ನಾನು ಹುಡುಗಿಯಾಗಿದ್ರೆ ಕಮಲ್ ನನ್ನ ಮದುವೆ ಆಗ್ತಿದ್ರು: ಭಾವುಕರಾಗಿದ್ದೇಕೆ ಶಿವಣ್ಣ!
ಕಮಲ್ ತುಂಬಾ ಚೆನ್ನಾಗಿ ನಟಿಸ್ತಾರೆ. ನಾನು ಹುಡುಗಿ ಆಗಿದ್ರೆ ಕಮಲ್ ನನ್ನ ಮದುವೆ ಆಗ್ತಿದ್ರು. ಇನ್ನು ನಾನು ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುವಾಗ ಕಮಲ್ ಫೋನ್ ಮಾಡಿ ಮಾತಾಡಿದ್ರು ಎಂದರು ಶಿವಣ್ಣ.

ಜೈಲರ್ ಚಿತ್ರದಲ್ಲಿ ಅತಿಥಿ ಪಾತ್ರ
ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟರಲ್ಲಿ ಒಬ್ಬರು. 2023ರಲ್ಲಿ ಬಿಡುಗಡೆಯಾದ 'ಜೈಲರ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 125 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಉತ್ತರಾಖಂಡ, 45, ಪೆಟ್ಟಿ, ಭೈರವನ ಕೊನೆ ಪಾಠ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಕಳೆದ ವರ್ಷ ಶಿವಣ್ಣನಿಗೆ ಕ್ಯಾನ್ಸರ್
ಶಿವಣ್ಣನಿಗೆ ಮೂತ್ರಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅಮೇರಿಕಾದಲ್ಲಿ ಎರಡು ತಿಂಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಶಿವಣ್ಣನ ಲುಕ್ ಬದಲಾಗಿದೆ
ಕ್ಯಾನ್ಸರ್ ಚಿಕಿತ್ಸೆ ಬಳಿಕ ಶಿವಣ್ಣ ಸ್ವಲ್ಪ ಸಣ್ಣಗೆ ಆಗಿದ್ದಾರೆ. ಅವರ ಈ ಲುಕ್ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 45 ಚಿತ್ರದ ಪ್ರಚಾರಕ್ಕೆ ಬಂದಿದ್ದ ಶಿವಣ್ಣ ಕಮಲ್ ಬಗ್ಗೆ ಮಾತಾಡಿದ್ದಾರೆ.
ಕಮಲ್ ಫ್ಯಾನ್ ಶಿವಣ್ಣ
ನಾನು ಕಮಲ್ ಅವರ ದೊಡ್ಡ ಫ್ಯಾನ್. ಅವರ ಚಿತ್ರ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಒಂದು ದಿನ ಕಮಲ್ ನಮ್ಮ ಮನೆಗೆ ಬಂದಿದ್ರು. ಅಪ್ಪನ ಹತ್ರ ನಾನು ಯಾರು ಅಂತ ಕೇಳಿದ್ರು. ನಾನು ಅವರನ್ನ ಹಗ್ ಮಾಡ್ಕೊಂಡೆ. ಆಗ ನಾನು ಮೂರು ದಿನ ಸ್ನಾನ ಮಾಡ್ಲಿಲ್ಲ.
ನನ್ನ ಪರಿಸ್ಥಿತಿ ಕೇಳಿ ಕಣ್ಣೀರಿಟ್ಟರು
ಕಮಲ್ ತುಂಬಾ ಚೆನ್ನಾಗಿ ನಟಿಸ್ತಾರೆ. ನಾನು ಹುಡುಗಿ ಆಗಿದ್ರೆ ಕಮಲ್ ನನ್ನ ಮದುವೆ ಆಗ್ತಿದ್ರು. ಇನ್ನು ನಾನು ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುವಾಗ ಕಮಲ್ ಫೋನ್ ಮಾಡಿ ಮಾತಾಡಿದ್ರು. ಅವರ ಮಾತು ನನಗೆ ಧೈರ್ಯ ತಂದಿತ್ತು. ನನ್ನ ಪರಿಸ್ಥಿತಿ ಕೇಳಿ ಅವರು ಬೇಜಾರಾದ್ರು, ಕಣ್ಣೀರಿಟ್ಟರು. ನಾನೂ ಸ್ವಲ್ಪ ಭಾವುಕನಾದೆ ಎಂದರು ಶಿವಣ್ಣ.