ಸೋನಲ್ ಮೊಂತೆರೋ ಬಳೆ ಶಾಸ್ತ್ರ ಫೋಟೊಸ್ ವೈರಲ್… ಮೂಗು ಬೊಟ್ಟು ಇದ್ರೆ ಇನ್ನೂ ಚೆನ್ನಾಗಿರ್ತಿತ್ತು ಎಂದ ಫ್ಯಾನ್ಸ್
ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸೋನಲ್ ಮೊಂತೆರೋ ಇದೀಗ ಬಳೆ ಶಾಸ್ತ್ರದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ತರುಣ್ ಸುದೀರ್ ಹಾಗೂ ನಟಿ ಸೋನಲ್ ಮೊಂತೆರೋ (SOnal Monterio) ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಟಿ ತಮ್ಮ ಮದುವೆ ಸಂಭ್ರಮದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಬಳೆ ಶಾಸ್ತ್ರದ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಸೋನಲ್ ಮೊಂತೆರೋ ಹಸಿರು ಬಣ್ಣದ ಸೀರೆಯುಟ್ಟು, ಕೈತುಂಬಾ ಹಸಿರು ಬಳೆ ತೊಟ್ಟ ಫೋಟೊಗಳನ್ನು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಇದು ತಮ್ಮ ಬಳೆ ಶಾಸ್ತ್ರದ (Bale shastra) ಫೋಟೊಗಳು ಎಂದು ಬರೆದುಕೊಂಡಿದ್ದಾರೆ. ಮದುವೆ ಶಾಸ್ತ್ರದ ಈ ಸಂಭ್ರಮದ ಫೋಟೊಗಳನ್ನು ಫ್ಯಾನ್ಸ್ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.
ಮದುವೆ ಕಳೆದು ತಿಂಗಳು ಕಳೆದಿದ್ದು, ಈವಾಗ್ಯಾಕೆ ಬಳೆ ಶಾಸ್ತ್ರ ಮಾಡಿಕೊಂಡಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ. ಆದರೆ ಈ ಫೋಟೊಗಳು ಮದುವೆ ಮುನ್ನ ಮಾಡಿರುವಂತಹ ಬಳೆ ಶಾಸ್ತ್ರದ್ದಾಗಿವೆ. ಇದೀಗ ಮದುವೆಯ ಒಂದೊಂದೆ ಸಂಭ್ರಮವನ್ನು ಮೆಲುಕು ಹಾಕುತ್ತಾ ನಟಿ ಬಳೆ ಶಾಸ್ತ್ರದ ಈ ಸುಂದರ ಫೋಟೊಗಳನ್ನು ಸಹ ಶೇರ್ ಮಾಡಿದ್ದಾರೆ.
ಸೋನಲ್ ಮತ್ತು ತರುಣ್ ಸುದೀರ್ (Tarun Sudheer) ಮದುವೆ ಸಮಾರಂಭ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಬಹಳ ಅದ್ಧೂರಿಯಾಗಿಯೇ ನಡೆದಿತ್ತು. ಒಂದು ವಾರಗಳ ಕಾಲ ವಿವಿಧ ಶಾಸ್ತ್ರಗಳು, ಕಾರ್ಯಕ್ರಮಗಳು ನಡೆದಿದ್ದವು. ಇದಾದ ನಂತರ ಸೋನಲ್ ಊರಾದ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಈ ಜೋಡಿ ಮತ್ತೆ ಮದುವೆಯಾಗಿದ್ದರು. ಇದೀಗ ಬಳೆ ಶಾಸ್ತ್ರದ ಫೋಟೊಗಳನ್ನು ನಟಿ ಹಂಚಿಕೊಳ್ಳುತ್ತಿದ್ದಾರೆ.
ಅಷ್ಟೇ ಅಲ್ಲ ದೇವತೆ ತರಹ ಕಾಣುತ್ತಿದ್ದಿರಾ , ನೀವು ಇಷ್ಟೊಂದು ಅಂದವಾಗಿ ಕಾಣಿಸುತ್ತೀದ್ದೀರಿ, ಮತ್ಯಾಕೆ ಇಷ್ಟು ಬೇಗ ಮದುವೆಯಾದ್ರಿ? ಒಂದಷ್ಟು ಸಿನಿಮಾಗಳನ್ನು ಮಾಡಿ ಆಮೇಲೆ ಮದುವೆಯಾಗಬಹುದಿತ್ತು ಎಂದಿದ್ದಾರೆ. ಲಕ್ಷ್ಮೀ ದೇವತೆ ತರ ಕಾಣಿಸ್ತಿದ್ದೀರಿ ಅಂತಾನೂ ಜನ ಹೇಳಿದ್ದಾರೆ.