MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಧರ್ಮಸ್ಥಳ ಸಮಾಧಿ ಪ್ರಕರಣ: 9ನೇ ಪಾಯಿಂಟ್ ನಿಂದ ಶವ ಸಿಗೋದು ಖಚಿತ ಅನಾಮಿಕನ ಭಾರೀ ವಿಶ್ವಾಸ!

ಧರ್ಮಸ್ಥಳ ಸಮಾಧಿ ಪ್ರಕರಣ: 9ನೇ ಪಾಯಿಂಟ್ ನಿಂದ ಶವ ಸಿಗೋದು ಖಚಿತ ಅನಾಮಿಕನ ಭಾರೀ ವಿಶ್ವಾಸ!

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಪ್ರಕರಣದಲ್ಲಿ ಅನಾಮಿಕ ದೂರುದಾರನು ನೀಡಿರುವ ಸುಳಿವುಗಳು ಚರ್ಚೆಗೆ ಗ್ರಾಸವಾಗಿವೆ. 9ನೇ ಪಾಯಿಂಟ್‌ನಿಂದ ಮುಂದಿನ ಸ್ಥಳಗಳಲ್ಲಿ ಶವ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ತನಿಖಾ ತಂಡವು ಶೋಧ ಕಾರ್ಯವನ್ನು ತೀವ್ರಗೊಳಿಸಿದೆ.

2 Min read
Gowthami K
Published : Jul 31 2025, 11:55 AM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ (Dharmasthala mass burial case) ಸಂಬಂಧಿಸಿದಂತೆ, ಅನಾಮಿಕ ದೂರುದಾರನ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ. ಎಂಟು ಪಾಯಿಂಟ್ ತನಕ ಕಳೇಬರ ಸಿಗೋದು ಬಹುತೇಕ ಅನುಮಾನವಾ? 9ನೇ ಪಾಯಿಂಟ್ ನಂತರ ಸಿಕ್ಕೇ ಸಿಗುತ್ತೆ ಕಳೇಬರ ಅನ್ನೋ ವಿಶ್ವಾಸದಲ್ಲಿದ್ದಾನಾ ದೂರುದಾರ? ಈ ಬಗ್ಗೆ ಅನಾಮಿಕ ದೂರುದಾರ ವ್ಯಕ್ತಿ ಭಾರೀ ವಿಶ್ವಾಸದಲ್ಲಿದ್ದಾನೆ. 9ನೇ ಪಾಯಿಂಟ್ ನಿಂದ 13 ನೇ ಪಾಯಿಂಟ್ ವರೆಗೆ ಎಲ್ಲಾ ಪಾಯಿಂಟ್ ಗಳು ರಸ್ತೆ ಪಕ್ಕದಲ್ಲೇ ಇದೆ. ಅನಾಮಿಕನ ಅಂದಾಜು ಈ ಬಾರಿ ಮಿಸ್ ಆಗೋದೇ ಇಲ್ವಾ?

27
Image Credit : Asianet News

ತನಿಖೆಗೆ ಮಾಹಿತಿ ನೀಡಿದ ದೂರುದಾರನು ಮೊದಲ ಎಂಟು ಪಾಯಿಂಟ್‌ಗಳವರೆಗೆ ಶವ ಸಿಗುವ ಸಾಧ್ಯತೆ ಕಡಿಮೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾನೆ. ಆದರೆ, 9ನೇ ಪಾಯಿಂಟ್‌ನಿಂದ ಮುಂದಿನ ಎಲ್ಲಾ ಸ್ಥಳಗಳ ಬಗ್ಗೆ ಅವನಿಗೆ ಕಳೆಬರಹ ಸಿಗುವ ಭಾರೀ ವಿಶ್ವಾಸವಿದೆ. 9ನೇ ಪಾಯಿಂಟ್‌ನಿಂದ 13ನೇ ಪಾಯಿಂಟ್‌ವರೆಗೆ ಎಲ್ಲವೂ ರಸ್ತೆ ಪಕ್ಕದಲ್ಲಿರುವುದರಿಂದ, ಶವ ದೊರೆಯುವ ಸಾಧ್ಯತೆ ಬಹಳವಷ್ಟಿದೆ ಎಂದು ದೂರುದಾರ ಹೇಳಿದ್ದಾನೆ ಎನ್ನಲಾಗಿದೆ. ಅವನು ತನಗೆ ಇರುವ ಮಾಹಿತಿಯ ಆಧಾರದಲ್ಲಿ "ಈ ಬಾರಿ ಮಿಸ್ ಆಗೋದು ಸಾಧ್ಯವಿಲ್ಲ" ಎಂಬ ಆತ್ಮವಿಶ್ವಾಸದಿಂದಲೇ ತನಿಖಾ ಸಂಸ್ಥೆಗೆ ಹೇಳಿದ್ದಾನಂತೆ.

Related Articles

Related image1
ಧರ್ಮಸ್ಥಳ ಸಮಾಧಿ ಪ್ರಕರಣ: ಲಕ್ಷ್ಮಿ ಹೆಸರಿನ ಪಾನ್ ಕಾರ್ಡ್, ಎಟಿಎಂ ಕಾರ್ಡ್ ಪತ್ತೆ!
Related image2
ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಕೈವಾಡ?
37
Image Credit : Asianet News

ಎಂಟನೇ ಪಾಯಿಂಟ್ ವರೆಗೆ ಗುರುತಿಸಿರುವ ಸ್ಥಳಗಳು ನೇತ್ರಾವತಿ ನದಿಯ ಪಕ್ಕದಲ್ಲಿವೆ. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ, ಶವ ಹೂತಿದ್ದ ಸ್ಥಳದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಸಾಕ್ಷ್ಯ ನಾಶವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ಎಂಟನೆಯ ಪಾಯಿಂಟ್ ಬಳಿ ಇರುವ ಸಣ್ಣ ಸೇತುವೆ ಮಣ್ಣನ್ನು ಶೇಖರಿಸಿ ಶವ ಉಳಿದಿರುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಗಮನ ಹರಿಸಿದ್ದಾರೆ.

47
Image Credit : Asianet News

ದೂರುದಾರನು "ಎಂಟನೇ ಪಾಯಿಂಟ್ ವರೆಗೆ ಅಂದಾಜು ತಪ್ಪಿರಬಹುದು, ಆದರೆ 9ನೇ ಪಾಯಿಂಟ್‌ನ ನಂತರ ತಪ್ಪಿನ ಸಾಧ್ಯತೆಯೇ ಇಲ್ಲ" ಎಂದಿರುವ ಅನಾಮಿಕ ವ್ಯಕ್ತಿ ಈ ಎಲ್ಲ ಮಾಹಿತಿಯನ್ನು ಲಾಯರ್‌ಗಳೊಂದಿಗೆ ಹಂಚಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇಂದು ತನಿಖಾ ಸಂಸ್ಥೆಗಳು 6 ನೇ ಪಾಯಿಂಟ್‌ನಿಂದ ಮುಂದಿನ ಪ್ರದೇಶಗಳಲ್ಲಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಶವದ ಸುಳಿವು ಸಿಗುವ ನಿರೀಕ್ಷೆ ಹೆಚ್ಚಾಗಿದೆ.

57
Image Credit : Asianet News

ಧರ್ಮಸ್ಥಳಶವ ಹೂತಿಟ್ಟ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಈ ಕುರಿತು ವಿಶೇಷ ತನಿಖಾ ತಂಡದ (SIT) ಶಕ್ತಿವರ್ಧನೆಗಾಗಿ ಮತ್ತಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ 20 ಮಂದಿ ಅಧಿಕಾರಿಗಳನ್ನು ನಿಯೋಜಿಸಿದ್ದ ಎಸ್‌ಐಟಿ ಗೆ ಇದೀಗ ಹೆಚ್ಚುವರಿ 9 ಪೊಲೀಸ್ ಸಿಬ್ಬಂದಿಯನ್ನು ಸೇರಿಸಲಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನಿರ್ದೇಶನದಂತೆ, ಈ ಹೊಸ ನೇಮಕಾತಿಯು ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶ ಹೊರಬರುವವರೆಗೆ ಅವರು ಎಸ್‌ಐಟಿಗೆ ವರದಿ ಮಾಡಬೇಕೆಂದು ಸೂಚಿಸಲಾಗಿದೆ.

67
Image Credit : Asianet News

ನೇಮಕಗೊಂಡ ಪೊಲೀಸರು ಈ ಕೆಳಕಂಡಂತೆ:

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಎಎಸ್‌ಐ ಲಾರೆನ್ಸ್, ಹೆಡ್ ಕಾನ್ಸ್‌ಟೇಬಲ್ ಮನೋಹರ
  • ಸೆನ್ ಪೊಲೀಸ್ ಠಾಣೆ: ಹೆಡ್ ಕಾನ್ಸ್‌ಟೇಬಲ್ ಪುನೀತ್
  • ವಿಟ್ಲ ಪೊಲೀಸ್ ಠಾಣೆ: ಪೊಲೀಸ್ ಕಾನ್ಸ್‌ಟೇಬಲ್ ಮನೋಜ್
  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪೊಲೀಸ್ ಕಾನ್ಸ್‌ಟೇಬಲ್ ಸಂದೀಪ್
  • ಉಡುಪಿ ಸಿಐಎಸ್‌ಪಿ ಪೊಲೀಸ್ ಠಾಣೆ: ಪೊಲೀಸ್ ಕಾನ್ಸ್‌ಟೇಬಲ್ ಲೋಕೇಶ್
  • ಹೊನ್ನಾವರ ಪೊಲೀಸ್ ಠಾಣೆ: ಹೆಡ್ ಕಾನ್ಸ್‌ಟೇಬಲ್ ಸತೀಶ್ ನಾಯ್ಕ
  • ಮಂಗಳೂರು ಎಫ್‌ಎಂಎಸ್ ದಳ: ಹೆಡ್ ಕಾನ್ಸ್‌ಟೇಬಲ್ ಜಯರಾಮೇಗೌಡ ಹಾಗೂ ಹೆಡ್ ಕಾನ್ಸ್‌ಟೇಬಲ್ ಬಾಲಕೃಷ್ಣ ಗೌಡ

ಪ್ರಕರಣದ ಗಂಭೀರತೆಯನ್ನು ಗಮನದಲ್ಲಿ ಇಟ್ಟುಕೊಂಡು, ಎಸ್‌ಐಟಿ ತನಿಖೆಗೆ ಸಕ್ರಿಯ ಪೊಲೀಸ್ ಬಲದ ಅಗತ್ಯವಿದೆ ಎಂಬ ಆಶಯದೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಈಗ ಎಸ್‌ಐಟಿ ಒಟ್ಟು 29 ಸದಸ್ಯರೊಂದಿಗೆ ತನಿಖೆ ಮುಂದುವರಿಸುತ್ತಿದ್ದು, ಶೀಘ್ರದಲ್ಲೇ ಮಹತ್ವದ ಸುಳಿವು ಸಿಗುವ ನಿರೀಕ್ಷೆ ಇದೆ.

77
Image Credit : Asianet News

ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿರಬಹುದು ಎಂಬ ತೀವ್ರ ಆರೋಪದ ಮೇಲೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಂದ ಪ್ರಮುಖ ಮಾಹಿತಿ ಕೇಳಿದೆ. ಎಸ್‌ಐಟಿಯು 1995 ರಿಂದ 2015 ರವರೆಗೆ, ಎರಡು ಹಂತಗಳಲ್ಲಿ ಅಂದರೆ 1995 ರಿಂದ 2005, 2005 ರಿಂದ 2015 ಎರಡು ದಶಕಗಳ ಅವಧಿಯ ನಾಪತ್ತೆ, ಕೊಲೆ, ಅತ್ಯಾ*ಚಾರ ಸಂಬಂಧಿಸಿದ ಪ್ರಕರಣಗಳ ವಿವರಗಳು ಬೇಕೆಂದು ಸೂಚಿಸಿದೆ. ಪ್ರತಿ ಪೊಲೀಸ್ ಠಾಣೆಗಳಿಗೆ ಪತ್ರ ಬರೆದ ಎಸ್‌ಐಟಿ, ಈ 20 ವರ್ಷದ ದಾಖಲೆಗಳನ್ನು ಎರಡು ವಿಭಿನ್ನ ಪಟ್ಟಿಗಳಲ್ಲಿ ನೀಡುವಂತೆ ಕೇಳಿದೆ. ಈ ಮೂಲಕ, ಕರ್ನಾಟಕದ ಎಲ್ಲ ಠಾಣೆಗಳಿಂದ ಮಾಹಿತಿ ಸಂಗ್ರಹಿಸಿ, ಧರ್ಮಸ್ಥಳದ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಮಾನ್ಯತೆ ಅಥವಾ ಹೋಲಿಕೆಗಳಿರುವುದೇ ಎಂಬುದನ್ನು ಪರಿಶೀಲಿಸುವ ಉದ್ದೇಶದೊಂದಿಗೆ ತನಿಖೆ ಮುಂದುವರಿಸಲಾಗುತ್ತಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಧರ್ಮಸ್ಥಳ
ಎಸ್.ಐ.ಟಿ.
ಸೌಜನ್ಯ ಪ್ರಕರಣ
ದಕ್ಷಿಣ ಕನ್ನಡ
ಕ್ರೈಮ್ ನ್ಯೂಸ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved