- Home
- Special
- Expired Lotion Re Uses: ಎಕ್ಸ್‌ಪೈರ್ ಆದ ಲೋಶನ್ ಬಿಸಾಕಬೇಡಿ; ಎಂಥೆಂಥ ಪ್ರಯೋಜನ ಇದೆ ಅನ್ನೋದೇ ಗೊತ್ತಿಲ್ಲ
Expired Lotion Re Uses: ಎಕ್ಸ್‌ಪೈರ್ ಆದ ಲೋಶನ್ ಬಿಸಾಕಬೇಡಿ; ಎಂಥೆಂಥ ಪ್ರಯೋಜನ ಇದೆ ಅನ್ನೋದೇ ಗೊತ್ತಿಲ್ಲ
Body Lotion: ಎಕ್ಸ್‌ಪೈರ್ ಆದ ಲೋಷನ್ ಅನ್ನು ಕಸಕ್ಕೆ ಹಾಕುವ ಬದಲು, ಅದರಿಂದ ಹಲವು ಸ್ಮಾರ್ಟ್ ಕೆಲಸಗಳನ್ನು ಮಾಡಬಹುದು. ಫರ್ನಿಚರ್ ಪಾಲಿಶ್, ಲೆದರ್ ವಸ್ತುಗಳ ಕ್ಲೀನಿಂಗ್, ಜಿಪ್ ಸರಿಪಡಿಸುವುದು ಮತ್ತು ಬಾಗಿಲಿನ ಸದ್ದು ನಿಲ್ಲಿಸಲು ಇದು ಸೂಪರ್ ಐಡಿಯಾ. ಇದರಿಂದ ವಸ್ತುಗಳು ವೇಸ್ಟ್ ಆಗುವುದೂ ತಪ್ಪುತ್ತದೆ.

Expire ಆದ ಲೋಶನ್ ಎಸೆಯೋದು ಬೇಡ!
ಸಾಮಾನ್ಯವಾಗಿ ನಾವೆಲ್ಲರೂ ಲೋಷನ್‌ನ ದೊಡ್ಡ ಬಾಟಲಿಗಳನ್ನೇ ಖರೀದಿಸುತ್ತೇವೆ. ಯಾಕೆಂದರೆ ಚಳಿ ಇರಲಿ, ಬೇಸಿಗೆ ಇರಲಿ, ಕೈ-ಕಾಲುಗಳಿಗೆ ಲೋಷನ್ ಬೇಕೇಬೇಕು. 'ಒಂದು ಖರೀದಿಸಿದರೆ ಇನ್ನೊಂದು ಫ್ರೀ' (Buy One, Get One Free) ಅಂತ ಆಫರ್ ಕಂಡಾಗಂತೂ, ಆನ್‌ಲೈನ್ ಅಥವಾ ಮಾಲ್‌ನಲ್ಲಿ ಖುಷಿಯಿಂದ ಎರಡು ಬಾಟಲಿಗಳನ್ನು ತಂದುಬಿಡುತ್ತೇವೆ. ಆದರೆ, ಎಕ್ಸ್‌ಪೈರಿ ಡೇಟ್ ನೋಡೋದನ್ನೇ ಮರೆತುಬಿಡುತ್ತೇವೆ. ಹೀಗೆ ಹಣ ಉಳಿಸುವ ಸಣ್ಣ ಪ್ರಯತ್ನದಿಂದ ಕೊನೆಗೆ ನಷ್ಟವೇ ಹೆಚ್ಚು.
ಎಕ್ಸ್‌ಪೈರ್ ಆದ ಲೋಷನ್ ಬಳಸಿದರೆ ಅಲರ್ಜಿ, ತುರಿಕೆ, ದದ್ದುಗಳು ಅಥವಾ ಮೊಡವೆಗಳಂತಹ ಚರ್ಮದ ಸಮಸ್ಯೆಗಳು ಬರಬಹುದು. ಆದರೆ, ಇಡೀ ಲೋಷನ್ ಬಾಟಲಿಯನ್ನು ಹಾಗೆಯೇ ಎಸೆಯುವ ಬದಲು, ಅದನ್ನು ಬೇರೆ ರೀತಿಯಲ್ಲಿ ಬಳಸಬಹುದು.
ಫರ್ನಿಚರ್‌ಗಳನ್ನು ಪಾಲಿಶ್ ಮಾಡಿ
ನಿಮ್ಮ ಮರದ ಫರ್ನಿಚರ್‌ಗಳನ್ನು ಕ್ಲೀನ್ ಮಾಡಲು ನೀವು ಲೋಷನ್ ಬಳಸಬಹುದು. ಲೋಷನ್‌ನ ಕ್ರೀಮಿ ಗುಣವು ಮರದ ಮೇಲೆ ಒಂದು ರಕ್ಷಣಾತ್ಮಕ ಪದರವನ್ನು ಸೃಷ್ಟಿಸುತ್ತದೆ. ಇದರಿಂದ ಫರ್ನಿಚರ್‌ಗೆ ನ್ಯಾಚುರಲ್ ಹೊಳಪು ಬರುತ್ತದೆ ಮತ್ತು ಚೆನ್ನಾಗಿ ಕ್ಲೀನ್ ಕೂಡ ಆಗುತ್ತದೆ. ಆದರೆ, ನೆನಪಿಡಿ, ಲೋಷನ್ ಅನ್ನು ಹೆಚ್ಚು ಹಚ್ಚಬೇಡಿ, ಯಾಕೆಂದರೆ ಅದು ಜಿಡ್ಡು ಜಿಡ್ಡಾಗಬಹುದು.
ಲೆದರ್ ವಸ್ತುಗಳನ್ನು ಕ್ಲೀನ್ ಮಾಡಲು
ಎಕ್ಸ್‌ಪೈರ್ ಆದ ಲೋಷನ್ ಬಳಸಿ ಲೆದರ್ ವಸ್ತುಗಳನ್ನು ಸ್ವಚ್ಛಗೊಳಿಸಬಹುದು ಮತ್ತು ಮೃದುವಾಗಿಸಬಹುದು. ಲೋಷನ್‌ನಲ್ಲಿರುವ ತೇವಾಂಶವು ಲೆದರ್‌ಗೆ ಹೊಳಪು ನೀಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಲೆದರ್ ಶೂ, ಸ್ಯಾಂಡಲ್, ಹೀಲ್ಸ್ ಮತ್ತು ಬ್ಯಾಗ್‌ಗಳನ್ನು ಪಾಲಿಶ್ ಮಾಡಲು ಕೂಡ ಇದನ್ನು ಬಳಸಬಹುದು. ಇದರಿಂದ ಹೆಚ್ಚು ಶ್ರಮವಿಲ್ಲದೆ ಲೆದರ್ ವಸ್ತುಗಳು ಕ್ಲೀನ್ ಮತ್ತು ಶೈನಿಂಗ್ ಆಗಿ ಕಾಣುತ್ತವೆ.
ಜಿಪ್ ಸರಿಪಡಿಸಲು
ನಿಮ್ಮ ಬ್ಯಾಗ್ ಅಥವಾ ಬಟ್ಟೆಗಳ ಜಿಪ್ ಸ್ಟಕ್ ಆಗಿದ್ದರೆ, ಅದನ್ನು ಸರಿಪಡಿಸಲು ಲೋಷನ್ ಸಹಾಯ ಮಾಡುತ್ತದೆ. ಸಿಕ್ಕಿಹಾಕಿಕೊಂಡ ಜಿಪ್ ಮೇಲೆ ಸ್ವಲ್ಪ ಲೋಷನ್ ಹಚ್ಚಿ. ಆದರೆ, ಲೋಷನ್ ಬಟ್ಟೆಯ ಮೇಲೆ ಬೀಳದಂತೆ ಎಚ್ಚರ ವಹಿಸಿ.
ಬಾಗಿಲು ಕ್ಲೀನ್ ಮಾಡಿ
ಬಾಗಿಲುಗಳ ಕೀಲುಗಳು ಅಥವಾ ಚಿಲಕಗಳು ಸ್ಟಕ್ ಆದಾಗ ಅಥವಾ ಕೀಚ್ ಕೀಚ್ ಅಂತ ಸದ್ದು ಮಾಡುತ್ತಿದ್ದರೆ, ಅಲ್ಲೂ ಕೂಡ ನೀವು ಲೋಷನ್ ಬಳಸಬಹುದು. ಇದು ಗ್ರೀಸ್‌ನಂತೆ ಕೆಲಸ ಮಾಡಿ ಸದ್ದು ನಿಲ್ಲಿಸುತ್ತದೆ.

