ಪ್ರೈಮ್ ವಾಲಿಬಾಲ್ ಲೀಗ್: ಕನ್ನಡಿಗ ಕೆ ಎಲ್ ರಾಹುಲ್ ಗೋವಾ ತಂಡದ ಕೋ-ಓನರ್!
ಪಣಜಿ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್, ಇದೀಗ ಪ್ರೈಮ್ ವಾಲಿಬಾಲ್ ಲೀಗ್ ಟೂರ್ನಿಯಲ್ಲಿ ವಾಲಿಬಾಲ್ ತಂಡವೊಂದರ ಸಹ ಮಾಲೀಕರಾಗಿದ್ದಾರೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಕೆ ಎಲ್ ರಾಹುಲ್ ಹೊಸ ಇನ್ನಿಂಗ್ಸ್
ಪ್ರೈಮ್ ವಾಲಿಬಾಲ್ ಲೀಗ್ (ಪಿಐಎಲ್)ನ ಗೋವಾ ಗಾರ್ಡಿಯನ್ಸ್ ತಂಡಕ್ಕೆ ತಾರಾ ಕ್ರಿಕೆಟಿಗ ಕೆ. ಎಲ್.ರಾಹುಲ್ ಸಹ- ಮಾಲೀಕರಾಗಿದ್ದಾರೆ.
ಸಂತಸ ವ್ಯಕ್ತಪಡಿಸಿದ ರಾಹುಲ್
ತಮ್ಮ ಹೊಸ ಅಧ್ಯಾಯದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಹುಲ್, ಕೇವಲ ವಾಲಿಬಾಲ್ ಬೆಂಬಲಿಗನಾಗಿ ಮಾತ್ರವಲ್ಲದೇ ಸಹ ಮಾಲೀಕನಾಗಿ ಗೋವಾ ಗಾರ್ಡಿಯನ್ಸ್ ತಂಡಕ್ಕೆ ಸೇರಲು ಸಂತಸ ವಾಗುತ್ತಿದೆ.
ವಾಲಿಬಾಲ್ ನಾನು ಆನಂದಿಸುವ ಕ್ರೀಡೆ
ವಾಲಿಬಾಲ್ ಯಾವಾಗಲೂ ನಾನು ಆನಂದಿಸುವ ಕ್ರೀಡೆಯಾಗಿದ್ದು, ಇಲ್ಲಿ ನನ್ನ ಪಾತ್ರವನ್ನು ನಿರ್ವಹಿಸಲು ಉತ್ಸುಹಕನಾಗಿದ್ದೇನೆ' ಎಂದಿದ್ದಾರೆ.
🚨 KL RAHUL - The Co Owner of Goa Guardians in the Prime Volleyball league 🚨 pic.twitter.com/kY62zPM1tu
— Johns. (@CricCrazyJohns) September 22, 2025
ಗೋವಾ ಗಾರ್ಡಿಯನ್ಸ್ ತಂಡದ 10% ಸ್ಟೇಕ್ಸ್ ಖರೀದಿ
ಗೋವಾ ಗಾರ್ಡಿಯನ್ಸ್ ತಂಡದ 10% ಸ್ಟೇಕ್ಸ್ ಅನ್ನು ಕನ್ನಡಿಗ ಕೆ ಎಲ್ ರಾಹುಲ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಈ ತಂಡದ ಬ್ರ್ಯಾಂಡ್ ವ್ಯಾಲ್ಯೂ 50ರಿಂದ 70 ಕೋಟಿ ರುಪಾಯಿಗಳು ಎಂದು ವರದಿಯಾಗಿದೆ.
2019ರಿಂದ ಆರಂಭವಾದ ಪ್ರೈಮ್ ವಾಲಿಬಾಲ್ ಲೀಗ್
2019ರಲ್ಲಿ ಆರಂಭವಾದ ಪ್ರೈಮ್ ವಾಲಿಬಾಲ್ ಲೀಗ್‌ನ ಬ್ರ್ಯಾಂಡ್ ವ್ಯಾಲ್ಯೂ ಸುಮಾರು 500 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ.
ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಲು ಪ್ಲಾನ್
ಇದರ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಲು, ಮತ್ತಷ್ಟು ಜನಪ್ರಿಯಗೊಳಿಸಲು ಆಯೋಜಕರು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ನಾಲ್ಕನೇ ಸೀಸನ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ
ಅಂದಹಾಗೆ ಪ್ರೈಮ್ ವಾಲಿಬಾಲ್ ಲೀಗ್‌ನ ನಾಲ್ಕನೇ ಆವೃತ್ತಿ ಅಕ್ಟೋಬರ್ 2 ರಿಂದ 26ರ ತನಕ ಹೈದರಾಬಾದ್‌ನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

