MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಸಿಎಂ ತವರಲ್ಲೇ ಇನ್ನೂ ಜೀವಂತ ಬಹಿಷ್ಕಾರ ಪದ್ದತಿ, ವಿದ್ಯುತ್‌ ಕಂಬ ಮುಟ್ಟಿದ್ದಕ್ಕೆ ಹಲ್ಲೆ!

ಸಿಎಂ ತವರಲ್ಲೇ ಇನ್ನೂ ಜೀವಂತ ಬಹಿಷ್ಕಾರ ಪದ್ದತಿ, ವಿದ್ಯುತ್‌ ಕಂಬ ಮುಟ್ಟಿದ್ದಕ್ಕೆ ಹಲ್ಲೆ!

ಸಿಎಂ ತವರು ಕ್ಷೇತ್ರದಲ್ಲಿ ಅನಿಷ್ಟ ಸಾಮಾಜಿಕ ಬಹಿಷ್ಕಾರ ಪದ್ಧತಿ ಜೀವಂತವಿದೆ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರಕ್ಕೊಳಗಿದ್ದ ದಂಪತಿ, ಇದೀಗ ಎಲೆಕ್ಟ್ರಿಕ್ ಕಂಬ ಮುಟ್ಟಿದ್ದಕ್ಕೆ ಹಲ್ಲೆಗೊಳಗಾದ ಘಟನೆ ನಡೆದಿದೆ.

1 Min read
Author : Ravi Janekal
| Updated : Feb 05 2026, 12:30 PM IST
Share this Photo Gallery
  • FB
  • TW
  • Linkdin
  • Whatsapp
15
ಸಿಎಂ ತವರಲ್ಲೇ ಇನ್ನೂ ಜೀವಂತ ಬಹಿಷ್ಕಾರ ಪದ್ದತಿ, ವಿದ್ಯುತ್‌ ಕಂಬ ಮುಟ್ಟಿದ್ದಕ್ಕೆ ಹಲ್ಲೆ!
Image Credit : stockPhoto

ಸಿಎಂ ತವರಲ್ಲೇ ಇನ್ನೂ ಜೀವಂತ ಬಹಿಷ್ಕಾರ ಪದ್ದತಿ, ವಿದ್ಯುತ್‌ ಕಂಬ ಮುಟ್ಟಿದ್ದಕ್ಕೆ ಹಲ್ಲೆ!

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಗ್ರಾಮದ ನಿವಾಸಿಗಳಾದ ವಸಂತ ಹಾಗೂ ನಟನಾಯಕ ದಂಪತಿ ಪುತ್ರಿ ಅಂತರ್ಜಾತಿ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದರು. ಈ ಸಂಬಂಧ ಗ್ರಾಮದ ಕೆಲವರು ವಸಂತ ನಾಯಕ ಅವರ ಕುಟುಂಬ ಸೇರಿದಂತೆ ಅವರ ಸಂಬಂಧಿಕರಿಗೆ ಕಳೆದ ತಿಂಗಳು ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಈ ಬಹಿಷ್ಕಾರಕ್ಕೆ ಒಳಗಾದವರಲ್ಲಿ ಎಲೆಕ್ಟ್ರಿಷಿಯನ್ ವೆಂಕಟೇಶ್ ನಾಯಕ್ ಕೂಡ ಒಬ್ಬರಾಗಿದ್ದಾರೆ.

25
ವಿದ್ಯುತ್ ಕಂಬ ಮುಟ್ಟಿದ್ದಕ್ಕೆ ಹಲ್ಲೆಗೆ ಯತ್ನ
Image Credit : stockPhoto

ವಿದ್ಯುತ್ ಕಂಬ ಮುಟ್ಟಿದ್ದಕ್ಕೆ ಹಲ್ಲೆಗೆ ಯತ್ನ

ಇಂದು ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ರಿಪೇರಿ ಮಾಡಿಕೊಡುವಂತೆ ಕರೆ ಬಂದಿತ್ತು. ವೃತ್ತಿಯಿಂದ ಎಲೆಕ್ಟ್ರಿಷಿಯನ್ ಆಗಿರುವ ವೆಂಕಟೇಶ್ ನಾಯಕ್ ಅವರು ವಿದ್ಯುತ್ ಕಂಬವನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ಬಹಿಷ್ಕಾರಕ್ಕೆ ಒಳಗಾದವರು ಕಂಬವನ್ನು ಮುಟ್ಟುವಂತಿಲ್ಲ ಎಂದು ಗ್ರಾಮದ ರತ್ನಾಕರ, ರವಿ ಹಾಗೂ ಕೆಲವು ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿ ವಾಗ್ವಾದಕ್ಕೆ ಇಳಿದಿದ್ದಾರೆ

Related Articles

Related image1
ಅನಿಷ್ಠ ಪದ್ದತಿ ಇನ್ನೂ ಜೀವಂತ! ಬಹಿಷ್ಕಾರ ಹಿಂಪಡೆಯಲು 16 ಊರು ಕಟ್ಟೆಮನೆಯವರ ವಿರೋಧ 80 ಕುಟುಂಬಗಳ ಮೌನ ರೋಧನೆ!
Related image2
ದೇಗುಲದಲ್ಲಿ ಶರ್ಟ್‌ ತೆಗೆವ ಪದ್ಧತಿ ಸಾಮಾಜಿಕ ಅನಿಷ್ಠ: ಶಿವಗಿರಿ ಶ್ರೀ
35
ತಂದೆ-ಮಗನ ಮೇಲೆ ಜಾತಿನಿಂದನೆ ಮತ್ತು ಬೆದರಿಕೆ
Image Credit : stockPhoto

ತಂದೆ-ಮಗನ ಮೇಲೆ ಜಾತಿನಿಂದನೆ ಮತ್ತು ಬೆದರಿಕೆ

ವಿದ್ಯುತ್ ಕಂಬ ಪರಿಶೀಲಿಸುತ್ತಿದ್ದ ವೆಂಕಟೇಶ್ ನಾಯಕ್ ಹಾಗೂ ಅವರ ಮಗನ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಅಮಾನವೀಯವಾಗಿ ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಿಂದಾಗಿ ಬಹಿಷ್ಕಾರಕ್ಕೆ ಒಳಗಾದ ಕುಟುಂಬಗಳು ತೀವ್ರ ಭೀತಿಯಲ್ಲಿ ದಿನ ಕಳೆಯುವಂತಾಗಿದೆ.

45
ಅಧಿಕಾರಿಗಳ ಮೊರೆ ಹೋದ ಸಂತ್ರಸ್ತ ಎಲೆಕ್ಟ್ರಿಷಿಯನ್
Image Credit : Asianet News

ಅಧಿಕಾರಿಗಳ ಮೊರೆ ಹೋದ ಸಂತ್ರಸ್ತ ಎಲೆಕ್ಟ್ರಿಷಿಯನ್

ತಮ್ಮ ಮೇಲೆ ನಡೆದ ಹಲ್ಲೆ ಯತ್ನ ಹಾಗೂ ಜಾತಿನಿಂದನೆಯ ಕುರಿತು ವೆಂಕಟೇಶ್ ನಾಯಕ್ ಅವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

55
ಗ್ರಾಮಸ್ಥರು ಆತಂಕ
Image Credit : Asianet News

ಗ್ರಾಮಸ್ಥರು ಆತಂಕ

ರತ್ನಾಕರ, ರವಿ ಸೇರಿದಂತೆ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ. ಬಹಿಷ್ಕಾರದಂತಹ ಸಾಮಾಜಿಕ ಪಿಡುಗು ಇನ್ನೂ ಜೀವಂತವಾಗಿರುವುದು ಗ್ರಾಮದಲ್ಲಿ ಆತಂಕ ಮೂಡಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಮೈಸೂರು
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ವ್ಯಕ್ತಿಯನ್ನ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್, ಏನಿದು ಪ್ರಕರಣ?
Recommended image2
ಆರ್ಥಿಕ ಭಯೋತ್ಪಾದನೆಗೆ ಕೇಂದ್ರ ಸರ್ಕಾರ ಸಂಚು: ಪ್ರಿಯಾಂಕ್ ಖರ್ಗೆ
Recommended image3
ಮೆಟ್ರೋ ಟಿಕೆಟ್ ದರ ಸೋಮವಾರದಿಂದ ಮತ್ತೆ ಏರಿಕೆ; ಗ್ಯಾರಂಟಿ ಹೊರೆ ನಮ್ಮೇಲೆ ಹಾಕ್ತೀರಾ? ಪ್ರಯಾಣಿಕರು ಆಕ್ರೋಶ!
Related Stories
Recommended image1
ಅನಿಷ್ಠ ಪದ್ದತಿ ಇನ್ನೂ ಜೀವಂತ! ಬಹಿಷ್ಕಾರ ಹಿಂಪಡೆಯಲು 16 ಊರು ಕಟ್ಟೆಮನೆಯವರ ವಿರೋಧ 80 ಕುಟುಂಬಗಳ ಮೌನ ರೋಧನೆ!
Recommended image2
ದೇಗುಲದಲ್ಲಿ ಶರ್ಟ್‌ ತೆಗೆವ ಪದ್ಧತಿ ಸಾಮಾಜಿಕ ಅನಿಷ್ಠ: ಶಿವಗಿರಿ ಶ್ರೀ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved