- Home
- Entertainment
- Sandalwood
- ಹಸಿರು ಸುಂದರಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮಿ… ಕಲಿಯುಗದ ದೇವತೆ ಅತ್ತಿಗೆ ಅಂತಿದ್ದಾರೆ ಫ್ಯಾನ್ಸ್
ಹಸಿರು ಸುಂದರಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮಿ… ಕಲಿಯುಗದ ದೇವತೆ ಅತ್ತಿಗೆ ಅಂತಿದ್ದಾರೆ ಫ್ಯಾನ್ಸ್
ಸ್ಯಾಂಡಲ್’ವುಡ್ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊ ಶೇರ್ ಮಾಡಿದ್ದು, ಅಭಿಮಾನಿಗಳು ಕಲಿಯುಗದ ದೇವತೆ ಅಂತಿದ್ದಾರೆ.

ನಟ ದರ್ಶನ್ ತೂಗುದೀಪ (Darshan Thoogudeepa) ಅವರ ಪತ್ನಿ ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕಳೆದ ಹಲವು ತಿಂಗಳಿಂದ ವಿಜಯಲಕ್ಷ್ಮಿ ತಮ್ಮ ಪತಿಯ ಕೊಲೆ ಕೇಸ್ ಪ್ರಕರಣದಲ್ಲಿ ಬ್ಯುಸಿಯಾಗಿದ್ದರು. ದರ್ಶನ್ ಬೇಲ್ ಮೇಲೆ ಬಿಡಿಸಲು ಕೋರ್ಟ್, ಮಂದಿರಗಳನ್ನು ಅಲೆದಿದ್ದ ವಿಜಯಲಕ್ಷ್ಮೀ ಇದೀಗ ದರ್ಶನ್ ಗೆ ರೆಗ್ಯುಲರ್ ಬೇಲ್ ಸಿಕ್ಕು ರಿಲೀಫ್ ಆಗಿದ್ದಾರೆ.
ವಿಜಯಲಕ್ಷ್ಮಿ (Vijayalakshmi Darshan) ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ಸದ್ಯ ಹೊಸದೊಂದು ಫೊಟೊವನ್ನು ಅವರು ಶೇರ್ ಮಾಡಿದ್ದು, ಫೋಟೊಗೆ ಸಿಕ್ಕಾಪಟ್ಟೆ ಕಾಮೆಂಟ್ ಗಳು ಬರುತ್ತಿವೆ.
ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮಿ ತಮ್ಮ ಮುದ್ದಿನ ನಾಯಿ ಮರಿಯನ್ನು ಹಿಡಿದು, ಮುದ್ದಾದ ಫೋಟೊ ಒಂದನ್ನು ಶೇರ್ ಮಾಡಿದ್ದರು. ದರ್ಶನ್ ಬಿಡುಗಡೆಯಾದ ಸಂಭ್ರಮದಲ್ಲಿ ಅವರು ಈ ಫೋಟೊ ಶೇರ್ ಮಾಡಿ ಸಂಭ್ರಮಿಸಿದ್ದರು. ಇದೀಗ ಮತ್ತೊಂದು ಫೋಟೊ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.
ಜಗಮಗಿಸುವ ಲೈಟ್ಸ್ ಗಳ ಮಧ್ಯೆ ಹಸಿರು ಡ್ರೆಸ್ ಧರಿಸಿ, ಹಸಿರು ಬ್ಯಾಗ್ ಹಿಡಿದು ವಿಜಯಲಕ್ಷ್ಮೀ ಪೋಸ್ ನೀಡಿದ್ದು, ಎರಡು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಎರಡು ಫೋಟೊಗಳಿಗೆ ಅಭಿಮಾನಿಗಳು ಪ್ರೀತಿಯಿಂದ ಕಾಮೆಂಟ್ ಮಾಡಿದ್ದು, ತಮ್ಮ ನೆಚ್ಚಿನ ಅತ್ತಿಗೆಯನ್ನು ಹಾಡಿ ಕೊಂಡಾಡಿದ್ದಾರೆ.
ಅತ್ತಿಗೆ ಸೂಪರ್, ಕ್ಯೂಟ್ ಅತ್ತಿಗೆ, ದೇವತೆ, ಅತ್ತಿಗೆ ನೀವು ಕಲಿಯುಗದ ದೇವತೆ, ನಮ್ಮ ಮನದ ದೇವತೆ, ಡಿ ಬಾಸ್ ಕ್ವೀನ್, ನೀವು ಯಾವಾಗ್ಲೂ ಖುಷಿಯಾಗಿರಿ, ನಿಜವಾದ ಪ್ರೀತಿಗೆ ಅರ್ಥವೇ ನೀವು ಎಂದು ಕಾಮೆಂಟ್ ಮಾಡುವ ಮೂಲಕ ವಿಜಯಲಕ್ಷ್ಮಿಯವರನ್ನು ಹೊಗಳಿದ್ದಾರೆ.
ಸದ್ಯ ವಿಜಯಲಕ್ಷ್ಮಿ ದರ್ಶನ್ ಜೊತೆ ಸಮಯ ಕಳೆಯುತ್ತಿದ್ದು, ದರ್ಶನ್ ಸಂಕ್ರಾಂತಿ ಹಬ್ಬವನ್ನು (Sankranti festival) ಕುಟುಂಬದ ಜೊತೆ ಆಚರಣೆ ಮಾಡಿದ್ದರು. ಮೈಸೂರಿನಲ್ಲಿ ಹಬ್ಬ ಮಾಡಿ ಸಂಭ್ರಮಿಸಿದ್ದರು. ಈಗ ಫ್ಯಾಮಿಲಿ ಬೆಂಗಳೂರಿನಲ್ಲಿದ್ದಾರೆ. ಸದ್ಯದಲ್ಲೇ ದರ್ಶನ್ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಸೂಚನೆಯೂ ಸಿಕ್ಕಿದೆ.