ಶೀಘ್ರವೇ ಬರಲಿದೆ ಶೆಟ್ಟಿ ಗ್ಯಾಂಗ್ ಸೆಲ್ಫಿ, ಬಿರುಕಿನ ಬಗ್ಗೆ ಮೌನ ಮುರಿದ ಪ್ರಮೋದ್
ಸ್ಯಾಂಡಲ್ವುಡ್ ನಲ್ಲಿ ಒಂದ್ಕಡೆ ಸ್ಟಾರ್ ವಾರ್ ಶುರುವಾದ್ರೆ ಇನ್ನೊಂದು ಕಡೆ ಶೆಟ್ಟಿ ಗ್ಯಾಂಗ್ ಬಿರುಕಿನ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಈಗ ಅದ್ರ ಬಗ್ಗೆ ಪ್ರಮೋದ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಆರ್ ಆರ್ ಆರ್ ಮಧ್ಯೆ ಬಿರುಕು?
ಸ್ಯಾಂಡಲ್ ವುಡ್ ನಲ್ಲಿ ಶೆಟ್ಟಿ ಗ್ಯಾಂಗ್ ಎಂದೇ ಗುರುತಿಸಿಕೊಂಡವರು ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ. ಇದಲ್ದೆ ಇವರ ಗ್ಯಾಂಗ್ ನಲ್ಲಿ ಪ್ರಮೋದ್ ಶೆಟ್ಟಿ ಸೇರಿದಂತೆ ಇನ್ನೂ ಅನೇಕರಿದ್ದಾರೆ. ಆದ್ರೆ ಶೆಟ್ಟಿ ಗ್ಯಾಂಗ್ ಅಂದಾಗ ಮೊದಲು ಬರೋದು ಈ ಮೂವರ ಹೆಸರು. ಸಿನಿಮಾ ಜೊತೆ ನಿರ್ದೇಶನ, ಕಥೆ ಎಲ್ಲದ್ರಲ್ಲೂ ಬ್ಯುಸಿ ಆಗಿರುವ ಇವರು ತುಂಬಾ ದಿನದಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ.
ಕಾಂತಾರಾ ನಂತ್ರ ದೂರ ದೂರ
ಕಾಂತಾರಾ ಸಿನಿಮಾಗಿಂತ ಮೊದಲು ಮೂವರು ಶೆಟ್ರು ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವೇದಿಕೆ ಮೇಲೆ ಬಂದು ಪರಸ್ಪರ ಸಿನಿಮಾಗಳ ಪ್ರಚಾರ ಮಾಡಿದ್ದಲ್ದೆ ಸಿನಿಮಾದಲ್ಲೂ ನಟಿಸಿದ್ದಾರೆ. ಆದ್ರೆ ಕಾಂತಾರಾ ನಂತ್ರ ಮೂವರ ಮಧ್ಯೆ ಅಂತರ ಕಾಣಿಸಿಕೊಂಡಂತಿದೆ. ಕಾಂತಾರಾದಲ್ಲಿ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ಕೆಲ್ಸ ಮಾಡಿದ್ರು. ರಕ್ಷಿತ್ ಶೆಟ್ಟಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆದ್ರೆ ಕಾಂತಾರಾ ಚಾಪ್ಟರ್ 1 ರಿಂದ ರಾಜ್ ಬಿ ಶೆಟ್ಟಿ ದೂರವಾದ್ರೆ ರಕ್ಷಿತ್ ಎಲ್ಲೂ ಕಾಣಿಸ್ಲಿಲ್ಲ.
ಸು ಫ್ರಮ್ ಸೋ
ಸು ಫ್ರಮ್ ಸೋ ಬಗ್ಗೆ ಕರ್ನಾಟಕದ ಪ್ರತಿಯೊಬ್ಬರೂ ಮಾತನಾಡಿದ್ರೂ ರಕ್ಷಿತ್ ಇದ್ರ ಬಗ್ಗೆ ಮಾತನಾಡ್ಲಿಲ್ಲ. ರಿಷಬ್ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ಬಿಟ್ರೆ ಮತ್ತೇನು ಮಾಡಿರಲಿಲ್ಲ. ಸದಾ ಒಟ್ಟಿಗಿರ್ತಿದ್ದವರು ಹೀಗ್ಯಾಕಾದ್ರು ಎನ್ನುವ ಅನುಮಾನ ಅಲ್ಲಿಂದ್ಲೇ ಶುರುವಾಗಿದ್ದು.
ರಾಜ್ ಬಿ ಶೆಟ್ಟಿ ಸ್ಪಷ್ಟನೆ
ರಾಜ್ ಬಿ ಶೆಟ್ಟಿಗೆ ಈ ಬಗ್ಗೆ ಮಾಧ್ಯಮಗಳಿಂದ ಪ್ರಶ್ನೆ ಹೋಗಿದೆ. ಅದಕ್ಕೆ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಉತ್ತರ ನೀಡಿದ್ದಾರೆ. ಕಾಂತಾರಾ ಚಾಪ್ಟರ್ 1 ರಲ್ಲಿ ನಾನು ಕೆಲ್ಸ ಮಾಡೋದಿಲ್ಲ ಅಂತ ಮೊದಲೇ ಹೇಳಿದ್ದೆ. ಹಾಗಾಗಿ ಅದ್ರ ಬಗ್ಗೆ ಯಾವುದೇ ಪ್ರಚಾರ ಮಾಡಿಲ್ಲ. ಕಾಂತಾರಾ ಬಿಟ್ಟು ಬೇರೆ ಯಾವುದೇ ಸಿನಿಮಾ ಮಾಡಿದ್ರೂ ರಿಷಬ್ ಹಾಗೂ ರಕ್ಷಿತ್ ಜೊತೆ ನಾನಿರ್ತೇನೆ ಎಂದಿದ್ದಾರೆ.
45 ರಲ್ಲಿ ರಾಜ್ ಬಿ ಶೆಟ್ಟಿ ಹೆಸರು ಹೇಳದ ರಿಷಬ್
ಡಿಸೆಂಬರ್ 25 ರಂದು 45 ತೆರೆಗೆ ಬಂದಿದೆ. ಇದ್ರಲ್ಲಿ ಉಪೇಂದ್ರ, ಶಿವರಾಜ್ ಕುಮಾರ್ ಜೊತೆ ರಾಜ್ ಬಿ ಶೆಟ್ಟಿ ಕೆಲ್ಸ ಮಾಡಿದ್ದಾರೆ. ಆದ್ರೆ ಉಪೇಂದ್ರ ಹಾಗೂ ಶಿವಣ್ಣ ಅವರ ಹೆಸರು ಹೇಳಿದ್ದ ರಿಷಬ್, ರಾಜ್ ಬಿ ಶೆಟ್ಟಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಅನುಮಾನವನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ಅದಕ್ಕೆ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಉತ್ತರ ನೀಡಿದ್ದು, ತಮ್ಮ ಮಧ್ಯೆ ಬಿರುಕಿಲ್ಲ ಎಂದಿದ್ದಾರೆ.
ಪ್ರಮೋದ್ ಶೆಟ್ಟಿ ಸ್ಪಷ್ಟನೆ
ಶೆಟ್ರ ಗ್ಯಾಂಗ್ ಇನ್ನೊಬ್ಬ ಸದಸ್ಯ ಪ್ರಮೋದ್ ಶೆಟ್ಟಿ ಈಗ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ. ಶೆಟ್ರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಅವರವರ ಕೆಲ್ಸದಲ್ಲಿ ಬ್ಯುಸಿ ಅಂತ ಪ್ರಮೋದ್ ಶೆಟ್ಟಿ ಹೇಳಿದ್ದಾರೆ.
ಒಟ್ಟಿಗೆ ಸೆಲ್ಫಿ ಕಳಿಸ್ತೇನೆ
ರಿಷಬ್ ಹಾಗೂ ರಾಜ್ ಬಿ ಶೆಟ್ಟಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇನ್ನು ರಕ್ಷಿತ್ ಸೋಶಿಯಲ್ ಮೀಡಿಯಾದಿಂದ ಸಂಪೂರ್ಣ ದೂರ ಇದ್ದಾರೆ. ಉಡುಪಿಯಲ್ಲಿ ಕುಳಿತು ಸ್ಕ್ರಿಪ್ಟ್ ಬರೆಯುತ್ತಿರುವ ಅವರು ಯಾವ ಸಿನಿಮಾ ಕೂಡ ನೋಡಿಲ್ಲ. ಹಾಗಾಗಿ ಯಾವ ಸಿನಿಮಾ ಬಗ್ಗೆಯೂ ಅವರು ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ಎಲ್ಲರ ಜೊತೆ ಮಾತನಾಡಿದ್ದೇನೆ. ಶೆಟ್ರ ಗಲಾಟೆ ಇಷ್ಟು ದೊಡ್ಡದಾಗಿದೆ ಅಂದ್ಮೇಲೆ ರಾತ್ರಿಯಾದ್ರೂ ಸೇರೋಣ ಎಂದಿದ್ದೇನೆ. ಶೀಘ್ರವೇ ಎಲ್ಲರೂ ಒಟ್ಟಿಗೆ ಸೇರಿ ಒಂದು ಸೆಲ್ಫಿ ಕಳಿಸ್ತೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

