Recommended image3
ಬೆಂಗಳೂರಿನಲ್ಲಿದ್ದ ಬಾಂಗ್ಲಾ ಪ್ರಜೆಗಳಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟವಗೆ ಕೋರ್ಟ್‌ ಚಾಟಿ
Related Stories
Recommended image1
ಜೀವನಾಂಶ ಕೊಡದ ಗಂಡಂದಿರಿಗೆ ಹೈಕೋರ್ಟ್‌ ಶಾಕ್‌! ಪತ್ನಿಗೆ ಹಣ ನೀಡದಿದ್ದರೆ ಜೈಲು ಫಿಕ್ಸ್‌? ಹೈ ಮಹತ್ವದ ತೀರ್ಪು, ಏನಿದು ಪ್ರಕರಣ?
Recommended image2
1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್‌, ದಂಡ ಕಟ್ಟಿ ಎಂದ ಮದ್ರಾಸ್‌ ಹೈಕೋರ್ಟ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved