Happy Birthday Chinna…. ಪತ್ನಿ ಹುಟ್ಟುಹಬ್ಬಕ್ಕೆ ವಿಜಯ ರಾಘವೇಂದ್ರ ಸ್ಪೆಷಲ್ ವಿಶ್
ಪತ್ನಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ವಿಜಯ ರಾಘವೇಂದ್ರ ಸ್ಪಂದನಾ ಫೋಟೊ ಶೇರ್ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಚಂದನವನದ ಚಿನ್ನಾರಿಮುತ್ತ ವಿಜಯ ರಾಘವೇಂದ್ರ (VIjay Raghavendra)ಅವರ ಪತ್ನಿ ಸ್ಪಂದನಾ ಅವರು ಹುಟ್ಟಿದ ದಿನದ ಹಿನ್ನೆಲೆಯಲ್ಲಿ ವಿಜಯ್ ಪತ್ನಿಯ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.
ವಿಜಯ್ ರಾಘವೇಂದ್ರ ತಮ್ಮ ಇನ್’ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿ Happy Birthday Chinna…ಎಂದು ಫೋಟೊದಲ್ಲಿ ಬರೆದುಕೊಂಡು, ಕ್ಯಾಪ್ಶನ್ ನಲ್ಲಿ ಎದೆಯ ತುಂಬ ನಿನ್ನ ನಗುವನೆ ಕಂಡು ನಗುವೆ ಎಂದೆಂದಿಗೂ, ನೋವೂ… ನಲಿವೂ… ಎಲ್ಲಾ… ಒಲವೂ…ನಿನ್ನಾ… ಮರೆಯಲಾರೇ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ ಕೂಡ ಮಾಡಿದ್ದು, ಅದರಲ್ಲಿ ಹೆಂಡ್ತಿ ಜೊತೆ ಮಾಡಿರುವಾ ರೀಲ್ಸ್ ಶೇರ್ ಮಾಡಿದ್ದಾರೆ. ಅದರಲ್ಲಿ ಮೆಹಬೂಬ ಮೆಹಬೂಬಾ ಹಾಡಿಗೆ ಇಬ್ಬರು ಮುದ್ದಾಗಿ ಆಕ್ಷನ್ ಮಾಡಿದ್ದಾರೆ. ಈ ರೀಲ್ಸ್ ಜೊತೆ ವಿಜಯ್ ಹಾಡು… ನಗು… ಸಂತಸ… ಪ್ರೀತಯ ಕಂಪನ…ನನ್ನ ಸ್ಪಂದನ!ಜನುಮ ದಿನದ ಪ್ರೀತಿಯ ಶುಭಾಷಯಗಳು ನನ್ ಚಿನ್ನ ಎಂದು ಬರೆದುಕೊಂಡಿದ್ದಾರೆ.
ಸ್ಪಂದನ (Spandana Vijay Raghavendra)ಮತ್ತು ವಿಜಯ್ ರಾಘವೇಂದ್ರ ಪ್ರೀತಿಸಿ ಮದುವೆಯಾದ ಜೋಡಿ. ಈ ಜೋಡಿಯನ್ನು ನೋಡಿ ಜನ ಮೇಡ್ ಫಾರ್ ಈಚ್ ಅದರ್ ಎನ್ನುತ್ತಿದ್ದರು. ಸ್ಪಂದನಾಗೆ ಮಾತು ಕಡಿಮೆ, ಅವರ ನಗುವಿನಲ್ಲಿ ಮುಗ್ಧತೆ ಜನರನ್ನು ಸೆಳೆದಿತ್ತು.
ಇಬ್ಬರ ಮುದ್ದಾದ ಜೋಡಿಗೆ ಯಾವ ಕೆಟ್ಟ ಕಣ್ಣು ಬಿತ್ತೋ, 2022 ರಲ್ಲಿ ವಿದೇಶದಲ್ಲಿ ಟ್ರಾವೆಲ್ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಾಯಾಘಾತವಾಗಿ ಸ್ಪಂದನ ಸಾವನ್ನಪ್ಪಿದ್ದರು. ಮಲಗಿದ್ದಲ್ಲೇ ಸ್ಪಂದನ ತೀರಿಕೊಂಡಿದ್ದರು. ಈ ಸುದ್ದಿ ಚಂದನವನಕ್ಕೆ ಶಾಕ್ ನೀಡಿತ್ತು.
ವಿಜಯ್ ರಾಘವೇಂದ್ರ ಪ್ರತಿಯೊಂದು ವಿಷಯಕ್ಕೂ ಪತ್ನಿಯನ್ನು ಅವಲಂಭಿಸಿದ್ದರು. ಅವರ ಪ್ರತಿ ಸಂದರ್ಶನದಲ್ಲೂ ಪತ್ನಿಯ ಹೆಸರೇ ಕೇಳಿ ಬರುತ್ತಿತ್ತು. ಪತ್ನಿಯ ನಿಧನದ ಬಳಿಕ ಅವರ ಬದುಕು ಕಷ್ಟವಾಗಬಹುದು ಎಂದು ಜನ ಅಂದುಕೊಂಡಿದ್ದರು. ಆದರೆ ವಿಜಯ್ ಸ್ಪಂದನ ಅವರ ನೆನಪನ್ನೇ ಜೀವಂತವಾಗಿರಿಸಿಕೊಂಡು ಬದುಕುತ್ತಿದ್ದಾರೆ.
ವಿಜಯ್ ರಾಘವೇಂದ್ರ ಜೀವನದಲ್ಲಿ ಸ್ಪಂದನಾ ಎಷ್ಟು ಆಳವಾಗಿ ಬೇರೂರಿದ್ದರು ಅಂದ್ರೆ, ಬೆಳಗ್ಗೆ ಹಲ್ಲುಜ್ಜುವುದರಿಂದ ಹಿಡಿದು, ರಾತ್ರಿ ಮಲಗುವವರೆಗೂ ಆಕೆ ನನ್ನ ಜೊತೆಯೇ ಇರುತ್ತಿದ್ದಳು. ಆದರೆ ಇನ್ನು ಮುಂದೆ ಅವಳ ಕಾಲ್ ಬರಲ್ಲ, ಶೂಟಿಂಗ್ ನಿಂದ ಲೇಟ್ ಯಾಕೆ ಬಂದ್ರಿ ಎಂದು ಕೇಳಲ್ಲ. ಆದರೆ ಇರುವಷ್ಟು ದಿನ ಜೀವನದಲ್ಲಿ ದಾರಿ ತೋರಿಸಿಯೇ ಹೋಗಿದ್ದಾಳೆ ಎಂದು ಇಂಟರ್ವ್ಯೂ ಒಂದರಲ್ಲಿ ಹೇಳಿದ್ದರು.