ರೀಲ್ಸ್ ಕ್ವೀನ್ ಅತ್ಮಹತ್ಯೆ, ರಮ್ಯಾ ಕನ್ನಡ ಕಿರಿಕ್....ಮೆಗಾ ಸ್ಟಾರ್ ಐಷಾರಾಮಿ ಕಾರು: ಏಪ್ರಿಲ್ ನ್ಯೂಸ್ ಹೀಗಿತ್ತು!
ಏಪ್ರಿಲ್ ತಿಂಗಳಿನಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ನ್ಯೂಸ್ಗಳಿತ್ತು. ತಿಂಗಳು ಕಿಕ್ ಸ್ಟಾರ್ಟ್ ಮಾಡಿದ್ದು ವೀಕೆಂಡ್ ವಿತ್ ರಮೇಶ್ ರಮ್ಯಾ ಕನ್ನಡ ಭಾಷೆ...ಆಮೇಲೆ ಏನೆಲ್ಲಾ ಅಯ್ತು ನೋಡಿ....
ವೀಕೆಂಡ್ ವಿತ್ ರಮೇಶ್ ಸೀಸನ್-5ರ ಮೊದಲ ಅತಿಥಿಯಾಗಿ ಮೊಹಕ ತಾರೆ ರಮ್ಯಾ ಆಗಮಿಸಿದ್ದರು. ರಮ್ಯಾ ಜೀವನ,ಸಿನಿಮಾ, ರಾಜಕೀಯ ಸೇರಿದಂತೆ ಅನೇಕ ಗೊತ್ತಿರದ ಸಂಗತಿಯಗಳು ವೀಕೆಂಡ್ ಟೆಂಟ್ನಲ್ಲಿ ಬಹಿರಂಗವಾಗಿದೆ. ಸಂಪೂರ್ಣ ಎಪಿಸೋಡ್ನಲ್ಲಿ ರಮ್ಯಾ ಹೆಚ್ಚಾಗಿ ಇಂಗ್ಲಿಷ್ ಮಾತನಾಡಿದ್ದಾರೆ ಎಂದು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ರಮ್ಯಾ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದರು. ಇದೀಗ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದರೆ. ಮೀಮ್ ಒಂದಕ್ಕೆ ಕಾಮೆಂಟ್ ಮಾಡಿರುವ ರಮ್ಯಾ ಮುಂದಿನ ಶೋನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಹೇಳಿದ್ದರು.
ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1ರ ಮೂಲಕ ಕನ್ನಡ ಕಿರುತೆರೆಗೆ ಪರಿಚಯವಾದ ನಟಿ ಅಕ್ಷತಾ ಕುಕ್ಕಿ ಮಾರ್ಚ್ 27ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಖಾಸಗಿ ಕಂಪನಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅವಿನಾಶ್ ಜೊತೆ ಅಕ್ಷತಾ ಫೆಬ್ರವರಿ ತಿಂಗಳಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಕಾಲಿವುಡ್ ಬ್ಯೂಟಿ ಸಾಯಿ ಪಲ್ಲವಿ ನಿಜ ಜೀವನದಲ್ಲಿ ಎಷ್ಟು ಸಿಂಪಲ್ ಅಗಿ ಕಾಣಿಸಿಕೊಳ್ಳುತ್ತಾರೆ ತೆರೆ ಮೇಲೂ ಅಷ್ಟೇ ಸಿಂಪಲ್ ಆಗಿರುತ್ತಾರೆ. ಕೆಲವರಿಗೆ ಮಚ್ಚೆ ಲಕ್ ತರುತ್ತೆ ಆದರೆ ಸಾಯಿ ಪಲ್ಲವಿಗೆ ಪಿಂಪಲ್ ಲಕ್ ತಂದುಕೊಟ್ಟಿದೆ. ನಿರ್ದೇಶಕರ ಒತ್ತಾಯಕ್ಕೆ ಮೇಕಪ್ ಹಾಕಿದ್ದರ..ಲುಕ್ ಟೆಸ್ಟ್ನಲ್ಲಿ ಚೆನ್ನಾಗಿ ಬಾರದ ಕಾರಣ ಮೇಕಪ್ ಬೇಡವೇ ಬೇಡ ಎಂದು ನಿರ್ಧರಿಸಿದರು. ಮೇಕಪ್ ಇಲ್ಲದೆ ನಾನು ಅಭಿನಯಿಸುತ್ತಿರುವೆ ಅಂದ್ರೆ ನನಗೆ ಮಾತ್ರವಲ್ಲ ನಮ್ಮ ನಿರ್ದೇಶಕರಿಗೂ ಒಪ್ಪಿಗೆ ಇದೆ ಎಂದು ಅರ್ಥ ಎಂದಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಚೆನ್ನೈನ ತಿರುವಳ್ಳೂರು ಜಿಲ್ಲೆಯ ಒಂಬತ್ತು ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಸುಮಾರು 70 ರೀಲ್ಗಳನ್ನು ಮಾಡಿ ಫೇಮಸ್ ಆಗಿದ್ದಳು.ರಾತ್ರಿಯಾದರೂ ಮಗಳು ಆಟವಾಡುತ್ತಿದ್ದುದನ್ನು ನೋಡಿ ಪೋಷಕರು ಬೈದಿದ್ದಾರೆ. ಇದು ಪ್ರತೀಕ್ಷಾಳ ನೋವಿಗೆ ಕಾರಣವಾಗಿದೆ ಎನ್ನಲಾಗಿತ್ತು.
ಬಹುಭಾಷಾ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದರು. ಅವರಿಗೆ ವಿಪರೀತ ಜ್ವರ ಮತ್ತು ಸುಸ್ತು ಎನ್ನಲಾಗಿತ್ತು. ವಿಪರೀತ ಜ್ವರ, ತುಂಬಾ ನೋವು ಮತ್ತು ದೌರ್ಬಲ್ಯ ನನ್ನನ್ನು ಕೊಲ್ಲುತ್ತಿದೆ. ಆದ್ರೆ ನಾನು ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ಆರೋಗ್ಯ ನಿರ್ಲಕ್ಷಿಸಬೇಡಿ ಎಂದು ಖುಷ್ಬೂ ಬರೆದುಕೊಂಡಿದ್ದರು.
ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು.ಏಪ್ರಿಲ್ 5ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರವೀನಾ ಟಂಡನ್ ಪ್ರಶಸ್ತಿ ಸ್ವೀಕರಿಸಿದರು.ರವೀನಾ ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ಪತಿ ಅನಿಲ್ ಥಡಾನಿ ಮತ್ತು ಮಕ್ಕಳು ಜೊತೆಯಲಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಮಾಳವಿಕಾ ಅವಿನಾಶ್ ತಮಗೆ ಮೈಗ್ರೇನ್ ಆಗಿ ಆಸ್ಪತ್ರೆಗೆ ದಾಖಲಾಗಿರುವ ಫೋಟೋ ಹಂಚಿಕೊಂಡಿದ್ದಾರೆ.ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಸೆಲ್ಫಿ ಹಂಚಿಕೊಂಡಿದ್ದಾರೆ. ಮಾಳವಿಕಾ ಮುಖ ಬದಲಾಗಿದೆ ನಾರ್ಮಲ್ ಆಗಿಲ್ಲ. 'ಮೈಗ್ರೇನ್ನ ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಎಲ್ಲಾ ಮತ್ತು ವಿವಿಧ ಪಾನಡೋಲ್ಗಳು, ನೆಪ್ರೊಸಿಮ್, ಸಾಂಪ್ರದಾಯಿಕ ಔಷಧ ಇತ್ಯಾದಿಗಳನ್ನು ಪಾಪಿಂಗ್ ಮಾಡುತ್ತಿರಿ. ಕೇವಲ ತಲೆನೋವು ಮಾತ್ರವಲ್ಲ. ಅಥವಾ ನೀವು ನನ್ನಂತೆಯೇ ಆಸ್ಪತ್ರೆಯಲ್ಲಿ ಕೊನೆಗೊಳ್ಳುತ್ತೀರಿ' ಎಂದು ಮಾಳವಿಕಾ ಬರೆದುಕೊಂಡಿದ್ದರು.
ಮೆಗಾ ಸ್ಟಾರ್ ಐಷಾರಾಮಿ ಕಾರು ಖರೀದಿಸಿದ್ದರು. 1.22 ಆನ್ ರೂಡ್ ಬೆಲೆ ತೋರಿಸುತ್ತಿರುವ ಕಪ್ಪು ಬಣ್ಣದ ಯೋಯೋಟಾ ವೆಲ್ಫೈರ್ ಕಾರನ್ನು ಇಂದು ಬರ ಮಾಡಿಕೊಂಡಿರು. ಕಾರಿಗೆ 1111 ಎನ್ನುವ ನಂಬರ್ ಬೋರ್ಡ್ನ ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈ ನಂಬರ್ ಬೋರ್ಡ್ಗೆ 5 ಲಕ್ಷ ರೂಪಾಯಿ ಎನ್ನಲಾಗಿತ್ತು.ದೂರು ಪ್ರಯಾಣ ಮಾಡಲು ಟೋಯೋಟಾ ವೆಲ್ಫೈರ್ ಅತ್ಯುತ್ತಮ ಕಾರಾಗಿದೆ.
ಸ್ಯಾಂಡಲ್ ವುಡ್ ನಟಿ ಟಗರು ಪುಟ್ಟಿ ಎಂದೇ ಖ್ಯಾತಿ ಗಳಿಸಿರುವ ಮಾನ್ವಿತಾ ಕಾಮತ್ ತಾಯಿ ಸುಜಾತಾ ಕಾಮತ್ ಅಗಲಿದರು. . ಅಮ್ಮನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ ಮಾನ್ವಿತಾ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ 'ಅವರು ಬಿಟ್ಟುಹೋದರು' ಎಂದು ಪೋಸ್ಟ್ ಶೇರ್ ಮಾಡಿದ್ದರು.