ಅಣ್ಣಮ್ಮ ದೇವಸ್ಥಾನಕ್ಕೆ ದುಬಾರಿ ಚೂಡಿದಾರ್ ಧರಿಸಿದ ವಿಜಯಲಕ್ಷ್ಮಿ
ಗ್ರಾಮದೇವತೆ ಅಣ್ಣಮ್ಮನ ಗುಡಿಯಲ್ಲಿ ವಿಶೇಷ ಪೂಜೆ ಅಲ್ಲಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ. ಅರಿಶಿಣ ಬಣ್ಣದ ಸೆಲ್ವಾರ್ ಸಿಕ್ಕಾಪಟ್ಟೆ ದುಬಾರಿ.

ಕನ್ನಡದ ನಟ ದರ್ಶನ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಗಂಡನನ್ನು ಹೇಗಾದರೂ ಮಾಡಿ ಹೊರ ಕರೆತರಬೇಕು ಎಂದು ಪತ್ನಿ ವಿಜಯಲಕ್ಷ್ಮಿ ಪಟ್ಟಿರುವ ಕಷ್ಟ ಅಷ್ಟಿಲ್ಲ.
ಪತಿ ದರ್ಶನ್ ಜೈಲು ಸೇರಿದ ದಿನದಿಂದ ವಿಜಯಲಕ್ಷ್ಮಿ ಫೈಟ್ ಮಾಡಲು ಶುರು ಮಾಡಿದರು. ಪ್ರತಿಷ್ಠಿತ ಲಾಯರ್‌ನ ಹಿಡಿದು ಪೇಪರ್ ಕೆಲಸ ಶುರು ಮಾಡಿಸಿಬಿಟ್ಟರು. ಇಲ್ಲಿ ಲಾಯರ್ ಸ್ಟ್ರಾಂಗ್ ಇದ್ರೆ ಸಾಲದು.
ದೈವ ಬಲ ಕೂಡ ಮುಖ್ಯ ಎಂದು ಪವರ್‌ಫುಲ್ ದೇವಸ್ಥಾನಗಳ ದರ್ಶನ ಮಾಡಲು ಶುರು ಮಾಡಿದರು. ಯಾವ ದೇವಸ್ಥಾನಕ್ಕೆ ಹೋದರೂ ಪೂಜೆ, ಅನ್ನದಾನ ಹೀಗೆ ಸಿಕ್ಕಾಪಟ್ಟೆ ವ್ರತ ದೇವರ ಪೂಜೆಯಲ್ಲಿ ವಿಜಿ ತೊಡಗಿಸಿಕೊಂಡರು.
ದರ್ಶನ ಹೊರ ಬರುತ್ತಿದ್ದಂತೆ ಹರಿಕೆ ಹೊತ್ತಿದ್ದ ಎಲ್ಲಾ ದೇವರ ದರ್ಶನ ಪಡೆದರು. ಎಲ್ಲಿ ಗಂಡ ಮತ್ತು ಮಗನನ್ನು ಕರೆದುಕೊಂಡು ಹೋಗಬೇಕು ಅಲ್ಲಿ ಅವರೊಟ್ಟಿಗೆ ಪೂಜೆ ಮುಗಿಸಿ ಬಂದಿದ್ದಾರೆ.
ಈಗ ಬೆಂಗಳೂರು ಗ್ರಾಮದೇವತೆ ಅಣ್ಣಮ್ಮನ ಗುಡಿ ತೆರಳಿ ಮಡಿಲು ತುಂಬಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅತ್ತಿಗೆ ದೇವತೆ ಕಣ್ರೀ ಎಷ್ಟು ಪೂಜೆ ದೇವರ ಅಂತ ಓಡಾಡುತ್ತಿದ್ದಾರೆ ಎಂದು ಜನರು ಮಾತನಾಡಲು ಶುರು ಮಾಡಿದರು.
ಅರಿಶಿಣ ಬಣ್ಣದ ಸೆಲ್ವಾರ್‌ನಲ್ಲಿ ವಿಜಯಲಕ್ಷ್ಮಿ ಕಾಣಿಸಿಕೊಂಡರು. ಅದಾದ ಕೆಲವೇ ಗಂಟೆಗಳಲ್ಲಿ ಅಕ್ಕ ಧರಿಸಿರುವ ಸೆಲ್ವಾರ್‌ನ ಬೆಲೆ ಎಷ್ಟು ಗೊತ್ತಾ? ಸಿಕ್ಕಾಪಟ್ಟೆ ದುಬಾರಿ ಎಂದು ಫೋಟೋ ವೈರಲ್ ಮಾಡಲು ಶುರು ಮಾಡಿದರು.
ವಿಜಯಲಕ್ಷ್ಮಿ ಧರಿಸಿರುವುದು ಮಿಸ್ರಿ ಬೈ ಮೇಘನಾ ನಾಯರ್ ಎಂಬ ಡಿಸೈನರ್ ಬ್ರ್ಯಾಂಡ್ ಆಗಿದ್ದು, ಇದರ ಬೆಲೆ 22,999 ರೂಪಾಯಿಗಳು. ನೋಡಲು ಸಿಂಪಲ್ ಲುಕ್ ಇದ್ದರು ಸಿಕ್ಕಾಪಟ್ಟೆ ಕಾಸ್ಲಿ.