ಶರಣ್ ನಟನೆಯ ಹಾರರ್ ಥ್ರಿಲ್ಲರ್ 'ಛೂ ಮಂತರ್'ಗೆ ಚಿತ್ರಮಂದಿರ ಸಮಸ್ಯೆ: ನಿರ್ಮಾಪಕ ತರುಣ್ ಹೇಳಿದ್ದೇನು?
ಈ ಚಿತ್ರಕ್ಕೆ ಸೂಕ್ತ ಚಿತ್ರಮಂದಿರ ಸಿಗದೇ ಇರುವ ಕಾರಣಕ್ಕೆ ನಿರ್ಮಾಪಕ ತರುಣ್ ಶಿವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. 'ಈ ಸಂದರ್ಭದಲ್ಲಿ ಬೇರೆ ಭಾಷೆಯ ಸಿನಿಮಾಗಳೂ ಬಿಡುಗಡೆ ಆಗುತ್ತಿರುವುದರಿಂದ ನಮಗೆ ಚಿತ್ರಮಂದಿರಗಳ ತೊಂದರೆ ಆಗಿದೆ.
ಕರ್ವ ಖ್ಯಾತಿಯ ನವನೀತ್ ನಿರ್ದೇಶನದ, ತರುಣ್ ಶಿವಪ್ಪ ಹಾಗೂ ಮಾನ ತರುಣ್ ನಿರ್ಮಿಸಿರುವ, ಶರಣ್, ಮೇಘನಾ ಗಾಂವ ನಟಿಸಿರುವ ಹಾರರ್ ಥ್ರಿಲ್ಲರ್' ಭೂಮಂತರ್' ಇಂದು ಬಿಡುಗಡೆಯಾಗುತ್ತಿದೆ. ವಿಶಿಷ್ಟ ವಸ್ತುವಿನ ಸಿನಿಮಾ ಕುರಿತ ವಿವರಗಳು ಇಲ್ಲಿವೆ.
• ಹಾರರ್ ಥ್ರಿಲ್ಲರ್ ಮಾದರಿಯ ವಸ್ತುವನ್ನು ನಿಭಾಯಿಸುವಲ್ಲಿ ಯಶಸ್ಸು ಸಾಧಿಸಿರುವ ನವನೀತ್ ನಿರ್ದೇಶನದ ಸಿನಿಮಾ ಇದು. ಟ್ರೇಲರ್ ಈಗಾಗಲೇ ಮೆಚ್ಚುಗೆ ಗಳಿಸಿದೆ.
• ಮಾಲಾಶ್ರೀ, ಡಾಲಿ ಧನಂಜಯ, ಗುರುಕಿರಣ್, ರಿಷಿ, ಪ್ರಥಮ್, ಅಮೂಲ್ಯ, ಧೀರೇನ್ ರಾಮ್‌ಕುಮಾರ್, ತಿಲಕ್, ಆರಾಧನಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಭಾಗವಹಿಸಿ ಈ ಸಿನಿಮಾಗೆ ಶುಭ ಕೋರಿದ್ದಾರೆ.
• ಸಿನಿಮಾ ಕುರಿತು ಬಹಳ ನಂಬಿಕೆ ಹೊಂದಿರುವ ಶರಣ್, 'ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ನಾಯಕರೇ. ನಾನೊಬ್ಬ ನಾಯಕನಲ್ಲ. ಟೀಸರ್, ಟ್ರೇಲರ್ ಹಾಗೂ ಹಾಡುಗಳನ್ನು ಜನ ಮೆಚ್ಚಿದ್ದಾರೆ. ಗೆಲ್ಲುವ ಭರವಸೆ ಇದೆ' ಎಂದು ಹೇಳಿದ್ದಾರೆ.
• ಅತ್ಯಂತ ಯಶಸ್ವಿ ಕಾಂಬಿನೇಷನ್ ಆಗಿರುವ ಶರಣ್ ಮತ್ತು ಚಿಕ್ಕಣ್ಣ ಈ ಸಿನಿಮಾದಲ್ಲಿ ಜೊತೆಯಾಗಿ ನಟಿಸಿರುವುದು ಚಿತ್ರದ ವಿಶೇಷತೆ. ಅದಿತಿ ಪ್ರಭುದೇವ, ಪ್ರಭು ಮುಂಡೂರ್, ಮೇಘನಾ ಗಾಂವ, ರಂಜನಿ ರಾಘವನ್, ನರಸಿಂಹ ಜಾಲಹಳ್ಳಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಮಂದಿರ ಸಮಸ್ಯೆ: ಈ ಚಿತ್ರಕ್ಕೆ ಸೂಕ್ತ ಚಿತ್ರಮಂದಿರ ಸಿಗದೇ ಇರುವ ಕಾರಣಕ್ಕೆ ನಿರ್ಮಾಪಕ ತರುಣ್ ಶಿವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. 'ಈ ಸಂದರ್ಭದಲ್ಲಿ ಬೇರೆ ಭಾಷೆಯ ಸಿನಿಮಾಗಳೂ ಬಿಡುಗಡೆ ಆಗುತ್ತಿರುವುದರಿಂದ ನಮಗೆ ಚಿತ್ರಮಂದಿರಗಳ ತೊಂದರೆ ಆಗಿದೆ. ಮಂಡ್ಯದಂತಹ ಕನ್ನಡಿಗರೇ ಹೆಚ್ಚಿರುವ ಊರಿನಲ್ಲೂ ಚಿತ್ರಮಂದಿರ ಸಿಗದಿರುವುದು ತುಂಬಾ ಬೇಸರವಾಗಿದೆ' ಎಂದು ಹೇಳಿದ್ದಾರೆ. ವಾಣಿಜ್ಯ ಮಂಡಳಿ ನ್ಯಾಯ ದೊರಕಿಸುವ ಕುರಿತು ಅವರು ಭರವಸೆ ಹೊಂದಿದ್ದರು.