- Home
- Sports
- ಬೀದಿಗೆ ಬಿದ್ದ ಬಾಕ್ಸರ್ ಮೇರಿ ಕೋಮ್ ದಾಂಪತ್ಯ ಕಲಹ; ಆಕೆಗೆ ಆ ಇಬ್ಬರ ಜತೆ ಅಕ್ರಮ ಸಂಬಂಧವಿತ್ತು ಎಂದ ಮಾಜಿ ಪತಿ!
ಬೀದಿಗೆ ಬಿದ್ದ ಬಾಕ್ಸರ್ ಮೇರಿ ಕೋಮ್ ದಾಂಪತ್ಯ ಕಲಹ; ಆಕೆಗೆ ಆ ಇಬ್ಬರ ಜತೆ ಅಕ್ರಮ ಸಂಬಂಧವಿತ್ತು ಎಂದ ಮಾಜಿ ಪತಿ!
ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಕುರಿತಂತೆ ಅವರ ಮಾಜಿ ಪತಿ ಕರುಂಗ್ ಒನ್ಲರ್ ಕೆಲವೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾದ ಹೊಸ ಅಪ್‌ಡೇಟ್ಸ್ ಇಲ್ಲಿದೆ ನೋಡಿ

ಮೇರಿ ಕೋಮ್ ಮೇಲೆ ಮಾಜಿ ಪತಿ ಗಂಭೀರ ಆರೋಪ
ಬಾಕ್ಸಿಂಗ್ ದಿಗ್ಗಜೆ ಮೇರಿ ಕೋಮ್ ಮತ್ತು ಮಾಜಿ ಪತಿ ಕರುಂಗ್ ಒನ್ಲರ್ ನಡುವಿನ ಕಿತ್ತಾಟ ಬೀದಿಗೆ ಬಿದ್ದಿದೆ. ತಮ್ಮ ಮಾಜಿ ಪತ್ನಿ ಮೇರಿ ಕೋಮ್‌ಗೆ ಇಬ್ಬರು ಪುರುಷರ ಜತೆ ಅಕ್ರಮ ಸಂಬಂಧವಿತ್ತು ಎಂದು ಆರೋಪಿಸಿದ್ದಾರೆ.
ಮೇರಿ ಕೋಮ್-ಕರುಂಗ್ ಒನ್ಲರ್ ಪರಸ್ಪರ ಆರೋಪ-ಪ್ರತ್ಯಾರೋಪ
ಕರುಂಗ್ ತಮ್ಮ ಕೋಟಿ ಕೋಟಿ ಆಸ್ತಿ ಲಪಟಾಯಿಸಿದ್ದಾರೆ ಎಂದು ಮೇರಿ ಆರೋಪಿಸಿದ್ರೆ, ಆಕೆಗೆ ಅನೈತಿಕ ಸಂಬಂಧವಿತ್ತು ಎಂದು ಒನ್ಲರ್ ದೂರಿದ್ದಾರೆ. ಇಬ್ಬರು 2023ರಲ್ಲಿ ದೂರವಾಗಿದ್ದು, ಈಗ ಬಹಿರಂಗವಾಗಿಯೇ ಕಿತ್ತಾಡುತ್ತಿದ್ದಾರೆ.
ಪತಿ ಮೇಲೆ ಆರೋಪಿಸಿದ್ದ ಮೇರಿ ಕೋಮ್
ಮೇರಿ, ‘ ಒನ್ಲರ್ ನನ್ನ ಹೆಸರಲ್ಲಿ ಸಾಲ ಪಡೆಯುತ್ತಿದ್ದರು. ನನ್ನ ಆಸ್ತಿಯನ್ನೆಲ್ಲ ಅವರ ಹೆಸರಿಗೆ ವರ್ಗಾಯಿಸಿಕೊಂಡು, ಅದನ್ನು ಅಡವಿಟ್ಟು ಸಾಲ ಪಡೆದಿದ್ದರು. ರೌಡಿಗಳನ್ನು ಬಿಟ್ಟು ನನ್ನಿಂದ ಭೂಮಿ ಬರೆಸಿಕೊಂಡಿದ್ದರು’ ಎಂದು ಇತ್ತೀಚೆಗೆ ಆರೋಪಿಸಿದ್ದರು.
ಮೇರಿ ಕೋಮ್‌ಗೆ ಇಬ್ಬರ ಜತೆ ಅಕ್ರಮ ಸಂಬಂಧವಿದೆ ಎಂದ ಮಾಜಿ ಕೋಚ್
ಇದಕ್ಕೆ ಪ್ರತಿಕ್ರಿಯಿಸಿರುವ ಒನ್ಲರ್, ‘2013ರಿಂದಲೂ ಆಕೆ ಅನೈತಿಕ ಸಂಬಂಧ ಹೊಂದಿದ್ದಳು. ಮೊದಲು ಜೂನಿಯರ್ ಬಾಕ್ಸರ್. ಇದಾದ ಬಳಿಕ 2017ರಲ್ಲಿ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಜತೆ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆಲ್ಲ ನನ್ನ ಬಳಿ ಪುರಾವೆಯಿದೆ. ಆದರೂ ಇಷ್ಟು ದಿನ ನಾನು ಮೌನವಾಗಿದ್ದೆ’ ಎಂದಿದ್ದಾರೆ.
ಮೇರಿ ಕೋಮ್ ಅಭ್ಯಾಸಗಳ ಬಗ್ಗೆಯೂ ಗಂಭೀರ ಆರೋಪ
ಮೇರಿ ಕೋಮ್ ರಮ್ ಹಾಗೂ ವೋಡ್ಕಾದಂತಹ ಆಲ್ಕೋಹಾಲ್ ಕುಡಿಯುತ್ತಾರೆ. ಆಕೆಗೆ ಗುಟ್ಕಾ ತಿನ್ನುವ ಅಭ್ಯಾಸವೂ ಇದೆ. ಇಂತಹ ವಿಚಾರಗಳನ್ನು ನಾನೂ ಎಲ್ಲೂ ಮಾಧ್ಯಮಗಳಲ್ಲಿ ಇದುವರೆಗೂ ಹೇಳಿಲ್ಲ ಎಂದು ಅವರ ಮಾಜಿ ಪತಿ ಒನ್ಲರ್ ಹೇಳಿದ್ದಾರೆ.
ಡಿವೋರ್ಸ್ ಆದರೂ ಮುಗಿದ ಮಾತಿನ ಚಕಮಕಿ
ಒಟ್ಟಿನಲ್ಲಿ ದಾಂಪತ್ಯ ಜೀವನದಿಂದ ಬೇರ್ಪಟ್ಟ ಬಳಿಕವೂ ಮೇರಿ ಕೋಮ್ ಹಾಗೂ ಕರುಂಗ್ ಒನ್ಲರ್ ನಡುವಿನ ಕಿತ್ತಾಟ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಅಂತ ಮೇರಿ ಕೋಮ್ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

