ಸೆ.2 ರಿಂದ ಜೀ5ನಲ್ಲಿ ಸುದೀಪ್ ನಟನೆಯ ವಿಕ್ರಾಂತ್ ರೋಣ!
ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೆ ಗುಡ್ ನ್ಯೂಸ್....ಸೆಪ್ಟೆಂಬರ್ 2ರಂದು ಗುಮ್ಮ ಬರ್ತಿದ್ದಾನೆ.....
ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾವನ್ನು ಸೆ.2ರಿಂದ ಜೀ5 ಓಟಿಟಿಯಲ್ಲಿ ನೋಡಬಹುದು. ಸುದೀಪ್ ಜನ್ಮದಿನದಂದೇ ಅವರ ಅಭಿಮಾನಿಗಳು ಈ ಚಿತ್ರವನ್ನು ಕಣ್ತುಂಬಿಸಿಕೊಳ್ಳಬಹುದು.
ಸದ್ಯಕ್ಕೆ ಕನ್ನಡ ವರ್ಶನ್ ಮಾತ್ರ ಸಿಗಲಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರ ಜು.28ಕ್ಕೆ ವಿಶ್ವಾದ್ಯಂತ ತೆರೆ ಕಂಡಿತ್ತು. ತಿಂಗಳ ಬಳಿಕ ಇದೀಗ ಓಟಿಟಿಯಲ್ಲಿ ಲಭ್ಯವಾಗಲಿದೆ.
ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫೆರ್ನಾಂಡಿಸ್, ಮಿಲನಾ ನಾಗರಾಜ್ ನಟಿಸಿದ್ದ ಈ ಚಿತ್ರವನ್ನು ಜಾಕ್ ಮಂಜುನಾಥ್ ನಿರ್ಮಿಸಿದ್ದರು.
ಕರ್ನಾಟಕದಲ್ಲಿ ವಿಕ್ರಾಂತ್ ರೋಣ ಸಿನಿಮಾ 325 ಸಿಂಗಲ್ ಸ್ಕ್ರೀನ್ ಹಾಗೂ 65 ಮಲ್ಟಿಫ್ಲೆಕ್ಸ್ ಸೇರಿದಂತೆ ಒಟ್ಟು 2500 ಪ್ರದರ್ಶನಗಳನ್ನು ಕಂಡಿದೆ.ಬೆಂಗಳೂರಿನಲ್ಲೆ ಸುಮಾರು 1200 ಶೋ ಆಗಿದೆ.
ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಆಗಿತ್ತು. ಈ ಲೆಕ್ಕಚಾರದ ಆಧಾರದ ಮೇಲೆ ಕರ್ನಾಟಕದಲ್ಲಿ ವಿಕ್ರಾಂತ್ ರೋಣ ಬರೋಬ್ಬರಿ 18 ರಿಂದ 21 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರವಾಗಿದೆ.
ಇನ್ನು ಬೇರೆ ಬೇರೆ ರಾಜ್ಯಗಳಲ್ಲಿಯೂ ವಿಕ್ರಾಂತ್ ರೋಣ ಉತ್ತಮ ಗಳಿಕೆ ಮಾಡಿರುವ ವರದಿಯಾಗಿದೆ. ಉತ್ತರ ಭಾರತದಲ್ಲಿ ಒಟ್ಟು 690 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಅಬ್ಬರಿಸಿದೆ. ಸುಮಾರು 2500ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.
ಬಾಲಿವುಡ್‌ನಲ್ಲಿ ಕಿಚ್ಚನ ಸಿನಿಮಾ ಬರೋಬ್ಬರಿ 8 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 350 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿದ್ದು 7 ರಿಂದ 8 ಕೋಟಿ ವಹಿವಾಟು ಮಾಡಿದೆ ಎನ್ನಲಾಗಿದೆ. ತಮಿಳು ನಾಡಿನಲ್ಲಿ 180 ಸ್ಕ್ರೀನ್ಸ್ ಗಳಲ್ಲಿ ತೆರೆಕಂಡ ಕಿಚ್ಚನ ಸಿನಿಮಾ 1 ರಿಂದ 2 ಕೋಟಿ ಕಲೆಕ್ಷನ್ ಮಾಡಲಾಗಿದೆ ಎನ್ನಲಾಗುತ್ತಿದೆ.