Vasishta N Simha ನಟನೆಯ ಲವ್ಲೀ ಚಿತ್ರ ಪ್ರೇಮಿಗಳ ದಿನ ಬಿಡುಗಡೆ!
ಲವ್ಲೀ ಸಿನಿಮಾ ಶೂಟಿಂಗ್ ಸ್ಪಾಟ್ ವಿಸಿಟ್. ವಸಿಷ್ಠ ಸಿಂಹ ಜಿಮ್ ಟ್ರೈನರ್ ಆಗಿದ್ದ ಚೇತನ್ ಕಿಶೋರ್ ನಿರ್ದೇಶನ
ಬೆಂಗಳೂರಿನ ಹೊರವಲಯದ ಕಿಂಗ್ಸ್ ಕ್ಲಬ್‌ನಲ್ಲಿ ‘ಲವ್ಲೀ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಆಫೀಸ್ ಸೆಟ್‌ಅಪ್‌ನಲ್ಲಿ ನಾಯಕ ವಸಿಷ್ಠ ಸಿಂಹ ಹಾಗೂ ಸಾಧು ಕೋಕಿಲ ನಡುವಿನ ದೃಶ್ಯವೊಂದಕ್ಕೆ ನಿರ್ದೇಶಕ ಚೇತನ್ ಕೇಶವ್ ಆ್ಯಕ್ಷನ್ ಕಟ್ ಹೇಳುತ್ತಿದ್ದರು.
ಸಿನಿಮಾಟೋಗ್ರಾಫರ್ ಅಶ್ವಿನ್ ಕೆನಡಿ ಚಿತ್ರೀಕರಿಸುತ್ತಿದ್ದರು. ವಸಿಷ್ಠ ಸಿಂಹ ಕತ್ತು, ಕೈಯಲ್ಲೆಲ್ಲ ಚೈನೀಸ್ ಭಾಷೆಯ ಟ್ಯಾಟೂ ಇತ್ತು. ಆ ಬಗ್ಗೆ ಕೇಳಿದಾಗ ಅವರು ಗುಟ್ಟು ಬಿಟ್ಟುಕೊಡಲಿಲ್ಲ.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಸಿಷ್ಠ ಸಿಂಹ, ‘ಈ ಚಿತ್ರದಲ್ಲಿ ಒರಟ, ಸಿಟ್ಟಿನ ಹುಡುಗನ ಪಾತ್ರ. ಇದು ರೊಮ್ಯಾಂಟಿಕ್, ಆ್ಯಕ್ಷನ್ ಬೆರೆತ ವಿಭಿನ್ನ ಕಮರ್ಷಿಯಲ್ ಚಿತ್ರ.
ಲಾಂಗ್, ಗುಲಾಬಿ ಎರಡೂ ಇದೆ. ಎಲ್ಲ ಅಂದುಕೊಂಡ ಹಾಗೆ ಆದರೆ ಸೆಪ್ಟೆಂಬರ್‌ನಲ್ಲಿ ಸಿನಿಮಾ ಬಿಡುಗಡೆ’ ಅಂದರು. ನಿರ್ದೇಶಕ ಚೇತನ್ ಹಿಂದೆ ಮಫ್ತಿ ಚಿತ್ರದಲ್ಲಿ ನರ್ತನ್‌ಗೆ ಅಸೋಸಿಯೇಟ್ ಆಗಿದ್ದವರು.
ವಸಿಷ್ಠ ಅವರ ಜಿಮ್ ಟ್ರೈನರ್ ಆಗಿದ್ದವರು. ಆದರೆ ಇಲ್ಲಿ ಸಿನಿಮಾದ ಯಾವ ಡೀಟೇಲ್ ಕೇಳಿದರೂ ಹೇಳಲು ಹಿಂಜರಿಯುತ್ತಿದ್ದರು. ‘ಇದು 8-10 ವರ್ಷಗಳ ಹಿಂದಿನ ನೈಜ ಘಟನೆ ಆಧರಿತ ಚಿತ್ರ.
ಮಂಗಳೂರು, ಉಡುಪಿ ಪ್ರಮುಖ ಪಾತ್ರ ವಹಿಸುತ್ತೆ’ ಎಂದರು. ಜಾರ್ಖಂಡ್‌ನ ಸ್ಟೆಫಿ ಪಟೇಲ್ ನಾಯಕಿ. ಸಾಧುಕೋಕಿಲ ಬಾಸ್ ಪಾತ್ರದಲ್ಲಿದ್ದಾರೆ. ಕಿರುತೆರೆ ನಟಿ ಸಮೀಕ್ಷಾ, ಸೂರಜ್ ಶೂಟಿಂಗ್ ಸ್ಪಾಟ್‌ನಲ್ಲಿದ್ದರು.