- Home
- Entertainment
- Sandalwood
- ವಿಮಾನ ನಿಲ್ದಾಣಗಳಲ್ಲಿ ಜಿಮ್ ಇಲ್ಲ ಎಂದು ರಶ್ಮಿಕಾ ಮಂದಣ್ಣ ಬೇಸರ; ಡವ್ ಮಾಡ್ಬೇಡ ಎಂದ ನೆಟ್ಟಿಗರು
ವಿಮಾನ ನಿಲ್ದಾಣಗಳಲ್ಲಿ ಜಿಮ್ ಇಲ್ಲ ಎಂದು ರಶ್ಮಿಕಾ ಮಂದಣ್ಣ ಬೇಸರ; ಡವ್ ಮಾಡ್ಬೇಡ ಎಂದ ನೆಟ್ಟಿಗರು
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಪದೇ ಪದೇ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ .....

ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತಮ್ಮ ಪರ್ಸನಲ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
'ಜನಪ್ರಿಯವಲ್ಲದ ಅಭಿಪ್ರಾಯ, ಯಾಕೆ ವಿಮಾನ ನಿಲ್ದಾಣಗಳಲ್ಲಿ ಜಿಮ್ ಇಲ್ಲ? ಸುಮಾರು ಎರಡುವರೆ ಗಂಟೆಗಳ ಕಾಲ ವಿಮಾನಕ್ಕೆ ಕಾಯುವ ವ್ಯಕ್ತಿ ನಾನು' ಎಂದು ರಶ್ಮಿಕಾ ಸಾರಾ ಲೀವೈನ್ ಎಂಬ ಖಾತೆಯಲ್ಲಿ ಅಪ್ಲೋಡ್ ಆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
'ಫ್ಲೈಟ್ ಏರಲು ಎಷ್ಟೆಲ್ಲಾ ಮೈಂಡ್ ರೆಡಿ ಮಾಡಿಕೊಂಡು ನಾನು ಬಂದಿರುವೆ ಆದರೆ ಸುಮ್ಮನೆ ಒಂದು ಜಾಗದಲ್ಲಿ ಕುಳಿತುಕೊಂಡು ಏನು ಯೋಚನೆ ಮಾಡಬೇಕು?' ಎಂದು ಬರೆಯಲಾಗಿದೆ.
ಈ ಫೋಸ್ಟ್‌ಗೆ 'ಈ ಪೋಸ್ಟ್‌ನಲ್ಲಿರುವುದು ಸತ್ಯ ಅಲ್ಲವೇ? ಒಂದು ವೇಳೆ ಜಿಮ್ ನಿರ್ಮಾಣ ಮಾಡಿದ್ದರೆ ನನಗೆ ತುಂಬಾ ಉಪಯೋಗವಾಗುತ್ತದೆ' ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಪೋಸ್ಟ್‌ನ ನಟಿ ಕಾಜಲ್ ಅಗರ್ವಾಲ್ ಶೇರ್ ಮಾಡಿಕೊಂಡು 'ನಾನು ಕೂಡ ಇದೇ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದೆ. ನನ್ನ ಹೆಚ್ಚಿನ ಸಮಯ ವೇಟಿಂಗ್‌ನಲ್ಲಿ ಹೋಗುತ್ತದೆ' ಎಂದು ಬರೆದಿದ್ದಾರೆ.
'ಎಲ್ಲರಿಗೂ ಇದೇ ಅಭಿಪ್ರಾಯವಿದ್ದರೆ ಖಂಡಿತ ಜಿಮ್ ನಿರ್ಮಾಣ ಮಾಡುತ್ತಾರೆ' ಎಂದು ರಶ್ಮಿಕಾ ಉತ್ತರಿಸಿದ್ದಾರೆ. ಈ ಹೇಳಕೆಯಿಂದ ಸಖತ್ ಟ್ರೋಲ್ ಆಗುತ್ತಿದ್ದಾರೆ.
ಬಾಲಿವುಡ್ ಸಿನಿಮಾ ಸಹಿ ಮಾಡಿದ ಮೇಲೆ ನೀವು ಫಿಟ್ನೆಸ್ ಫ್ರೀಕ್ ಆಗಿದ್ದು ಅಲ್ಲಿವರೆಗೂ ವಿಜಯ್ ದೇವರಕೊಂಡ ಹಿಂದೆ ಇದ್ದವರು ಸುಮ್ಮನೆ ಡವ್ ಮಾಡಬೇಡ ಎಂದು ಕಾಲೆಳೆದಿದ್ದಾರೆ.