- Home
- Technology
- Science
- From Gurukula to ISRO: ಗುರುಕುಲದಲ್ಲಿ ವೇದ ಕಲಿತು, ಮಂಗಳೂರು ಆಳ್ವಾಸ್ ಕಾಲೇಜಿನಲ್ಲಿ ಓದಿ, ISRO ಸೇರಲು ಯುವ ವಿಜ್ಞಾನಿ ರೆಡಿ!
From Gurukula to ISRO: ಗುರುಕುಲದಲ್ಲಿ ವೇದ ಕಲಿತು, ಮಂಗಳೂರು ಆಳ್ವಾಸ್ ಕಾಲೇಜಿನಲ್ಲಿ ಓದಿ, ISRO ಸೇರಲು ಯುವ ವಿಜ್ಞಾನಿ ರೆಡಿ!
ವೇದಗಳನ್ನು ಪಠಿಸುವ ಹುಡುಗ ಇಸ್ರೋ ಸೇರಲಿದ್ದಾನೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್‌ವೊಂದು ವೈರಲ್ ಆಗ್ತಿದೆ. ಹೌದು, ಗುರುಕುಲದಿಂದ ತರಬೇತಿ ಪಡೆದಿರುವ ಕಣ್ಣೂರಿನ ಗೋವಿಂದ ಕೃಷ್ಣನ್ ಎಂ ಎನ್ನುವ ಹುಡುಗ ಇಸ್ರೋದ ಮುಖ್ಯ ಕೇಂದ್ರವಾಗಿರುವ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಸೇರಲಿದ್ದಾರೆ.

ವೇದ ಕಲಿತಿರೋ ಹುಡುಗ ಇಂದು ವಿಜ್ಞಾನಿ!
ವೇದಗಳ ಬಗ್ಗೆ ಅಧ್ಯಯನ ಮಾಡಿರುವ ಗೋವಿಂದ ಈಗ ವಿಜ್ಞಾನಿಯಾಗ ಹೊರಟಿರೋದು ವಿಶೇಷವಾಗಿದೆ. ಈ ಬಗ್ಗೆ ಮನೋರಮಾ ನ್ಯೂಸ್ ಜೊತೆ ಕೃಷ್ಣ ಗೋವಿಂದ ಮಾತನಾಡಿ "ವೇದಗಳ ಅಧ್ಯಯನದಿಂದ ಕರಿಯರ್ ಅವಕಾಶಗಳು ಕಡಿಮೆ ಆಗುತ್ತವೆ ಎಂಬ ತಪ್ಪು ಕಲ್ಪನೆ ಇದೆ ಎನ್ನೋದು ನನಗೆ ಅರಿವಿದೆ. ಜನರು ಆಧ್ಯಾತ್ಮದ ಬಗ್ಗೆ ಯೋಚನೆ ಮಾಡ್ತಾರೆ, ಆದರೆ ವಿಜ್ಞಾನವನ್ನು ಮಿಕ್ಸ್ ಮಾಡೋದಿಲ್ಲ. ಆದರೆ ನಾನು ಇದು ಸಾಧ್ಯ ಎಂದು ಸಾಬೀತುಪಡಿಸಿದ್ದೇನೆ. ಬ್ಯಾಲೆನ್ಸ್ ಮಾಡೋದರಿಂದ, ಶ್ರದ್ಧೆಯಿಂದ ಇದನ್ನೆಲ್ಲ ಸಾಧಿಸಬಹುದು. ನನ್ನ ಬದುಕಿನ ಒಂದು ಹಂತದಲ್ಲಿ ವೇದಗಳನ್ನು ಕಲಿಯುತ್ತ, ಇನ್ನೊಮ್ಮೆ ವಿಜ್ಞಾನದ ಕಡೆಗೆ ಗಮನ ಕೊಟ್ಟಿದ್ದೆ” ಎಂದಿದ್ದಾರೆ.
ನಾಲ್ಕನೇ ತರಗತಿಯಲ್ಲೇ ಉಪನಯನ!
ಪಯ್ಯನ್ನುರ್‌ನಲ್ಲಿ ನಾಲ್ಕನೇ ತರಗತಿ ಕಲಿತು, ಅವರು 2011ರಲ್ಲಿ ಭ್ರಮಸ್ವಂ ಮಧಂ ಎಂಬ ತ್ರಿಶೂರದ ವೇದಿಕ್ ಸ್ಕೂಲ್‌ಗೆ ಜಾಯಿನ್ ಆದರು. ಅಲ್ಲಿ ಅವರು ಗುರುಕುಲ ಶಿಕ್ಷಣ ಪಡೆದರು. ಐದು ವರ್ಷಗಳ ಈ ಕೋರ್ಸ್‌ನ್ನು ನಾಲ್ಕು ವರ್ಷದಲ್ಲಿ ಕಲಿತರು. ಮಾಜಿ ಇಂಡಿಯಾ ನ್ಯಾವಿ ಅಧಿಕಾರಿ ಆಗಿರುವ ತಂದೆ ಹರೀಶ್‌ಕುಮಾರ್‌ಸಲಹೆಯಂತೆ ಗೋವಿಂದ ಅವರು ವೇದ ಅಧ್ಯಯನ ಮಾಡಿದರು. ನಾಲ್ಕನೇ ತರಗತಿಯಲ್ಲಿದ್ದಾಗ ಗೋವಿಂದ ಅವರಿಗೆ ಉಪನಯನ ಮಾಡಲಾಯ್ತು.
ಯಜುರ್ವೇದ ಕಲಿತರು!
"ನನಗೆ ಆರಂಭದಲ್ಲಿ ಅಪ್ಪ-ಅಮ್ಮನನ್ನು ಬಿಟ್ಟಿರೋದು ನಿಜಕ್ಕೂ ಕಷ್ಟ ಆಗಿತ್ತು. ನನ್ನ ಬ್ಯಾಚ್‌ನಲ್ಲಿ ಕೇವಲ 5 ವಿದ್ಯಾರ್ಥಿಗಳಿದ್ದರು. ನಾವು ಯಜುರ್ವೇದ ಆಯ್ಕೆ ಮಾಡಿಕೊಂಡೆವು. ಅದಕ್ಕೆ ಯಾವುದೇ ದೃಶ್ಯಪಾಠ ಇರಲಿಲ್ಲ, ಬುಕ್ ಇರಲಿಲ್ಲ. ನೇರವಾಗಿ ಗುರುಗಳು ಹೇಳಿಕೊಟ್ಟಿದ್ದನ್ನು ಕಲಿಯಬೇಕಿತ್ತು. ಆರಂಭದ ನಾಲ್ಕು ವರ್ಷ ಸರ್ಕಾರಿ ಶಾಲೆ ಸೇರಿದ್ದರೂ ಕೂಡ ಫೈನಲ್ ಎಕ್ಸಾಮ್ ಮಾತ್ರ ಬರೆದಿದ್ದರು” ಎಂದಿದ್ದಾರೆ.
ಮಂಗಳೂರು ಆಳ್ವಾಸ್ ಸೇರಿದ್ರು!
"ಬೆಳಗ್ಗೆ 5 ಗಂಟೆಗೆ ಎದ್ದು, ವೇದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕಿತ್ತು, ಅಲ್ಲಿ ಶ್ರದ್ಧೆ ಮುಖ್ಯ ಆಗಿತ್ತು, ಎಲ್ಲವೂ ಶೆಡ್ಯೂಲ್ ಆಗಿತ್ತು. ಅಲ್ಲಿ ಮಟಿರಿಯಲ್ ವಸ್ತುಗಳಿಲ್ಲ. ಎಲ್ಲವನ್ನು ಕೇಳಿಸಿಕೊಂಡು, ನೆನಪಿನಲ್ಲಿ ಇಟ್ಟುಕೊಳ್ಳಬೇಕಿತ್ತು" ಎಂದು ಅವರು ಹೇಳಿದ್ದಾರೆ. ಹೈಸ್ಕೂಲ್ ಶಿಕ್ಷಣಕ್ಕೆ ಅವರು ರೆಗ್ಯೂಲರ್ ಸ್ಕೂಲ್ ಆಯ್ಕೆ ಮಾಡಿಕೊಂಡರೂ ಕೂಡ ಅವರು ಯಾವುದನ್ನೂ ಕೂಡ ಬಿಡದೆ ಬ್ಯಾಲೆನ್ ಮಾಡಿದರು. ಹತ್ತನೇ ಕ್ಲಾಸ್‌ನಲ್ಲಿ ಮುಗಿಯುತ್ತಿದ್ದಂತೆ, ಅವರು ಮಂಡಗಳೂರಿನಲ್ಲಿರುವ ಮೂಡುಬಿದಿರಿಯ ಆಳ್ವಾಸ್ ಕಾಲೇಜು ಸೇರಿದರು. JEE ಮೇನ್ ಹಾಗೂ ಅಡ್ವಾನ್ಸ್‌ಡ್ ಎಕ್ಸಾಮ್ ಕ್ಲಿಯರ್ ಮಾಡಿದರು.
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಸೇರಿದ್ರು!
ಆಮೇಲೆ ವಲೈಮಾಲಾದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸಾಯಿನ್ಸ್ & ಟೆಕ್ನೋಲಜಿ ಪ್ರವೇಶ ಮಾಡಿದರು. 2021ರಲ್ಲಿ ಬಿಟೆಕ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಪ್ರೋಗ್ರಾಮ್ ಜಾಯಿನ್ ಆದರು.
ನನ್ನ ಉಳಿದ ಬ್ಯಾಚ್‌ಮೇಟ್‌ಗಳು ಪೌರೋಹಿತರಾದ್ರು..
“ನಾನು ಅಕಾಡೆಮಿಕ್ ಕರಿಯರ್‌ನಲ್ಲಿ ಬ್ಯುಸಿ ಇದ್ದರೂ ಕೂಡ ದಿನದಲ್ಲಿ ಒಂದು ಗಂಟೆ ವೇದಾಧ್ಯಯನಕ್ಕೆ ಮೀಸಲಿಡುತ್ತಿದ್ದೆ. ಇದೊಂದು ಥರ ಜಿಮ್‌ಗೆ ಹೋದಂತೆ. ಜಿಮ್‌ನಲ್ಲಿ ಮಸಲ್ ಸ್ಟ್ರೆಂಥ್ ಎಂದು ವರ್ಕ್‌ಮಾಡೋ ಥರ ಇಲ್ಲಿ ನಾನು ಮಾನಸಿಕ ಸ್ಪಷ್ಟನೆ, ಏಕಾಗ್ರತೆ, ನೆನಪಿನ ಶಕ್ತಿ ಕಡೆಗೆ ಫೋಕಸ್ ಮಾಡ್ತಿದ್ದೆ. ಗುರುಕುಲದಲ್ಲಿ ಉಳಿದ ನನ್ನ ಬ್ಯಾಚ್‌ಮೇಟ್‌ಗಳು ಪೌರೋಹಿತ್ಯ ವೃತ್ತಿ ಮಾಡುತ್ತಿದ್ದಾರೆ. ಆದರೆ ನಾನು ಮಾತ್ರ ಬೇರೆ ಹಾದಿ ಹಿಡಿದೆ. ಗಣಪತಿ ಹೋಮ ಮುಂತಾದ ಬೇಸಿಕ್ ಪೂಜೆಗಳ ಬಗ್ಗೆ ನನಗೆ ಅರಿವಿದೆ” ಎಂದಿದ್ದಾರೆ.
ಮಕ್ಕಳಿಗೆ ಹೇಳಿಕೊಡಬೇಕು!
ICRB ಸಂದರ್ಶನದಲ್ಲಿ ಆಯ್ಕೆ ಆದಬಳಿಕ ಅವರು ಇಸ್ರೋಗೆ ಅಧಿಕೃತವಾಗಿ ಜಾಯಿನ್ ಆಗಲಿದ್ದಾರೆ. "ಇಸ್ರೋಗೆ ಜಾಯಿನ್ ಆದ್ಮೇಲೆ ನನಗೆ ಎಷ್ಟು ಗಂಟೆ ಸಮಯ ಸಿಗತ್ತೆ ಅಂತ ಗೊತ್ತಿಲ್ಲ. ಆದರೆ ದಿನದಲ್ಲಿ ಒಂದು ಅಥವಾ ಎರಡು ಗಂಟೆ ವೇದಗಳ ಕಡೆಗೆ ಗಮನ ಕೊಡುವ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ನಾನು ಕಲಿತಿದ್ದನ್ನು ಮಕ್ಕಳಿಗೆ ಹೇಳಿಕೊಡಬೇಕು.ವೇದಗಳನ್ನು ಕಲಿಯೋದರಲ್ಲಿ ಯಾವುದೇ ನಷ್ಟವಿಲ್ಲ, ಅವು ನಮಗೆ ಶ್ರದ್ಧೆ, ಏಕಾಗ್ರತೆ, ಶಕ್ತಿ ಕೊಡುತ್ತವೆ" ಎಂದಿದ್ದಾರೆ.