- Home
- Entertainment
- Sandalwood
- ಕಾಫಿ ತೋಟದಲ್ಲಿ ಕುಣಿದು ಕುಪ್ಪಳಿಸಿದ ವರ್ಷ ಕಾವೇರಿ; ಅದಿಕ್ಕೆ ರೇಟ್ ಜಾಸ್ತಿ ಆಗಿದೆ ಎಂದ ನೆಟ್ಟಿಗರು
ಕಾಫಿ ತೋಟದಲ್ಲಿ ಕುಣಿದು ಕುಪ್ಪಳಿಸಿದ ವರ್ಷ ಕಾವೇರಿ; ಅದಿಕ್ಕೆ ರೇಟ್ ಜಾಸ್ತಿ ಆಗಿದೆ ಎಂದ ನೆಟ್ಟಿಗರು
ಹೊಸ ಶೈಲಿಯಲ್ಲಿ ವಿಡಿಯೋಗಳನ್ನು ಕ್ರಿಯೇಟ್ ಮಾಡುತ್ತಿರುವ ವರ್ಷ ಕಾವೇರಿ. ಕಾಫಿ ರೇಟ್ ಚಿಂತೆ ಶುರುವಾಯ್ತು ನೆಟ್ಟಿಗರಿಗೆ.....

ಕನ್ನಡ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ವರ್ಷ ಕಾವೇರಿ ತಿಂಗಳು ತಿಂಗಳಿಗೂ ಹೊಸ ಶೈಲಿಯಲ್ಲಿ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಅಪ್ಲೋಡ್ ಮಾಡುತ್ತಾರೆ.
ಬ್ರೇಕ್ ನಂತರ ಸೋಷಿಯಲ್ ಮೀಡಿಯಾದಿಂದ ದೂರು ಉಳಿದಿದ್ದ ವರ್ಷ ಕಾವೇರಿ ಈಗ ಮತ್ತೆ ಆಕ್ಟಿವ್ ಆಗಲು ಶುರುವಾಗಿದ್ದಾರೆ. ಈಗ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಾಕಿದ್ದಾರೆ.
ದರ್ಶನ್ ನಟನೆಯ ಭೂಪತಿ ಸಿನಿಮಾ ಚಿತ್ರದ ಸಾ ಸನನಾ ರೇ ಹಾಡಿಗೆ ವರ್ಷ ಕಾವೇರಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡನ್ನು ಕೆಎಸ್ ಚೈತ್ರಾ ಮತ್ತು ವಿ ಹರಿಕೃಷ್ಣ ಹಾಡಿದ್ದಾರೆ.
ವೈಟ್ ಆಂಡ್ ಗ್ರೀನ್ ಬಣ್ಣದ ಸೆಲ್ವಾರ್‌ನಲ್ಲಿ ವರ್ಷಾ ಕಾವೇರಿ ಕಾಣಿಸಿಕೊಂಡಿದ್ದು. ಕಾಫಿ ತೋಟದಲ್ಲಿ ಡ್ಯಾನ್ಸ್ ಮಾಡಿರುವುದು ಸಖತ್ ಆಗಿ ಕಾಣಿಸಿದೆ. ಅಲ್ಲದೆ ವಿಡಿಯೋ ಲಕ್ಷಗಟ್ಟೆ ವೀಕ್ಷಣೆ ಪಡೆದುಕೊಂಡಿದೆ.
ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿರುವ ವರ್ಷ ಮೂಲತಃ ಕೊಡಗಿನ ಕುವರಿ. ಬೆಂಗಳೂರಿನಲ್ಲಿ ವಿದ್ಯಾಭ್ಯಾಗ ಮುಗಿಸಿಕೊಂಡು ಫ್ಯಾಮಿಲಿ ಜೊತೆ ಇಲ್ಲೇ ನೆಲೆಸಿದ್ದಾರೆ.
ನೀವು ಈ ರೀತಿ ಕಾಫಿ ತೋಟದಲ್ಲಿ ಕುಣಿಯುತ್ತಿದ್ದರೆ ಕಾಫಿ ರೇಟ್ ಜಾಸ್ತಿ ಆಗದೆ ಕಡಿಮೆನಾ ಆಗುತ್ತೆ?, ನಿಮ್ಮಂತ ನವೀಲು ನಮಗೆ ದಿನ ತೋಟದಲ್ಲಿ ಸಿಗಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.