ಸೇನೆಯಲ್ಲಿ ಬಡ್ತಿ ಪಡೆದ ನೀರಜ್ ಚೋಪ್ರಾ ಪಡೆಯುವ ಸಂಬಳ ಎಷ್ಟು?
Neeraj Chopra: ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಲೆಫ್ಟಿನಂಟ್ ಕರ್ನಲ್ ಹುದ್ದೆಗೆ ಬಡ್ತಿ ನೀಡಲಾಗಿದೆ. ಈ ಬಡ್ತಿಯೊಂದಿಗೆ ಅವರ ಸಂಬಳದಲ್ಲಿ ಏರಿಕೆಯಾಗಲಿದೆ.

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತಂದಿರುವ ಅಥ್ಲಿಟ್ ನೀರಜ್ ಚೋಪ್ರಾ ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ನೀಡಲಾಗಿದೆ. ಈ ಹಿಂದೆ ನೀರಜ್ ಚೋಪ್ರಾ ಭಾರತೀಯ ಸೇನೆಯಲ್ಲಿ ನೈಬ್ ಸುಬೇದಾರ್ ಹುದ್ದೆ ಅಲಂಕರಿಸಿದ್ದರು.
ಇದೀಗ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ಬಡ್ತಿ ನೀಡಲಾಗಿದೆ. ಬಡ್ತಿ ನಂತರ ನೀರಜ್ ಚೋಪ್ರಾ ಅವರ ಸಂಬಳವೂ ಏರಿಕೆಯಾಗಲಿದೆ. ಹಾಗಾದ್ರೆ ನೀರಜ್ ಚೋಪ್ರಾ ಎಷ್ಟು ಸಂಬಳ ಪಡೆಯಲಿದ್ದಾರೆ ಎಂಬ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಭಾರತೀಯ ರಕ್ಷಣಾ ಅಕಾಡೆಮಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಭಾರತೀಯ ಸೇನೆಯಲ್ಲಿ ಲೆಫ್ಟಿನಂಟ್ ಕರ್ನಲ್ ಅವರು 1,21,200 ರೂ.ಗಳಿಂದ 2,12,400 ರೂ.ಗಳವರೆಗೆ ಸಂಬಳವನ್ನು ಪಡೆದುಕೊಳ್ಳುತ್ತಾರೆ. ಈ ವೇತನ 7ನೇ ವೇತನ ಆಯೋಗದ ಶಿಫಾರಸ್ಸನ್ನು ಆಧರಿಸಿದೆ.
ನೀರಜ್ ಚೋಪ್ರಾ ಆಸ್ತಿ
ಭಾರತದ ನೀರಜ್ ಚೋಪ್ರಾ ವಿಶ್ವದ ಅತ್ಯುತ್ತಮ ಜಾವೆಲಿನ್ ಎಸೆತಗಾರರಲ್ಲಿ ಒಬ್ಬರಾಗಿದ್ದಾರೆ. ಎನ್‌ಡಿಟಿವಿ ಸ್ಪೋರ್ಟ್ಸ್ ವರದಿ ಪ್ರಕಾರ, ನೀರಜ್ ಚೋಪ್ರಾ ಅವರ ನಿವ್ವಳ ಮೌಲ್ಯ 37 ಕೋಟಿ ರೂ.ಗಳಾಗಿದ್ದು, ವಾರ್ಷಿಕ ಆದಾಯ ಅಂದಾಜು 4 ಕೋಟಿ ರೂಪಾಯಿ ಆಗಿದೆ.
ನೀರಜ್ ಚೋಪ್ರಾ ಅಂತರರಾಷ್ಟ್ರೀಯ ಕ್ರೀಡೆಗಳು ಮತ್ತು ಅನುಮೋದನೆಗಳಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಒಲಿಂಪಿಕ್ ಪದಕ ಗೆದ್ದ ನಂತರ, ನೀರಜ್ ಚೋಪ್ರಾ ಅವರನ್ನು ಅನೇಕ ಉತ್ಪನ್ನಗಳ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಲಾಗಿದೆ. ಜಾಹೀರಾತುಗಳಿಂದ ನೀರಜ್ ಚೋಪ್ರಾ ಉತ್ತಮ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ.
2021ರ ಟೋಕಿಯೋ ಒಲಿಪಿಂಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. . ನೀರಜ್ ಒಲಿಂಪಿಕ್ಸ್ ನಲ್ಲಿ ಸತತ ಎರಡು ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

