ದೇಶಕ್ಕೆ ಹಿರಿಮೆ ತಂದ ಪ್ರಜ್ಞಾನಂದನ ಕುಟುಂಬವನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ!
ಚೆಸ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸಾಧನೆ ಮಾಡಿದ ಆರ್. ಪ್ರಜ್ಞಾನಂದ ಹಾಗೂ ಅವರ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ನವದೆಹಲಿಯಲ್ಲಿ ಭೇಟಿಯಾದರು.

ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್‌ಅಪ್ ಸ್ಥಾನ ಪಡೆದ ತಮಿಳುನಾಡಿನ 18 ವರ್ಷದ ಆಟಗಾರ ಆರ್. ಪ್ರಜ್ಞಾನಂದ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೆಸ್ ವಿಶ್ವಕಪ್‌ನಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ಪ್ರಜ್ಞಾನಂದ ಹೆಮ್ಮೆಯಿಂದ ತೋರಿಸಿದ್ದಾರೆ.
ಪ್ರಜ್ಞಾನಂದನ ಜೊತೆಯಲ್ಲಿ ಅವರ ತಂದೆ ರಮೇಶ್‌ಬಾಬು ಹಾಗೂ ತಾಯಿ ನಾಗಲಕ್ಷ್ಮೀ ಕೂಡ ಜೊತೆಯಲ್ಲಿದ್ದರು. ಪ್ರಧಾನಿ ಮೋದಿ ಪ್ರಜ್ಞಾನಂದನ ಹೆಗಲ ಮೇಲೆ ಕೈಇಟ್ಟು ಫೋಟೋ ತೆಗೆಸಿಕೊಂಡಿದ್ದಾರೆ.
ಪ್ರಜ್ಞಾನಂದನ ಜೊತೆ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಟೇಬಲ್‌ನ ಮುಂಭಾಗದಲ್ಲಿ ಆಕರ್ಷಕ ಚೆಸ್ ಬೋರ್ಡ್‌ಅನ್ನು ಇರಿಸಲಾಗಿತ್ತು.
ಇದೇ ವೇಳೆ ಪ್ರಜ್ಞಾನಂದನ ತಂದೆ-ತಾಯಿಯವರ ಜೊತೆ ಕೂಡ ಆತ್ಮೀಯವಾಗಿ ಮಾತನಾಡಿಸಿದರು. ತಂದೆ ತಾಯಿಯ ಮುಖದಲ್ಲಿ ಪ್ರಧಾನಿಯನ್ನು ಭೇಟಿಯಾದ ಹೆಮ್ಮೆ ಕಾಣಿಸಿತ್ತು.
ಪ್ರಧಾನಿ ಮೋದಿ ಅವರನ್ನು ಸ್ವಗೃಹದಲ್ಲಿ ಭೇಟಿಯಾದ ಕ್ಷಣ ಸ್ಮರಣೀಯವಾದದ್ದು. ಅವರ ಸ್ಫೂರ್ತಿದಾಯಕ ಮಾತುಗಳು ನನಗೆ ಹಾಗೂ ನನ್ನ ತಂದೆ ತಾಯಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಪ್ರಜ್ಞಾನಂದ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
'ನೀವು ಉತ್ಸಾಹ ಮತ್ತು ಪರಿಶ್ರಮವನ್ನು ನಿರೂಪಿಸುತ್ತೀರಿ. ಭಾರತದ ಯುವಕರು ಯಾವುದೇ ಕ್ಷೇತ್ರದಲ್ಲೂ ಹೇಗೆ ಜಯಿಸಬಹುದು ಎಂಬುದನ್ನು ನಿಮ್ಮ ಉದಾಹರಣೆಯೇ ತೋರಿಸುತ್ತದೆ. ನಿಮ್ಮ ಮೇಲೆ ಹೆಮ್ಮೆ ಇದೆ' ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದಾರೆ.
ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್‌ನಲ್ಲಿ ರನ್ನರ್‌ಅಪ್ ಸಾಧನೆ ಮಾಡಿರುವ ಪ್ರಜ್ಞಾನಂದನಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಇತ್ತೀಚೆಗೆ ಅವರನ್ನು ಅಭಿನಂದಿಸಿ 30 ಲಕ್ಷ ರೂಪಾಯಿ ಹಣ ಬಹುಮಾನವಾಗಿ ನೀಡಿದ್ದರು.
ಚೆಸ್ ಸೂಪರ್‌ಸ್ಟಾರ್ ಪ್ರಜ್ಞಾನಂದನ ತಂದೆ-ತಾಯಿಗೆ ಎಲೆಕ್ಟ್ರಿಕ್ ಕಾರ್ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.