- Home
- Entertainment
- Sandalwood
- Kannada Songs: ಈ ಜನಪ್ರಿಯ ಹಾಡುಗಳು ಕನ್ನಡ ಸಿನಿಮಾಗಳದ್ದೇ... ಆದ್ರೆ ಭಾಷೆ ಮಾತ್ರ ಬೇರೆ
Kannada Songs: ಈ ಜನಪ್ರಿಯ ಹಾಡುಗಳು ಕನ್ನಡ ಸಿನಿಮಾಗಳದ್ದೇ... ಆದ್ರೆ ಭಾಷೆ ಮಾತ್ರ ಬೇರೆ
ಇವು ಚಂದನವನದ ಜನಪ್ರಿಯ ಸಿನಿಮಾಗಳ, ಜನಪ್ರಿಯ ಹಾಡುಗಳು (popular songs). ಆದರೆ ಇದರಲ್ಲಿ ಬಳಕೆಯಾಗಿರೋದು ಮಾತ್ರ ಬೇರೆ ಭಾಷೆ. ಭಾಷೆ ಯಾವುದಾದ್ರೇನು? ಹಾಡು ನಮ್ಮದೇ ಹಾಗಾಗಿಯೇ ಜನರು ಇಂದಿಗೂ ಈ ಹಾಡುಗಳನ್ನು ಇಷ್ಟಪಟ್ಟು ಕೇಳ್ತಾರೆ. ಆ ಹಾಡುಗಳು ಯಾವುವೆಲ್ಲಾ ನೋಡೊಣ.

ಇವು ಚಂದನವನದ ಜನಪ್ರಿಯ ಸಿನಿಮಾಗಳ, ಜನಪ್ರಿಯ ಹಾಡುಗಳು (popular songs). ಆದರೆ ಇದರಲ್ಲಿ ಬಳಕೆಯಾಗಿರೋದು ಮಾತ್ರ ಬೇರೆ ಭಾಷೆ. ಭಾಷೆ ಯಾವುದಾದ್ರೇನು? ಹಾಡು ನಮ್ಮದೇ ಹಾಗಾಗಿಯೇ ಜನರು ಇಂದಿಗೂ ಈ ಹಾಡುಗಳನ್ನು ಇಷ್ಟಪಟ್ಟು ಕೇಳ್ತಾರೆ. ಆ ಹಾಡುಗಳು ಯಾವುವೆಲ್ಲಾ ನೋಡೊಣ.
ಡಾಲಿ ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ (popcorn monkey tiger) ಸಿನಿಮಾದ ಮಾದೇವಾ ಹಾಡು ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿದೆ. ಚರಣ್ ರಾಜ್ ಕಂಪೋಸ್ ಮಾಡಿರುವ, ರಿತ್ವಿಕ್ ಕೈಕಿಣಿ, ಹನುಮನ್’ಕಿಂಡ್, ಸಾಹಿತ್ಯ ಬರೆದಿರುವ, ಸಂಜಿತ್ ಹೆಗ್ಡೆ ಮತ್ತು ಹನುಮನ್’ಕಿಂಡ್ ಹಾಡಿರುವ ಈ ಹಾಡು ಯುವಜನರಲ್ಲಿ ಕ್ರೇಜ್ ಹುಟ್ಟಿಸಿತ್ತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಚಿಗುರಿದ ಕನಸು (chigurida kanasu) ಸಿನಿಮಾದ ಓ ಆಜಾರೆ ಹಾಡು ಕನ್ನಡ ಮತ್ತು ಹಿಂದಿ ಭಾಷೆಯ ಮಿಶ್ರಣದ ಹಾಡಾಗಿದೆ. ಜಯಂತ್ ಕಾಯ್ಕಿಣಿ ಲಿರಿಕ್ಸ್ ಬರೆದು, ವಿ ಮನೋಹರ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡನ್ನು ಉದಿತ್ ನಾರಾಯಣ್ ಮತ್ತು ಮಹಾಲಕ್ಷ್ಮಿ ಐಯ್ಯರ್ ಹಾಡಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ (Dr, Vishnuvardhan), ಸೌಂದರ್ಯ, ರಮೇಶ್ ಅರವಿಂದ್ ಅಭಿನಯದ ಆಪ್ತಮಿತ್ರ ಸಿನಿಮಾದ ರಾರಾ ಸರಸಕು ರಾರಾ ಹಾಡು ತೆಲುಗು ಭಾಷೆಯಲ್ಲಿದೆ. ಈ ಹಾಡನ್ನು ಗುರುಕಿರಣ್ ಕಂಪೋಸ್ ಮಾಡಿದ್ದು, ಗೋತುರಿ ಲಿರಿಕ್ಸ್ ಬರೆದಿದ್ದಾರೆ. ಈ ಸುಂದರವಾದ ಹಾಡನ್ನು ನಿತ್ಯಶ್ರೀ ಮಹಾದೇವನ್ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ.
ಡಾ ರಾಜ್ ಕುಮಾರ್ (Dr. Rajkumar) ನಟಿಸಿರುವ ಆಪರೇಷನ್ ಡೈಮಂಡ್ ರಾಕೇಟ್ ಸಿನಿಮಾದ ಇಫ್ ಯು ಕಮ್ ಟುಡೇ ಹಾಡನ್ನು ಸ್ವತಃ ರಾಜಕುಮಾರ್ ಹಾಡಿದ್ದು, ಸೂಪರ್ ಹಿಟ್ ಹಾಡು ಇದಾಗಿತ್ತು. ಈ ಹಾಡು ಇಂಗ್ಲಿಷ್ ನಲ್ಲಿದೆ. ಆ ಕಾಲಕ್ಕೆ ಹಾಡನ್ನು ಇಂಗ್ಲೀಷಲ್ಲಿ ಹಾಡೋದು ದೊಡ್ಡ ವಿಷಯವೇ ಸರಿ. ಜಿ.ಕೆ ವೆಂಕಟೇಶ್ ಕಂಪೋಸ್ ಮಾಡಿದ ಹಾಡಿಗೆ, ಚಿ. ಉದಯ್ ಶಂಕರ್ ಲಿರಿಕ್ಸ್ ಬರೆದಿದ್ದರು.
ರಿಷಭ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ (Kaantara)ವಾ ಪೊರ್ಲುಯ ಹಾಡು ಸಂಪೂರ್ಣವಾಗಿ ತುಳುವಿನಲ್ಲಿದೆ. ಈ ಹಾಡಿಗೆ ಶಶಿರಾಜ್ ಕಾವೂರ್ ಲಿರಿಕ್ಸ್ ಬರೆದಿದ್ದು, ಬಿ ಅಜನೀಶ್ ಲೋಕನಾಥ್ ಕಂಪೋಸ್ ಮಾಡಿದ್ದಾರೆ. ಹಾಗೂ ಅಜನೀಶ್ ಲೋಕನಾಥ್ ಹಾಗೂ ಮೈಮ್ ರಾಮದಾಸ್ ಅವರು ಹಾಡಿದ್ದಾರೆ.
ಕಿಚ್ಚ ಸುದೀಪ್ ನಟಿಸಿರುವ ಮೈ ಆಟೋಗ್ರಾಫ್ (My Autograph) ಸಿನಿಮಾದ ಮಲ್ಲೆ ಹುಡುಗಿ ಮನಸು ಬಂತಾ ಹಾಡು ಕನ್ನಡ ಮತ್ತು ಮಲಯಾಳಂ ಮಿಕ್ಸ್ ಆಗಿರುವಂತಹ ಹಾಡು. ಕೆ. ಕಲ್ಯಾಣ್ ಲಿರಿಕ್ಸ್ ಬರೆದು, ಭಾರಧ್ವಜ್ ಕಂಪೋಸ್ ಮಾಡಿರುವ ಹಾಡನ್ನು , ರಾಜೇಶ್ ಕೃಷ್ಣನ್ ಹಾಗೂ ರಶ್ಮಿ ಹಾಡಿದ್ದಾರೆ.
ಶಿವರಾಜ್ ಕುಮಾರ್ ಅಭಿನಯದ ಯುವರಾಜ ಸಿನಿಮಾದ ಲುಕ್ ಅಟ್ ಮೈ ಫೇಸ್ ಹಾಡು ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿದೆ. ಕೆ. ಕಲ್ಯಾಣ್ ಲಿರಿಕ್ಸ್ ಬರೆದಿರುವ ಹಾಗೂ ರಮಣ ಗೋಗುಲ, ಕಂಪೋಸ್ ಮಾಡಿ, ಹಾಡಿರುವ ಹಾಡು ಇದಾಗಿದೆ.