ಬೆಂಗಳೂರಲ್ಲಿ ಇನ್ನು ಏರ್ ಶೋ ನಡೆಯಲ್ಲ, ಅರಣ್ಯ ಇಲಾಖೆಯಿಂದ ಭೂಮಿ ವಶಪಡಿಸಲು ನಿರ್ಧಾರ
ಬೆಂಗಳೂರಲ್ಲಿ ಇನ್ನು ಏರ್ ಶೋ ನಡೆಯಲ್ಲ, ಅರಣ್ಯ ಇಲಾಖೆಯಿಂದ ಭೂಮಿ ವಶಪಡಿಸಲು ನಿರ್ಧಾರ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಭೂಮಿ ಅರಣ್ಯ ಇಲಾಖೆಯದ್ದು ಎಂದಿದ್ದಾರೆ.

ಇನ್ನು ಮುಂದೆ ಬೆಂಗಳೂರಲ್ಲಿ ಇಲ್ಲ ಏರ್ ಶೋ
ಪ್ರತಿ ಎರಡು ವರ್ಷಕ್ಕೊಮ್ಮೆ ಭಾರತೀಯ ವಾಯುಸೇನೆ ಹಾಗೂ ಕೇಂದ್ರ ಸರ್ಕಾರ ಏರೋ ಇಂಡಿಯಾ ಶೋ ಆಯೋಜಿಸುತ್ತದೆ. ವಿಶೇಷ ಅಂದರೆ ಈ ಪ್ರತಿಷ್ಠಿತ ಶೋ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ. ಯಲಹಂಕ ವಾಯುನೆಲೆಯಲ್ಲಿ ಪ್ರತಿಷ್ಠಿತ ಏರ್ ಶೋ ಆಯೋಜನೆಗೊಳ್ಳುತ್ತದೆ. ಆದರೆ ಇನ್ನು ಮುಂದೆ ಈ ಶೋ ನಡೆಯುವುದು ಅನುಮಾನವಾಗಿದೆ.
ಏರ್ ಶೋ ನಡೆಯುವ ಭೂಮಿ ತಕರಾರು
ಬೆಂಗಳೂರಿನಲ್ಲಿ ವಾಯುಸೇನೆ ಆಯೋಜಿಸುವ ಏರ್ ಶೋ ರಾಜ್ಯ ಅರಣ್ಯ ಇಲಾಖೆ ಭೂಮಿಯಲ್ಲಿ ನಡೆಯುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಏರೋ ಶೋ ನಡೆಯುವ ಭೂಮಿ ವಶಪಡಿಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. ವಾಯುನೆಲೆಯ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಏರೋಶೋ ನಡೆಯುವ ಜಾಗದ ವಿಚಾರವಾಗಿ ಪೈಟ್
ದೇಶದ ಪ್ರತಿಷ್ಠಿತ ಏರೋಶೋ ನಡೆಯುವ ಜಾಗದ ವಿಚಾರವಾಗಿ ಜಟಾಪಟಿ ಶುರುವಾಗಿದೆ. ಗಂಟಿಗಾನಹಳ್ಳಿ ಗ್ರಾಮದ 159 ಎಕರೆ ಪ್ರದೇಶದ ಪಹಣಿ ಮತ್ತು ಮ್ಯುಟೇಶನ್ ಅರಣ್ಯ ಇಲಾಖೆಯ ಹೆಸರಲ್ಲಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯ ಜಾಗ ಯಾವತ್ತೂ ಅರಣ್ಯ ಇಲಾಖೆಗೆ ಸೇರಿದ್ದು ಎಂದಿದ್ದಾರೆ.
ಭೂಮಿ ಮರಳಿ ಪಡೆಯುತ್ತೇವೆ ಎಂದ ಸಚಿವ
ಅರಣ್ಯ ಭೂಮಿ ವಾಪಸ್ ಪಡೆಯುವುದಾಗಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಅರಣ್ಯ ಸಂಪತ್ತು ಉಳಿಸಿ ಬೆಳೆಸುವ ಜವಾಬ್ದಾರಿ ಇದೆ. ಅರಣ್ಯ ಭೂಮಿಯಲ್ಲಿ ಒಂದಿಂಚು ಪೋಲಾಗುವುದಿಲ್ಲ. ಅರಣ್ಯ ಭೂಮಿ ನಾವು ಮರಳಿ ಪಡೆಯುತ್ತೇವೆ ಎಂದು ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಏರ್ ಶೋ
ಪ್ರತಿ ಎರಡು ವರ್ಷಕ್ಕೊಮ್ಮೆ ಏರೋ ಇಂಡಿಯಾ ಏರ್ ಶೋ ಆಯೋಜನೆಗೊಳ್ಳುತ್ತದೆ. ದೇಶ, ವಿದೇಶದಿಂದ ಬರುವ ಲೋಕದ ಹಕ್ಕಿಗಳ ಶಕ್ತಿ ಪ್ರದರ್ಶನ ನಡೆಯಲಿದೆ. ಇದೇ ವೇಳೆ ಹಲವು ಹೂಡಿಕೆಗಳು ಬರಲಿದೆ. ಹಾಲಿ ವಾಯಸೇನೆ ಬಳಕೆ ಮಾಡುತ್ತಿರುವ ಭೂಮಿ ವಶ ಪಡಿಸಿಕೊಳ್ಳಲು ಅರಣ್ಯ ಇಲಾಖೆ ತೀರ್ಮಾನ ಮಾಡಿದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಏರ್ ಶೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

