ಸೀಮಂತ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ನಟಿ ಸಂಧ್ಯಾ ಅರಕೆರೆ : PHOTOS
Sandhya Arakere: ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಸುಲೋಚನನ ಮಗಳಾಗಿ ನಟಿಸಿದ್ದ ಸಂಧ್ಯಾ ಅರಕೆರೆಯವರ ಇದೀಗ ಚೊಚ್ಚಲ ಗರ್ಭಿಣಿಯಾಗಿದ್ದು, ಸಂಭ್ರಮದಿಂದ ಇದೀಗ ಸೀಮಂತ ಶಾಸ್ತ್ರಗಳು ನಡೆದಿದ್ದು. ನಟಿ ಸೋಶಿಯಲ್ ಮಿಡಿಯಾದಲ್ಲಿ ಫೊಟೋಗಳನ್ನು ಹಂಚಿಕೊಂಡಿದ್ದಾರೆ.

ಸಂಧ್ಯಾ ಅರಕೆರೆ
ಚಂದನವನದ ಈ ವರ್ಷದ ಸೂಪರ್ ಹಿಟ್ ಹಾರರ್ ಕಾಮಿಡಿ ಸಿನಿಮಾ ‘ಸು ಫ್ರಮ್ ಸೋ’ ದಲ್ಲಿ ಸುಲೋಚನ ಮಗಳು ಭಾನು ಪಾತ್ರದಲ್ಲಿ ಭಾವುಕವಾಗಿ ಅಭಿನಯಿಸಿದ ನಟಿ ಸಂಧ್ಯಾ ಅರಕೆರೆಯವರು ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ.
ಸೀಮಂತ ಸಂಭ್ರಮ
ಸಂಧ್ಯಾ ಅರಕೆರೆಯವರು ಚೊಚ್ಚಲ ತಾಯ್ತನದ ಸಂಭ್ರಮವನ್ನು ಅನುಭವಿಸುತ್ತಿದ್ದು, ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಕೂಡ ನಡೆದಿದೆ. ಸೀಮಂತದ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬದ ಜೊತೆ ಸಂಧ್ಯಾ
ಸಂಧ್ಯಾ ತಮ್ಮ ಪತಿ ಹಾಗೂ ಕುಟುಂಬದ ಜೊತೆಗೆ ಇರುವಂತಹ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು, ಶುಭ ಕೋರಿದ್ದಾರೆ. ಮನೆಗೆ ಮಹಾಲಕ್ಷ್ಮಿಯ ಆಗಮನ ಆಗಲಿ ಎಂದು ಹಾರೈಸಿದ್ದಾರೆ.
ರಂಗಭೂಮಿ ಕಲಾವಿದೆ
ರಂಗಭೂಮಿ ಕಲಾವಿದೆಯಾಗಿರುವ ಸಂಧ್ಯಾ ಅರಕೆರೆ (Sandhya Arakere) ಕನ್ನಡದ ಹಲವು ಸಿನಿಮಾಗಳಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದರು. ಆದರೆ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಸು ಫ್ರಮ್ ಸೋ ಸಿನಿಮಾ. ಈ ಸಿನಿಮಾದಲ್ಲಿ ಭಾವುಕ ಪಾತ್ರದ ಮೂಲಕ ಗಮನ ಸೆಳೆದ ಸಂಧ್ಯಾ ಅವರ ನಟನೆ ಹಾಗೂ ಭಾನು ಮತ್ತು ರವಿಯಣ್ಣನ ಕಾಂಬಿನೇಶನ್ ಜನ ಇಷ್ಟ ಪಟ್ಟಿದ್ದರು.
ಕಿರುಚಿತ್ರದಲ್ಲಿ ನಟನೆ
ಸು ಫ್ರಮ್ ಸೋ ರಾಜ್ ಬಿ ಶೆಟ್ಟಿ (Raj B Shetty) ಅವರ ನಿರ್ಮಾಣದಲ್ಲಿ ಮೂಡಿ ಬಂದಿದ್ದು, ಇದೀಗ ಅವರ ಲೈಟರ್ ಬುದ್ಧ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಲಿರುವ ಮತ್ತೊಂದು ಕಿರುಚಿತ್ರದಲ್ಲಿ ಸಂಧ್ಯಾ ಅರಕೆರೆ ನಟಿಸಿದ್ದಾರೆ. ರಘು ಆರವ್ ನಿರ್ದೇಶನ ಮಾಡಲಿರುವ ಹಿಂದೆ ಗಾಳಿ ಮುಂದೆ ಮತ್ತೆ ಕಿರುಚಿತ್ರ ಯೂಟ್ಯೂಬಲ್ಲಿ ರಿಲೀಸ್ ಆಗಿತ್ತು.
ಸಂಧ್ಯಾ ಪತಿ
ಸಂಧ್ಯಾ ಅರಕೆರೆ ಮೂಲತಃ ಶ್ರೀರಂಗಪಟ್ಟಣದವರು. ಇವರು ಮದುವೆಯಾಗಿರುವುದು ಶೋಧನ್ ಬಸ್ರೂರ್ ಅವರನ್ನು. ಅವರು ಕೂಡ ರಂಗಭೂಮಿ ಕಲಾವಿದರಾಗಿದ್ದು, ಹಲವಾರು ನಾಟಕಗಳಲ್ಲಿ ಮತ್ತು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

