- Home
- Entertainment
- Sandalwood
- ವಿಜಯಲಕ್ಷ್ಮೀ ದರ್ಶನ್ ಹೊಸ ಫೋಟೊ ಶೂಟ್ : ಕೈಯಲ್ಲಿರುವ ದುಬಾರಿ ಪರ್ಸ್ ಮೇಲೆ ಫ್ಯಾನ್ಸ್ ಕಣ್ಣು
ವಿಜಯಲಕ್ಷ್ಮೀ ದರ್ಶನ್ ಹೊಸ ಫೋಟೊ ಶೂಟ್ : ಕೈಯಲ್ಲಿರುವ ದುಬಾರಿ ಪರ್ಸ್ ಮೇಲೆ ಫ್ಯಾನ್ಸ್ ಕಣ್ಣು
Vijayalakshmi Darshan: ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೊಸದಾಗಿ ಫೋಟೊ ಶೂಟ್ ಮಾಡಿಸಿದ್ದು, ನೇರಳೆ ಬಣ್ಣದ ಸೀರೆಯುಟ್ಟು, ಮುಡಿ ತುಂಬಾ ಮಲ್ಲಿಗೆ ಮುಡಿದು, ಕೈಯಲ್ಲಿ ದುಬಾರಿ ಪರ್ಸ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಸದ್ಯ ವಿಜಯಲಕ್ಷ್ಮೀ ಪರ್ಸ್ ಸದ್ದು ಮಾಡುತ್ತಿದೆ.

ವಿಜಯಲಕ್ಷ್ಮೀ ದರ್ಶನ್
ದರ್ಶನ್ ತೂಗುದೀಪ ಜೈಲಿಗೆ ಹೋದ ಬಳಿಕ ವಿಜಯಲಕ್ಷ್ಮೀ ಗಂಡನ ಸ್ಥಾನದಲ್ಲಿ ನಿಂತು, ಮನೆ, ವ್ಯವಹಾರ, ಕೋರ್ಟ್, ಕೇಸ್ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಈಗಂತೂ ವಿಜಯಲಕ್ಷ್ಮೀ ಡೆವಿಲ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಡೆವಿಲ್ ಸಿನಿಮಾ ಪ್ರಚಾರ
ದರ್ಶನ್ ತೂಗುದೀಪ್ ಮತ್ತು ರಚನಾ ರೈ ಅಭಿನಯದ ಡೆವಿಲ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಡಿಸೆಂಬರ್ 11ರಂದು ರಿಲೀಸ್ ಆಗಲಿದೆ. ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮೀ ಮುಂದೆ ನಿಂತು ಪ್ರಚಾರಕಾರ್ಯ ಮಾಡುತ್ತಿದ್ದಾರೆ. ಹಾಗೂ ದರ್ಶನ್ ಅಭಿಮಾನಿಗಳಿಗೆ ಭರವಸೆ ನೀಡುತ್ತಿದ್ದಾರೆ.
ಹೊಸ ಫೋಟೊ ಶೂಟ್
ಈ ಮಧ್ಯೆ ವಿಜಯಲಕ್ಷ್ಮೀ ಹೊಸ ಫೋಟೊ ಶೂಟ್ ಮಾಡಿಸಿದ್ದು ನೇರಳೆ ಸೀರೆಯುಟ್ಟು, ಮುಡಿ ತುಂಬಾ ಮಲ್ಲಿಗೆ ಮುಡಿದು ಮುದ್ದಾಗಿ ಕಾಣಿಸುತ್ತಿದ್ದಾರೆ. ಆದರೆ ಅವರ ಕೈಯಲ್ಲಿರುವ ದುಬಾರಿ ಸಬ್ಯಸಾಚಿ ಕ್ಲಚ್ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.
ಸೀರೆಯಲ್ಲಿ ಮಿಂಚಿದ ವಿಜಯಲಕ್ಷ್ಮೀ
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಚ್ಚಾಗಿ ಫೋಟೋಶೂಟ್‌ಗಳಲ್ಲಿ ಮಿಂಚುತ್ತಾರೆ. ಇದೀಗ ನೇರಳೆ ಸೀರೆಯಲ್ಲಿ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದು, ಫೋಟೊಗಳನ್ನು ಸೇರಿಸಿ, ವಿಡಿಯೋ ಮಾಡಿ ವಿಜಯಲಕ್ಷ್ಮೀ ಶೇರ್ ಮಾಡಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಕ್ಲಚ್ ಮೇಲೆ ಕಣ್ಣು
ಈ ಫೋಟೊ ಶೂಟಲ್ಲಿ ವಿಜಯಲಕ್ಷ್ಮಿ ಕೈಯಲ್ಲಿ ಇರುವ ಕಪ್ಪು ಬಣ್ಣದ ಅದರ ಮೇಲೆ ಹುಲಿಯ ಚಿತ್ರವಿರುವ ಕ್ಲಚ್ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಆದರೆ ಇದು ಅಂತಿತ್ತ ಕ್ಲಚ್ ಅಲ್ಲ, ದುಬಾರಿ ಕ್ಲಚ್ ಆಗಿದ್ದು, ಇದರ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ.
ಸಭ್ಯಸಾಚಿ ಕ್ಲಚ್
ಹೌದು, ವಿಜಯಲಕ್ಷ್ಮೀ ಕೈಯಲ್ಲಿರುವ ಈ ಕ್ಲಚ್ ಸಭ್ಯಸಾಚಿ ತಯಾರಿಸಿದಂತಹ ಕ್ಲಚ್ ಆಗಿದೆ. ಅದರ ಮೇಲೆ ಬೆಂಗಾಲ್ ಟೈಗರ್ ಚಿತ್ರವನ್ನು ಕೆತ್ತಲಾಗಿದೆ. ಈ ಕ್ಲಚ್ ಬೆಲೆ ಬರೋಬ್ಬರಿ 89ಸಾವಿರ ರೂಪಾಯಿಗಳಾಗಿವೆ.
₹89,500 ಬೆಲೆಬಾಳುವ ಕ್ಲಚ್
ಕಪ್ಪು ಬಣ್ಣದ ಈ ಕ್ಲಾಚ್ ಬೆಲೆ ₹89,500 ಆಗಿದೆ. ಇದು ಲೆದರ್ ಪರ್ಸ್ ಆಗಿದ್ದು, Black royal Bengal minaudiere clutch ಇದಾಗಿದೆ. ಇಂತಹ ದುಬಾರಿ ಕ್ಲಚ್ ಹಿಡಿದುಕೊಂಡು ವಿಜಯಲಕ್ಷ್ಮೀ ಪೋಸ್ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

