ದಾವಣಗೆರೆ: ಹಿಂದೂ ಮುಸ್ಲಿಂ ಪ್ರೇಮ: ತುಂಗಭದ್ರಾ ನದಿಗೆ ಹಾರಿದ ಜೋಡಿ
ಪರಸ್ಪರ ಪ್ರೀತಿಸುತ್ತಿದ್ದ ಹಿಂದೂ ಮುಸ್ಲಿಂ ಜೋಡಿಯೊಂದು ಮನೆಯವರು ತಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ತುಂಗಾಭದ್ರಾ ನದಿಗೆ ಹಾರಿದ ಘಟನೆ ಹೊನ್ನಾಳಿ ಪಟ್ಟಣದ ತುಂಗಭದ್ರ ಸೇತುವೆ ಬಳಿ ನಡೆದಿದೆ.

ತುಂಗಭದ್ರ ನದಿಗೆ ಹಾರಿದ ಪ್ರೇಮಿಗಳು
ದಾವಣಗೆರೆ: ತುಂಗಭದ್ರ ನದಿಗೆ ಹಾರಿ ಪ್ರೇಮಿಗಳ ಸಾಯಲು ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ತುಂಗಭದ್ರ ಸೇತುವೆ ಬಳಿ ನಡೆದಿದೆ.
ಸಾಯಲೆತ್ನಿಸಿದ ಸಿಂಚನ ಹಾಗೂ ಸಮೀರ್
ಸಾಯಲು ಯತ್ನಿಸಿದವರನ್ನು ಸಿಂಚನ ಹಾಗೂ ಮುಸ್ಲಿಂ ಯುವಕ ಸಮೀರ್ ಎಂದು ಗುರುತಿಸಲಾಗಿದೆ. ಇಬ್ಬರು ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ನಿವಾಸಿಗಳಾಗಿದ್ದಾರೆ.
ಮನೆಯಿಂದ ಪ್ರೇಮಕ್ಕೆ ವಿರೋಧ
ಇಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಮನೆಯಲ್ಲಿ ಮದುವೆಗೆ ಒಪ್ಪದ ಹಿನ್ನೆಲೆ ಸೇತುವೆ ಮೇಲಿಂದ ತುಂಗಭದ್ರ ನದಿಗೆ ಹಾರಿ ಸಾಯಲು ಯತ್ನಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ
ಅರ್ಧವರೆಗೆ ಇಬ್ಬರಿಗೂ ಈಜು ಬರುತ್ತಿದ್ದು, ಈಜಿ ನದಿಯ ಮಧ್ಯ ದ್ವೀಪದಂತಿದ್ದ ಜಾಗದಲ್ಲಿ ಕುಳಿತು ಸ್ಥಳೀಯರ ಗಮನ ಸೆಳೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ಗೆಳತಿ ಹಾಗೂ ಸ್ನೇಹಿತರ ಮುಂದೆ ಅಪ್ರಾಪ್ತ ಬಾಲಕನ ಬಿಲ್ಡಪ್: ಪ್ರಶ್ನಿಸಿದ್ದಕ್ಕೆ ಹದಿಹರೆಯದ ಯುವಕನ ಕೊಲೆ
ಮದುವೆಗೆ ಪೋಷಕರ ವಿರೋಧ
ಇಬ್ಬರು ಪರಸ್ಪರ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಇವರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಇವರು ಸಾಯುವುದಕ್ಕೆ ಮುಂದಾಗಿದ್ದರು ಎಂದು ವರದಿಯಾಗಿದೆ ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ನೀವು ವರದಿ ಮಾಡುವಂತೆಯೇ ನಾನು ಕಾಯುತ್ತಾ ಕುಳಿತ್ತಿರುವೆ: ಡಿಕೆಶಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

