ನೀರಜ್ ಚೋಪ್ರಾಗೆ ಸೇನೆಯಲ್ಲಿ ಪ್ರಮೋಷನ್; ಮಹತ್ವದ ಹುದ್ದೆ ಅಲಂಕರಿಸಿದ ಚಿನ್ನದ ಹುಡುಗ!
ಡಬಲ್ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಪದವಿ ಪಡೆದಿದ್ದಾರೆ. ಈ ನೇಮಕಾತಿ 2025ರ ಏಪ್ರಿಲ್ 16ರಿಂದ ಜಾರಿಗೆ ಬಂದಿದೆ.

ಭಾರತದ ಜಾವೆಲಿನ್ ಥ್ರೋ ಪಟು, ಡಬಲ್ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾಗೆ ಅಪರೂಪದ ಗೌರವ ಒಲಿದು ಬಂದಿದೆ. ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಪದವಿ. ಈ ನೇಮಕಾತಿ 2025ರ ಏಪ್ರಿಲ್ 16ರಿಂದ ಜಾರಿಗೆ ಬಂದಿದೆ.
ಭಾರತ ಸರ್ಕಾರದ ಪ್ರಕಟಣೆ: “ಟೆರಿಟೋರಿಯಲ್ ಆರ್ಮಿ ನಿಯಮ 1948ರ ಕಲಂ 31ರ ಅಡಿ, ರಾಷ್ಟ್ರಪತಿಗಳ ಅಧಿಕಾರ ಬಳಸಿ, ಮಾಜಿ ಸುಬೇದಾರ್ ಮೇಜರ್ ನೀರಜ್ ಚೋಪ್ರಾಗೆ ಲೆಫ್ಟಿನೆಂಟ್ ಕರ್ನಲ್ ಪದವಿ ನೀಡಲಾಗಿದೆ.”
ನೀರಜ್ ಚೋಪ್ರಾ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದರು. ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನ, ಗ್ರೆನಾಡಾದ ಆಂಡರ್ಸನ್ ಪೀಟರ್ಸ್ ಕಂಚು ಗೆದ್ದರು.
ನೀರಜ್ ಚೋಪ್ರಾ 2016ರಲ್ಲಿ ಸೇನೆಗೆ ಸೇರಿದರು. ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುತ್ತಿದ್ದಂತೆಯೇ 2021ರಲ್ಲಿ ಸುಬೇದಾರ್ ಆಗಿ, 2022ರಲ್ಲಿ ಸುಬೇದಾರ್ ಮೇಜರ್ ಆಗಿ ಬಡ್ತಿ ಪಡೆದರು.
2025ರಲ್ಲಿ ನೀರಜ್ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ NC ಕ್ಲಾಸಿಕ್ ಮುಂದೂಡಲ್ಪಟ್ಟಿದೆ. ಮೇ 23ರಂದು ಪೋಲೆಂಡ್‌ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಚಿನ್ನದ ಹುಡಗ ಎಂದು ಕರೆಯಲ್ಪಡುವ ನೀರಜ್ ಚೋಪ್ರಾ 2025ರ ಸೀಸನ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದರು. ಮೇ 16ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

