- Home
- Technology
- Science
- ವಿಜ್ಞಾನಕ್ಕೇ ಸವಾಲು ಗರುಡ ಪಕ್ಷಿಯ ಕಣ್ಣುಗಳು: ವಿಡಿಯೋ ಮೂಲಕ ನಂಬಲಸಾಧ್ಯ ನಿಗೂಢ ಸತ್ಯ ತೆರೆದಿಟ್ಟ ವಿದೇಶಿಗರು!
ವಿಜ್ಞಾನಕ್ಕೇ ಸವಾಲು ಗರುಡ ಪಕ್ಷಿಯ ಕಣ್ಣುಗಳು: ವಿಡಿಯೋ ಮೂಲಕ ನಂಬಲಸಾಧ್ಯ ನಿಗೂಢ ಸತ್ಯ ತೆರೆದಿಟ್ಟ ವಿದೇಶಿಗರು!
ಹಿಂದೂ ಪುರಾಣಗಳಲ್ಲಿ ವಿಷ್ಣುವಿನ ವಾಹನವಾಗಿ ಪೂಜಿಸಲ್ಪಡುವ ಗರುಡ ಪಕ್ಷಿಯು ಕೇವಲ ದೈವಿಕ ಶಕ್ತಿಯ ಸಂಕೇತವಲ್ಲ. ಇದರ ಕಣ್ಣುಗಳ ರಚನೆ ವಿಜ್ಞಾನಕ್ಕೇ ಸವಾಲಾಗಿದ್ದು, ಕಣ್ಣು ಮುಚ್ಚದೆಯೇ ಸ್ವಚ್ಛಗೊಳಿಸುವ ವಿಶಿಷ್ಟ ಪೊರೆಯ ರಹಸ್ಯವನ್ನು ವಿಡಿಯೋವೊಂದು ಬಯಲು ಮಾಡಿದೆ.

ದೈವಿಕ ಪಕ್ಷಿ
ಗರುಡ ಪಕ್ಷಿ ಹಿಂದೂಗಳು ಮಾತ್ರವಲ್ಲದೇ ಬೌದ್ಧ ಮತ್ತು ಜೈನ ಪುರಾಣಗಳಲ್ಲಿ ಬರುವ ದೈವಿಕ ಪಕ್ಷಯಾಗಿದೆ. ಇದು ಪಕ್ಷಿರಾಜ ಮತ್ತು ವಿಷ್ಣುವಿನ ವಾಹನವಾಗಿರುವ ಕಾರಣ ಇದನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪೂಜಿಸಲಾಗುತ್ತದೆ. ಗರುಡವು ಶಕ್ತಿ, ವೇಗ ಮತ್ತು ಭಕ್ತಿಯ ಸಂಕೇತವೂ ಆಗಿದೆ.
ಪಕ್ಷಿರಾಜ ಎಂದು ಬಿರುದು
ಪಕ್ಷಿರಾಜ ಎಂದು ಬಿರುದು ಹೊತ್ತಿರುವ ಗರುಡನ ಬಗ್ಗೆ ಪೌರಾಣಿಕ ಕಥೆ ಹೇಳುವುದಾದರೆ, ಕಶ್ಯಪ ಋಷಿಯ ಮಗ ಈ ಗರುಡ. ತನ್ನ ತಾಯಿ ವಿನತೆಯನ್ನು ನಾಗರಾಜನ ದಾಸ್ಯದಿಂದ ವಿಮೋಚನೆಗೊಳಿಸಲು ಅಮೃತವನ್ನು ತರಲು ಸ್ವರ್ಗಕ್ಕೆ ಹೋಗಿ, ಅಮರತ್ವದ ಪಾನೀಯವನ್ನು ತಂದು, ನಂತರ ವಿಷ್ಣುವಿಗೆ ತನ್ನ ಸೇವೆಯನ್ನು ಅರ್ಪಿಸಿ, ಅವನ ವಾಹನವಾದ ಎಂದು ಹೇಳಲಾಗುತ್ತದೆ.
ವಿಷ್ಣುವಿನ ಧ್ವಜದ ಲಾಂಛನ
ಇದೇ ಕಾರಣಕ್ಕೆ, ವಿಷ್ಣುವಿನ ಧ್ವಜದ ಲಾಂಛನವಾಗಿ ಗರುಡನ ಚಿತ್ರವನ್ನು ಬಳಸಲಾಗುತ್ತದೆ. ಶಿಲ್ಪಕಲೆಯಲ್ಲಿ ಗರುಡನ ಆಕೃತಿ ಮನುಷ್ಯನಂತಿದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿರುತ್ತದೆ. ಇಂಥ ವಿಗ್ರಹಗಳನ್ನು ಹಲವು ವೈಷ್ಣವ ದೇವಾಲಯಗಳಲ್ಲಿ ಕಾಣಬಹುದು.
ವಿಜ್ಞಾನಕ್ಕೇ ಸವಾಲು
ಪುರಾಣ ಯಾರಿಗೆ ಬೇಕ್ರೀ... ಏನೇನೋ ಹೇಳುತ್ತಾರೆ ಎನ್ನುವವರು ಕೆಲವರು. ಅದನ್ನು ಬದಿಗಿಟ್ಟು ಈಗ ವಿಜ್ಞಾನಕ್ಕೆ ಬರುವುದಾದರೆ, ಗರುಡನ ಕಣ್ಣು ವಿಜ್ಞಾನಕ್ಕೇ ಸವಾಲು ಆಗಿದೆ. ಏಕೆಂದರೆ, ಈ ಗರುಡ ತನ್ನ ಕಣ್ಣುಗಳನ್ನು ನಾವು ಅಥವಾ ಬೇರೆ ಯಾವುದೇ ಜೀವಿ ಮುಚ್ಚಿದಂತೆ ಮುಚ್ಚುವುದಿಲ್ಲ. ಬದಲಿಗೆ, ಬೇರೊಂದು ಕಣ್ಣಿನ ಪೊರೆ ಬಂದು ಕಣ್ಣುಗಳನ್ನು ಸ್ವಚ್ಛಗೊಳಿಸಿ ಹೋಗುತ್ತವೆ! ಒಮ್ಮೊಮ್ಮೆ ಒಂದೊಂದೇ ಕಣ್ಣುಗಳು ಈ ವ್ಯವಸ್ಥೆ ಅಡಿ ಮುಚ್ಚುತ್ತವೆ.
ಮೂರನೆಯ ಕಣ್ಣು
ಆದ್ದರಿಂದ ಗರುಡನಿಗೆ ಮೂರನೇ ಕಣ್ಣು ಅಥವಾ ಇನ್ನೊಂದು ರೀತಿಯ ವ್ಯವಸ್ಥೆ ಇದೆ. ಬರಿ ಶಬ್ದಗಳಲ್ಲಿ ಅಥವಾ ವಾಕ್ಯಗಳಲ್ಲಿ ಇದನ್ನು ಬಣ್ಣಿಸಿದರೆ ತಿಳಿಯದೇ ಹೋಗಬಹುದು ಅಥವಾ ಇದೊಂದು ಕಟ್ಟುಕಥೆ, ಕಲ್ಪನೆ ಎನ್ನಲೂಬಹುದು. ಏಕೆಂದರೆ, ಪುರಾಣ, ಇತಿಹಾಸ, ಧಾರ್ಮಿಕ ಭಾವನೆ ಏನೇ ಬಂದರೂ ಸಾಕ್ಷಿ ಬೇಡುವ ದೊಡ್ಡ ವರ್ಗವೇ ಇದೆ.
ಶೂಟಿಂಗ್ನಲ್ಲಿ ಕಂಡ ಅಚ್ಚರಿ
ಇದೀಗ ಇದಕ್ಕೆ ಸಾಕ್ಷಿ ಎನ್ನುವಂತೆ ವಿದೇಶಿಗರು ಮಾಡಿರುವ ಶೂಟಿಂಗ್ ಒಂದರಲ್ಲಿ ಅಚ್ಚರಿಯ ವಿಷಯ ರಿವೀಲ್ ಆಗಿದೆ. ಗರುಡ ಪಕ್ಷಿಯನ್ನು ಅತಿ ಹತ್ತಿರದಿಂದ ಈ ತಂಡ ವೀಕ್ಷಣೆ ಮಾಡಿ ಬಳಿಕ ಅದನ್ನು ಕ್ಲೋಸ್ ಅಪ್ನಲ್ಲಿ ತೋರಿಸಿದೆ. ಸಾಮಾನ್ಯವಾಗಿ ಗೂಗಲ್ ಸರ್ಚ್ ಮಾಡಿದಾಗ, ಗರುಡ ತನ್ನ ಕಣ್ಣುಗಳನ್ನು ಮುಚ್ಚುವುದಿಲ್ಲ, ಬದಲಿಗೆ ಅದಕ್ಕೆ ಪರ್ಯಾಯ ವ್ಯವಸ್ಥೆ ಇದೆ ಎಂದು ತಿಳಿಯುತ್ತದೆ. ಆದರೆ ಈ ಕೆಳಗೆ ಶೇರ್ ಮಾಡಲಾಗಿರುವ ವಿಡಿಯೋ ನೋಡಿದರೆ ಮಾತ್ರ ಅದರ ಅಸಲಿಯತ್ತು ಹಾಗೂ ನಿಸರ್ಗದ ವೈಚಿತ್ರ್ಯವನ್ನು ನೋಡಬಹುದಾಗಿದೆ.
ಅಲಿ ಅಸ್ಗರ್ ಎನ್ನುವವರು ಶೇರ್ ಮಾಡಿರುವ ವಿಡಿಯೋ ಇಲ್ಲಿದೆ:
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

