ಮಾರುಕಟ್ಟೆಯಿಂದ ತರುವ ಶುಂಠಿಗಿಂತ ಮನೆಯಲ್ಲೇ ಬೆಳೆದ ಶುಂಠಿ ಹೆಚ್ಚು ತಾಜಾ ಮತ್ತು ಪರಿಮಳಯುಕ್ತವಾಗಿರುತ್ತದೆ. ಕನಿಷ್ಠ ಜಾಗದಲ್ಲಿ, ಸಣ್ಣ ಮಣ್ಣಿನ ಪಾಟ್‌ನಲ್ಲಿ ಶುಂಠಿ ಬೆಳೆಯುವುದು ಹೇಗೆ ಎಂದು ತಿಳಿಯೋಣ.
kitchen Apr 09 2026
Author: Sathish Kumar KH Image Credits:instagram
Kannada
ಸರಿಯಾದ ಶುಂಠಿಯನ್ನು ಆರಿಸಿ
ನಾಟಿ ಮಾಡಲು ಸಣ್ಣ ಮೊಳಕೆ ಅಥವಾ 'ಕಣ್ಣುಗಳು' (Buds) ಇರುವ ಶುಂಠಿಯನ್ನು ಆರಿಸಿ. ತುಂಬಾ ಹಳೆಯದಾದ ಅಥವಾ ಒಣಗಿದ ಶುಂಠಿ ಬೇಡ. ಮೊಳಕೆ ಇರುವ ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.
Image credits: instagram
Kannada
ಮಣ್ಣು ಮತ್ತು ಪಾಟ್ ತಯಾರಿ
ಶುಂಠಿ ಬೆಳೆಯಲು ಆಳಕ್ಕಿಂತ ಅಗಲವಾದ ಪಾಟ್ ಉತ್ತಮ. ಮಣ್ಣಿನೊಂದಿಗೆ ಸಮಪ್ರಮಾಣದಲ್ಲಿ ಮರಳು ಮತ್ತು ಸಾವಯವ ಗೊಬ್ಬರವನ್ನು (Compost) ಮಿಶ್ರಣ ಮಾಡಿ. ಮಣ್ಣು ಸಡಿಲವಾಗಿದ್ದರೆ ಶುಂಠಿ ಚೆನ್ನಾಗಿ ಬೆಳೆಯುತ್ತದೆ.
Image credits: instagram
Kannada
ನಾಟಿ ಮಾಡುವ ಸುಲಭ ಕ್ರಮ
ಸಿದ್ಧಪಡಿಸಿದ ಮಣ್ಣಿನಲ್ಲಿ 2-3 ಇಂಚು ಆಳದ ಗುಂಡಿ ಮಾಡಿ. ಶುಂಠಿಯ ಮೊಳಕೆ ಅಥವಾ ಕಣ್ಣುಗಳು ಮೇಲ್ಮುಖವಾಗಿರುವಂತೆ ಮಣ್ಣಿನಲ್ಲಿ ಹೂಳಿ. ಅದರ ಮೇಲೆ ತೆಳುವಾಗಿ ಮಣ್ಣು ಹರಡಿ.
Image credits: Getty
Kannada
ಆರೈಕೆ ಮತ್ತು ನೀರಿನ ನಿರ್ವಹಣೆ
ಶುಂಠಿ ಗಿಡಕ್ಕೆ ಅತಿಯಾದ ನೀರು ಹಾಕಬೇಡಿ, ಮಣ್ಣು ತೇವಾಂಶದಿಂದ ಕೂಡಿದ್ದರೆ ಸಾಕು. ಈ ಗಿಡಕ್ಕೆ ನೇರ ಬಿಸಿಲಿಗಿಂತ ಸ್ವಲ್ಪ ನೆರಳಿರುವ ಜಾಗ ಹೆಚ್ಚು ಇಷ್ಟ. ದಿನಕ್ಕೆ 2-3 ಗಂಟೆ ಬಿಸಿಲು ಬರುವ ಜಾಗದಲ್ಲಿ ಪಾಟ್ ಇಡಿ.
Image credits: instagram
Kannada
ತಾಜಾ ಶುಂಠಿ ಕೊಯ್ಲು ಮಾಡಿ
ಶುಂಠಿ ಪೂರ್ಣವಾಗಿ ಬೆಳೆಯಲು 8 ರಿಂದ 10 ತಿಂಗಳು ಬೇಕಾಗುತ್ತದೆ. ಗಿಡದ ಎಲೆಗಳು ಹಳದಿಯಾಗಿ ಒಣಗಲು ಶುರುವಾದಾಗ ಶುಂಠಿ ಸಿದ್ಧವಾಗಿದೆ ಎಂದರ್ಥ. ಈಗ ನೀವು ಮಣ್ಣನ್ನು ಅಗೆದು ತಾಜಾ ಶುಂಠಿಯನ್ನು ಹೊರತೆಗೆಯಬಹುದು!