MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ನನಗೆ ಹೂವಿನ ಹಾರ ಹಾಕಬೇಡಿ, ಅಲರ್ಜಿಯಾಗುತ್ತೆ!: ಕಾರ್ಯಕರ್ತರಿಗೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಮನವಿ!

ನನಗೆ ಹೂವಿನ ಹಾರ ಹಾಕಬೇಡಿ, ಅಲರ್ಜಿಯಾಗುತ್ತೆ!: ಕಾರ್ಯಕರ್ತರಿಗೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಮನವಿ!

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್, ತಮಗಿರುವ ಅಲರ್ಜಿಯ ಕಾರಣ ಹೂವಿನ ಹಾರಗಳನ್ನು ನಿಷೇಧಿಸಿದ್ದಾರೆ. ತಮ್ಮ ಈ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸಿ, ಪ್ರಮಾಣವಚನಕ್ಕೆ ಹೆಚ್ಚು ಜನ ಸೇರದೆ ತಮ್ಮ ಜಿಲ್ಲೆಗಳಲ್ಲೇ ಸಂಭ್ರಮಿಸುವಂತೆ ಅವರು ಮನವಿ ಮಾಡಿದ್ದಾರೆ.

2 Min read
Author : Sathish Kumar KH
Published : May 31 2026, 08:21 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Asianet News

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು ತಮ್ಮ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ವಿಶೇಷ ಹಾಗೂ ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ. ಸಂಭ್ರಮಾಚರಣೆಯ ಸಂದರ್ಭದಲ್ಲಿ ತಮಗೆ ಹೂವಿನ ಹಾರಗಳನ್ನು ಹಾಕದಂತೆ ಕೋರಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
Image Credit : Asianet News

ಹೂವಿನ ಹಾರ ನಿಷೇಧವೇಕೆ?

ತಮಗೆ ಹೂವಿನ ಹಾರಗಳಿಂದ ಅಲರ್ಜಿ ಉಂಟಾಗುವ ಬಗ್ಗೆ ಡಿ.ಕೆ. ಶಿವಕುಮಾರ್ ಬಹಿರಂಗಪಡಿಸಿದ್ದಾರೆ. 'ನನಗೆ ಹೂವಿನ ಹಾರಗಳನ್ನು ಹಾಕಬೇಡಿ. ವಿಶೇಷವಾಗಿ ಹಾರಗಳಲ್ಲಿ ಬಳಸುವ 'ಸುಗಂಧರಾಜ' ಹೂವು ಎಂದರೆ ನನಗೆ ಅಲರ್ಜಿ. ಆ ಹೂವು ಮೈಗೆ ತಗುಲಿದರೆ ತೀವ್ರವಾದ ತುರಿಕೆ ಆರಂಭವಾಗುತ್ತದೆ.

Related Articles

Related image1
ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕ ಡಿ.ಕೆ. ಶಿವಕುಮಾರ್‌ಗೆ ಸರ್ಕಾರ ರಚನೆಗೆ ರಾಜ್ಯಪಾಲರ ಅಧಿಕೃತ ಆಹ್ವಾನ!
Related image2
ಡಿ.ಕೆ. ಶಿವಕುಮಾರ್ ಸಿಎಂ ಆದ ಮರುಕ್ಷಣವೇ ರಾಹುಲ್ ಗಾಂಧಿಗೆ ‘ಬಿಗ್ ಗಿಫ್ಟ್’: ಕಾಂಗ್ರೆಸ್ ಋಣ ತೀರಿಸಲು ಮಾಸ್ಟರ್ ಪ್ಲಾನ್
38
Image Credit : Asianet News

ಈ ಕಾರಣದಿಂದಲೇ ನಾನು ಹೂವಿನ ಹಾರಗಳನ್ನು ನಿಷೇಧಿಸಿದ್ದೇನೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರ್ಯಕರ್ತರು ತಮ್ಮ ಪ್ರೀತಿಯನ್ನು ಹೂವಿನ ಹಾರಗಳ ಬದಲಿಗೆ ಹಾರೈಕೆಗಳ ಮೂಲಕ ವ್ಯಕ್ತಪಡಿಸಬೇಕೆಂದು ಡಿ.ಕೆ.ಶಿವಕುಮಾರ್ ವಿನಂತಿಸಿದ್ದಾರೆ.

48
Image Credit : Asianet News

ಇದು ಕಾರ್ಯಕರ್ತನ ವಿಜಯ:

ತಾವು ಮುಖ್ಯಮಂತ್ರಿಯಾಗುತ್ತಿರುವ ಬಗ್ಗೆ ಭಾವುಕರಾಗಿ ಮಾತನಾಡಿದ ಅವರು, 'ಇಲ್ಲಿ ಸಿಎಂ ಆಗುತ್ತಿರುವುದು ಡಿ.ಕೆ. ಶಿವಕುಮಾರ್ ಎಂಬ ವ್ಯಕ್ತಿಯಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದರು.

58
Image Credit : Asianet News

ಮುಂದುವರೆದು ಮಾತನಾಡಿದ ಅವರು, 1979-90ರ ಕಾಲಘಟ್ಟದಿಂದ ವಿದ್ಯಾರ್ಥಿ ನಾಯಕನಾಗಿ ಬೆಳೆದು ಬಂದವನು ನಾನು. ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿದ ಒಬ್ಬ ಕಾರ್ಯಕರ್ತ ಇಂದು ಈ ಉನ್ನತ ಸ್ಥಾನಕ್ಕೇರುತ್ತಿದ್ದಾನೆ. ಇದು ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಂದ ಜಯ' ಎಂದು ಡಿ.ಕೆ.ಶಿವಕುಮಾರ್ ತಮ್ಮ ಸಿಎಂ ಸ್ಥಾನವನ್ನು ಕಾರ್ಯಕರ್ತರಿಗೆ ಅರ್ಪಣೆ ಮಾಡಿದರು.

68
Image Credit : Asianet News

ನಾನು ಲೋಕಭವನದಲ್ಲಿ ಬುಧವಾರ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದೇನೆ. ಅಲ್ಲಿ ಹೆಚ್ಚಿನ ಜನರು ಸೇರುವುದಕ್ಕೆ ಜಾಗದ ಅಭಾವವಿರುವುದರಿಂದ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಡಿ, ತಮ್ಮ ತಮ್ಮ ಜಿಲ್ಲೆಗಳಲ್ಲೇ ಸಂಭ್ರಮಿಸಿ ಎಂದು ಡಿಕೆಶಿ ಕರೆ ನೀಡಿದರು.

78
Image Credit : stockPhoto

ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆ:

ಇದೇ ಸಂದರ್ಭದಲ್ಲಿ ಐಪಿಎಲ್ ಫೈನಲ್ ಪ್ರವೇಶದ ಹೊಸ್ತಿಲಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೂ ಡಿ.ಕೆ. ಶಿವಕುಮಾರ್ ಶುಭ ಹಾರೈಸಿದರು. 'ಕಳೆದ ಬಾರಿ ಆರ್‌ಸಿಬಿ ಚೆನ್ನಾಗಿ ಆಡಿತ್ತು, ಈ ಬಾರಿಯೂ ಉತ್ತಮ ಪ್ರದರ್ಶನ ನೀಡಿದೆ. ರಾಜ್ಯದ ಪರವಾಗಿ, ಸರ್ಕಾರದ ಪರವಾಗಿ ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ' ಎಂದರು.

88
Image Credit : Asianet News

ಇದೇ ವೇಳೆ ರಾಜಕೀಯ ಕಾರಣಗಳಿಂದ ಮ್ಯಾಚ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, 'ನನಗೆ ಅನ್ಯಾಯವಾಗಿದೆ, ರಾಜಕಾರಣದಿಂದ ಅಲ್ಲಿಗೆ ಮ್ಯಾಚ್ ತೆಗೆದುಕೊಂಡು ಹೋಗಿದ್ದಾರೆ' ಎಂದು ಮಾರ್ಮಿಕವಾಗಿ ನುಡಿದರು.

ಒಟ್ಟಾರೆಯಾಗಿ, ಪ್ರಮಾಣವಚನಕ್ಕೆ ಸಜ್ಜಾಗಿರುವ ಡಿ.ಕೆ. ಶಿವಕುಮಾರ್ ಅವರು ಕಾರ್ಯಕರ್ತರ ಉತ್ಸಾಹವನ್ನು ಗೌರವಿಸುತ್ತಲೇ, ಆರೋಗ್ಯ ಮತ್ತು ಭದ್ರತೆಯ ದೃಷ್ಟಿಯಿಂದ ಕೆಲವು ಮಿತಿಗಳನ್ನು ಹೇರಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಡಿ.ಕೆ. ಶಿವಕುಮಾರ್
ಕರ್ನಾಟಕ ರಾಜಕೀಯ
ರಾಜಕೀಯ ಸುದ್ದಿ

Latest Videos
Recommended Stories
Recommended image1
ಡಿ.ಕೆ. ಶಿವಕುಮಾರ್ ಸಿಎಂ ಆದ ಮರುಕ್ಷಣವೇ ರಾಹುಲ್ ಗಾಂಧಿಗೆ ‘ಬಿಗ್ ಗಿಫ್ಟ್’: ಕಾಂಗ್ರೆಸ್ ಋಣ ತೀರಿಸಲು ಮಾಸ್ಟರ್ ಪ್ಲಾನ್
Recommended image2
ದೇಶದ ನೂತನ ಕುಬೇರ ಸಿಎಂ ಆಗಲಿದ್ದಾರೆ ಡಿಕೆ ಶಿವಕುಮಾರ್: ಚಂದ್ರಬಾಬು ನಾಯ್ಡು, ದಳಪತಿ ವಿಜಯ್‌ರನ್ನೇ ಹಿಂದಿಕ್ಕಿದ ಬಂಡೆ
Recommended image3
ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಪ್ರಮಾವಚನ, ಸರ್ಕಾರದಿಂದ ಆಹ್ವಾನ
Related Stories
Recommended image1
ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕ ಡಿ.ಕೆ. ಶಿವಕುಮಾರ್‌ಗೆ ಸರ್ಕಾರ ರಚನೆಗೆ ರಾಜ್ಯಪಾಲರ ಅಧಿಕೃತ ಆಹ್ವಾನ!
Recommended image2
ಡಿ.ಕೆ. ಶಿವಕುಮಾರ್ ಸಿಎಂ ಆದ ಮರುಕ್ಷಣವೇ ರಾಹುಲ್ ಗಾಂಧಿಗೆ ‘ಬಿಗ್ ಗಿಫ್ಟ್’: ಕಾಂಗ್ರೆಸ್ ಋಣ ತೀರಿಸಲು ಮಾಸ್ಟರ್ ಪ್ಲಾನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved