‘ಸು ಫ್ರಮ್ ಸೋ’ ನಟಿಯನ್ನು ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿಗೆ ಹೋಲಿಕೆ!
‘ಸು ಫ್ರಮ್ ಸೋ’ ಸಿನಿಮಾದಲ್ಲಿ ಪುಟ್ಟ ಆದರೆ ನೆನಪಿನಲ್ಲಿ ಉಳಿಯುವಂತಹ ಪಾತ್ರದಲ್ಲಿ ನಟಿಸಿದ್ದ ಅಶೋಕನ ಕ್ರಶ್ ಚೈತ್ರಾ ಪಾತ್ರಧಾರಿ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಥರ ಕಾಣಿಸ್ತಾರ?

‘ಸು ಫ್ರಮ್ ಸೋ’ (Su from So cinema) ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ನಾಯಕ ಅಶೋಕನ ಕ್ರಶ್ ಚೈತ್ರಾ ಪಾತ್ರದಲ್ಲಿ ನಟಿಸಿದ ನಟಿ, ಒಂದೆರಡು ಸೀನ್ ಗಳಲ್ಲಿ, ಅದು ಕೂಡ ಸರಿಯಾಗಿ ಒಂದು ಡೈಲಾಗ್ ಇಲ್ಲದೇ ಕಾಣಿಸಿಕೊಂಡರೂ ಸಹ ತಮ್ಮ ಕಣ್ಸನ್ನೆಯಿಂದ ಜನ ಮನ ಗೆದ್ದಿದ್ದಾರೆ.
ಕೆಲವೇ ಸೀನ್ ಗಳಲ್ಲಿ ಕಾಣಿಸಿಕೊಂಡರೂ ವೀಕ್ಷಕರ ಹೃದಯದಲ್ಲಿ ಭದ್ರ ಸ್ಥಾನ ಪಡೆದ ಆ ನಟಿ ಯಾರು? ಅವರ ಹಿನ್ನೆಲೆ ಬಗ್ಗೆ ಹೇಳೋದಾದ್ರೆ ಈಕೆಗಿದು ಮೊದಲ ಸಿನಿಮಾ ಅಂತಾನೆ ಹೇಳಬಹುದು. ಡೈಲಾಗ್ ಇಲ್ಲದಿದ್ದರೂ ತಮ್ಮ ಕಣ್ಣಿನ ಮೂಲಕ ಮಾತನಾಡಿದ್ದು ಇವರ ಹಾವಾ ಭಾವ ನೋಡಿದ್ರೆ ಉತ್ತಮ ನಟಿಯಾಗುವ ಎಲ್ಲಾ ಸೂಚನೆ ಇದೆ.
ಈ ಕ್ರಶ್ ಪಾತ್ರದಲ್ಲಿ ಮಿಂಚಿದ ನಟಿ ತನಿಷ್ಕಾ ಅಜಯ್ ಶೆಟ್ಟಿ (Tanishka Shetty). ಇವರು ಹುಟ್ಟಿ ಬೆಳೆದದ್ದು ಎಲ್ಲವೂ ಮುಂಬೈನಲ್ಲಿ. ಸು ಫ್ರಮ್ ಸೋ ನಟ ನಿರ್ದೇಶಕ ನಾಟಕ ಕಲಾವಿದರಾಗಿದ್ದು, ಅವರು ಒಂದು ನಾಟಕದ ಪ್ರಮೋಷನ್ ಗಾಗಿ ಮುಂಬೈಗೆ ಹೋದಾಗ ಅಲ್ಲಿ ತನಿಷ್ಕಾ ಅವರನ್ನು ನೋಡಿ, ಸಿನಿಮಾ ಮಾಡುವಂತೆ ಕೇಳಿದ್ದರಂತೆ.
ಆಡಿಷನ್ ಕೊಟ್ಟ ಬಳಿಕ, ಜೆಪಿ ಮತ್ತು ರಾಜ್ ಬಿ ಶೆಟ್ಟಿಗೆ (Raj B Shetty) ಆಕೆಯ ನಟನೆ ಒಪ್ಪಿಗೆಯಾಗಿದ್ದು, ಹೀಗೆ ತನಿಷ್ಕಾ ಅವರಿಗೆ ಸು ಫ್ರಮ್ ಸೋದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ತನಿಷ್ಕಾಗೆ ಮುಂದಿನ ದಿನಗಳಲ್ಲಿ ಸಿನಿಮಾಗೆ ಬರುವ ಆಸಕ್ತಿ ಇದೆ.
ತನಿಷ್ಕಾ ಅವರು ಸದ್ಯ ಮುಂಬೈನಲ್ಲಿ ಮ್ಯಾನೇಜ್ ಮೆಂಟ್ ನಲ್ಲಿ (Business Management)ಎರಡನೇ ವರ್ಷದ ಡಿಗ್ರಿಯಲ್ಲಿ ಓದುತ್ತಿದ್ದಾರೆ. ವಿಧ್ಯಾಭ್ಯಾಸ ಪೂರ್ಣಗೊಂಡ ಬಳಿಕ ಮತ್ತೆ ಸಿನಿಮಾದಲ್ಲಿ ಕೆಲಸ ಮಾಡುವ ಆಶಯವನ್ನು ಹೊಂದಿದ್ದಾರೆ ಈ ಬೆಡಗಿ.
ಮತ್ತೊಂದು ವಿಚಾರ ಅಂದ್ರೆ ಇದೀಗ ಕಣ್ಸನ್ನೆಯಿಂದಲೇ ಹುಡುಗರ ದಿಲ್ ಕದ್ದ ತನಿಷ್ಕಾ ಅವರ ಫೋಟೋ ಹಾಗೂ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿಯವರ (Shrinidhi Shetty) ಫೋಟೊಗಳನ್ನ ಹೋಲಿಕೆ ಮಾಡಿ ಟ್ರೋಲ್ ಪೇಜ್ ಗಳು ಶೇರ್ ಮಾಡುತ್ತಿವೆ. ಸೇಮ್ ಸೇಮ್ ಬಟ್ ಡಿಫರೆಂಟ್ ಎಂದು ಹೇಳುತ್ತಿದ್ದಾರೆ.
ಕೆಲವರು ಹೌದು ಶ್ರೀನಿಧಿ ಮತ್ತು ತನಿಷ್ಕಾ ಶೆಟ್ಟಿಗೆ ಕೊಂಚ ಹೋಲಿಕೆ ಇದೆ ಎಂದು ಹೇಳಿದರೆ, ಇನ್ನೂ ಕೆಲವರು, ಇವರು ಚೆನ್ನಾಗಿದ್ದಾರೆ, ಶ್ರೀನಿಧಿಯೂ ಸೂಪರ್, ಆದರೆ ಇಬ್ಬರ ನಡುವೆ ಹೋಲಿಕೆ ಮಾತ್ರ ಬೇಡ. ತನಿಷ್ಕಾ ಮತ್ತು ಶ್ರೀನಿಧಿ ಒಂದೇ ಥರ ಇಲ್ಲ ಎಂದಿದ್ದಾರೆ.