ಸ್ಟ್ರೀಟ್ ಫುಡ್ ಅಂದ್ರೆ ಶಾನ್ವಿಗೆ ಸಖತ್ ಇಷ್ಟ..! ಫ್ಯಾನ್ಸ್ ಪ್ರಶ್ನೆಗಳಿಗೆ ನಟಿಯ ಉತ್ತರ
ನಿವಿನ್ ಪೌಲಿ ನಟನೆಯ ಮಲಯಾಳಂ ಸಿನಿಮಾದಲ್ಲಿಯೂ ನಟಿಸಿಕೊಂಡು ಬಂದಿರುವ ಶಾನ್ವಿ ಶ್ರೀವಾಸ್ತವ್ ಈಗ ಮನೆಯಲ್ಲಿದ್ದಾರೆ. ಆರಾಮಾಗಿರುವ ಹೊತ್ತಿನಲ್ಲಿ ಅಭಿಮಾನಿಗಳ ಜೊತೆ ನಡೆಸಿರುವ ಅವರು ಮಾತುಕತೆಯ ಆಯ್ದಭಾಗ.
ಆದಷ್ಟು ಬೇಗ ನಿಮ್ಮನ್ನ ಮೀಟ್ ಮಾಡ್ಬೇಕಿತ್ತು?
ಆದ್ರೆ ಕೊರೋನಾ ನೆಗೆಟಿವ್ ರಿಪೋರ್ಟ್ ತರೋದು ಮರೀಬೇಡಿ. ?
ನೀವು ಫುಡೀ ಅಂತ ಗೊತ್ತು, ಸ್ಟ್ರೀಟ್ ಫುಡ್ ಇಷ್ಟನಾ?
ಸಮೋಸ ತಿನ್ನುತ್ತಿದ್ದೇನೆ. ಸ್ಟ್ರೀಟ್ ಫುಡ್ ಅಂದ್ರೂ ಸಖತ್ ಇಷ್ಟ. ಈಗ ಮಿಸ್ ಮಾಡುತ್ತಿದ್ದೀನಿ.
ನಿಮ್ಮ ಗಾರ್ಡನ್ ಫೋಟೋ ಹಾಕುತ್ತಿರುತ್ತೀರಿ, ಏನ್ ಬೆಳೆದಿದ್ದೀರಿ?
ನಮ್ ಗಾರ್ಡನ್‌ನಲ್ಲಿ ನಿಂಬೆ ಗಿಡ, ಮಾರ್ನಿಂಗ್ ಗ್ಲೋರಿ, ರಂಗೂನ್, ಮಾರಿಗೋಲ್‌ಡ್ ಇತ್ಯಾದಿ ಇದೆ.
ಈ ಲಾಕ್‌ಡೌನ್ ಟೈಮಲ್ಲಿ ಬೆಳಗ್ಗೆ ಏಳೋದು ಎಷ್ಟೊತ್ತಿಗೆ?
ಏಳೋದು ಏಳು ಗಂಟೆಗೆ. ಆಮೇಲೆ ವರ್ಕೌಟ್ ಮಾಡ್ತಾ ಬೆವರು ಹರಿಸೋದು. ಅಮ್ಮಂಗೆ ಹೆಲ್ಪ್ ಮಾಡೋದು.. ಹೀಗೆ ದಿನಚರಿ.
ನಿಮ್ಮ ಫ್ಯಾಮಿಲಿಯಲ್ಲಿ ಯಾರಿಗೆ ನಿಮ್ಮನ್ನು ಕಂಡರೆ ಬಹಳ ಇಷ್ಟ?
ನನ್ನ ಫ್ಯಾಮಿಲಿಯಲ್ಲಿ ನನಗೇ ನನ್ನನ್ನು ಕಂಡರೆ ಬಹಳ ಇಷ್ಟ. ನಮ್ಮನ್ನು ನಾವು ಇಷ್ಟಪಡಬೇಕು ಕಣ್ರೀ, ಆವಾಗ್ಲೇ ಲೈಫಲ್ಲಿ ಮಜಾ ಇರೋದು!
ಕೆಲವು ವ್ಯಕ್ತಿಗಳು ದೊಡ್ಡೋರಾದ ಮೇಲೆ ಅಥವಾ ದೊಡ್ಡ ಸ್ಥಾನಕ್ಕೆ ಹೋದ ಮೇಲೆ ಇತರರ ಬಗ್ಗೆ ಅಸಡ್ಡೆ ಬೆಳೆಸಿಕೊಳ್ತಾರಲ್ಲಾ?
ನೋಡಿ, ಒಂದು ವಿಷ್ಯ ಸ್ಪಷ್ಟ. ನಾವೆಲ್ಲ ಅಮ್ಮನ ಹೊಟ್ಟೆಯಿಂದಲೇ ಹೊರ ಬಂದಿರೋರು. ಬರೋದೇನೋ ಬಂದಿದ್ದೀವಿ. ಇಲ್ಲೇ ಪರ್ಮನೆಂಟಾಗಿ ಉಳಿಯೋರು ಯಾರೂ ಇಲ್ಲ. ಒಂದಿನ ಮಣ್ಣಲ್ಲಿ ಮಣ್ಣಾಗಲೇ ಬೇಕು. ಹೀಗಿರುವಾಗ ಅದೃಷ್ಟಕ್ಕೋ, ಪ್ರಯತ್ನ ಬಲದಿಂದಲೋ ದೊಡ್ಡ ಸ್ಥಾನ ಸಿಕ್ಕರೆ ಅಟ್ಟಕ್ಕೇರೋದ್ರಲ್ಲಿ ಅರ್ಥ ಇದೆಯಾ?
ನೀವು ಯಾವ ಸ್ಥಾನದಲ್ಲಿದ್ದರೂ ಒಂದಲ್ಲಾ ಒಂದು ದಿನ ಜಗತ್ತಿಗೆ ಗುಡ್ ಬೈ ಹೇಳಲೇ ಬೇಕು ತಾನೇ? ಇದು ಒಂದು ಮುಖ. ಇನ್ನೊಂದು ಕಡೆ ನಾವೇ ಕೆಲವರ ಬಗ್ಗೆ ಇಲ್ಲಸಲ್ಲದ ಕಲ್ಪನೆ ಬೆಳೆಸಿಕೊಂಡಿರುತ್ತೀವಿ. ಹೋ ಅವ್ರು ದೊಡ್ಡವರು, ನನ್ನ ಮಾತಾಡಿಸಲ್ಲ, ಸೈಡ್‌ಲೈನ್ ಮಾಡ್ತಿದ್ದಾರೆ ಅಂತೆಲ್ಲ. ಆದರೆ ಅವರು ಮೊದಲಿನ ಥರವೇ ಇದ್ದಿರ್ತಾರೆ. ಸೋ, ಈ ಗೊಂದಲ ಎಲ್ಲ ಬಿಟ್ಟು ಚೆನ್ನಾಗಿ ಬಾಳೋಣ, ಅದೇ ಇಂಪಾರ್ಟೆಂಟು ಅಲ್ವಾ!