Soap: ಸೋಪಿನ ಬಣ್ಣ ಯಾವುದೇ ಇರಲಿ, ಆದರೆ ನೊರೆ ಮಾತ್ರ ಬಿಳಿಯಾಗಿರಲು ಕಾರಣವೇನು?
ದಿನನಿತ್ಯ ಬಳಸುವ ವಸ್ತುಗಳಲ್ಲಿ ಸೋಪ್ ಮುಖ್ಯವಾದದ್ದು. ಬಟ್ಟೆ ಒಗೆಯಲು, ಸ್ನಾನ ಮಾಡಲು, ಪಾತ್ರೆ ತೊಳೆಯಲು ನಾವು ಪ್ರತಿಯೊಂದಕ್ಕೂ ವಿಭಿನ್ನ ಸೋಪ್‌ಗಳನ್ನು ಬಳಸುತ್ತೇವೆ, ಸೋಪಿನ ಬಣ್ಣಗಳು ಯಾವುದೇ ಇರಲಿ ಆದರೆ ನೊರೆ ಮಾತ್ರ ಬಿಳಿಯಾಗಿರುವುದು ಏಕೆ?

ಸೋಪಿನ ಬಣ್ಣ ಬಿಳಿಯಾಗಿರಲು ಕಾರಣವೇನು?
ದಿನನಿತ್ಯ ಬಳಸುವ ವಸ್ತುಗಳಲ್ಲಿ ಸೋಪ್ ಮುಖ್ಯವಾದದ್ದು. ಬಟ್ಟೆ ಒಗೆಯಲು, ಸ್ನಾನ ಮಾಡಲು, ಪಾತ್ರೆ ತೊಳೆಯಲು ನಾವು ಪ್ರತಿಯೊಂದಕ್ಕೂ ವಿಭಿನ್ನ ಸೋಪ್‌ಗಳನ್ನು ಬಳಸುತ್ತೇವೆ, ಸ್ನಾನ ಮಾಡಲು ಉಪಯೋಗಿಸುವ ಸಾಬೂನುಗಳಂತೂ ಒಂದೊಂದು ಬ್ರಾಂಡ್‌ನದ್ದು ಒಂದೊಂದು ಬಣ್ಣ, ಸಂತೂರು ಬ್ರಾಂಡ್ ಕೇಸರಿ, ಡವ್ ಬ್ರಾಂಡ್ ಬಿಳಿ, ಆಕಾಶ ನೀಲಿ, ಕೆಲವು ಕಪ್ಪುಗಳಲ್ಲಿವೆ.
ನೀಲಿ ಬಣ್ಣದ ಸೋಪಿನಲ್ಲಿ ನೀಲಿ ನೊರೆ ಯಾಕೆ ಬರೋಲ್ಲ?
ವಿಷಯ ಬಣ್ಣಗಳದ್ದಲ್ಲ, ಯಾವುದೇ ಬಣ್ಣದ ಸಾಬೂನು ಬಳಸಿದ್ರೂ ಅದರ ನೊರೆ ಬಿಳಿಯಾಗಿಯೇ ಇರುತ್ತದೆ ಯಾಕೆ? ಎಂದಾದರೂ ಯೋಚಿದ್ದೀರಾ? ಸಾಮಾನ್ಯವಾಗಿ ಡಿಟರ್ಜೆಂಟ್ ಸೋಪ್ ನೀಲಿ ಬಣ್ಣಗಳಲ್ಲಿರುತ್ತದೆ ಬಟ್ಟೆ ತೊಳೆಯುವಾಗ ನೊರೆಯು ನೀಲಿ ಬಣ್ಣದಲ್ಲಿರುವುದೇಕೆ?
ಹೌದಲ್ಲವಾ? ಈಗ ನಿಮ್ಮ ಮನಸಿಲ್ಲಿ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿರಬೇಕು. ಸೋಪ್ ಯಾವುದೇ ಬಣ್ಣದ್ದಾದರೂ ನೊರೆ ಮಾತ್ರ ಬಿಳಿಯಾಗಿಯೇ ಏಕೆ ಬರುತ್ತೆ? ಇಲ್ಲಿ ತಿಳಿಯೋಣ
ಸೋಪಿನ ನೊರೆ ಬಿಳಿಯಾಗಲು ಕಾರಣವೇನು?
ವಾಸ್ತವವಾಗಿ, ಯಾವುದೇ ವಸ್ತು ಬೆಳಗಿನ ಎಲ್ಲ ಬಣ್ಣಗಳನ್ನು ಹೀರಿಕೊಂಡಾಗ ಅದು ಕಪ್ಪಾಗಿ ಕಣ್ಣುತ್ತದೆ. ಅದೇ ಸಮಯದಲ್ಲಿ ಬೆಳಕಿನ ಎಲ್ಲ ಬಣ್ಣಗಳು ಪ್ರತಿಫಲಿಸಿದರೆ ಅಥವಾ ವಸ್ತುವಿನಿಂದ ಆ ಬಣ್ಣ ಹೀರಲ್ಪಡದಿದ್ದರೆ ಬಿಳಿಯಾಗಿ ಕಾಣುತ್ತದೆ.
ವಿಜ್ಞಾನ ಏನು ಹೇಳುತ್ತೆ?
ಸೋಪಿನ ಬಿಳಿ ನೊರೆ ಆ ಬಣ್ಣವನ್ನು ಹೊಂದಲು ಕಾರಣ ಅದು ಬೆಳಕನ್ನು ಚದುರಿಸುವ ವಿಧಾನ. ಬೆಳಕು ವಸ್ತುವನ್ನು ಹೊಡೆದಾಗ ಈ ಕೆಳಗಿನ ವಿಧಾನಗಳಲ್ಲಿ ಚದುರಿಹೋಗುತ್ತದೆ: ಅದನ್ನು ಹೀರಿಕೊಳ್ಳಬಹುದು, ಅದು ಬಂದ ದಿಕ್ಕಿನಲ್ಲಿ ಹಿಂತಿರುಗಿಸಬಹುದು ಅಥವಾ ಎಲ್ಲಾ ದಿಕ್ಕುಗಳಲ್ಲಿಯೂ ಚದುರಿಹೋಗಬಹುದು. ಆದರೆ ಸೋಪಿನ ಸುಡ್‌ಗಳ ವಿಷಯದಲ್ಲಿ, ಬೆಳಕು ಕೇವಲ ಒಂದು ದಿಕ್ಕಿನಲ್ಲಿ ಹಾದುಹೋಗುತ್ತದೆ ಅಥವಾ ಪುಟಿಯುತ್ತದೆ ಎಂದರ್ಥವಲ್ಲ
ಸೋಪ್‌ನ ಅಣುಗಳು ಬೆಳಕಿನ ಎಲ್ಲ ಬಣ್ಣಗಳನ್ನ ಪ್ರತಿಬಿಂಬಿಸುತ್ತವೆ. ಅದಕ್ಕಾಗಿಯೇ ಸೋಪ್ ಸಡ್‌ಗಳು ಅವುಗಳ ಬಣ್ಣಗಳು ಬದಲಾದರೂ ನೊರೆ ಮಾತ್ರ ಬಿಳಿಯಾಗಿರುತ್ತದೆ. ಫೋಮ್ ಗಾಜಿನಂತೆ ಕಾಣಲು ಇದೂ ಒಂದು ಕಾರಣ. ಅಂದರೆ ಬುರುಗು ಅಥವಾ ಗುಳ್ಳೆ ಏಳುವುದು ಗಮನಿಸಿದ್ದೀರಲ್ಲವ? ಬೆಳಕಿನ ಈ ಪ್ರತಿಫಲನಕ್ಕೆ ಕಾರಣವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
