- Home
- Entertainment
- Sandalwood
- ಅಪ್ಪು ಸಮಾಧಿಗೆ ನಮಿಸಿ, ಅಭಿಮಾನಿಗಳಿ ಸಿಹಿ ಹಂಚಿ ಹುಟ್ಟು ಹಬ್ಬ ಸಂಭ್ರಮಿಸಿದ ಸಂಗೀತಾ ಶೃಂಗೇರಿ
ಅಪ್ಪು ಸಮಾಧಿಗೆ ನಮಿಸಿ, ಅಭಿಮಾನಿಗಳಿ ಸಿಹಿ ಹಂಚಿ ಹುಟ್ಟು ಹಬ್ಬ ಸಂಭ್ರಮಿಸಿದ ಸಂಗೀತಾ ಶೃಂಗೇರಿ
ಸ್ಯಾಂಡಲ್ ವುಡ್ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿರುವ ಸಂಗೀತಾ ಶೃಂಗೇರಿ ಪುನೀತ್ ರಾಜ್ ಕುಮಾರ್ ಸಮಾಧಿಗೆ ತೆರಳಿ, ನಮಿಸಿ, ಅಲ್ಲಿ ಅಭಿಮಾನಗಳಿಗೆ ಸಿಹಿ ಹಂಚುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರು.

ಸ್ಯಾಂಡಲ್ ವುಡ್ ನಟಿ ಮತ್ತು ಬಿಗ್ ಬಾಸ್ ಸೀಸನ್ 10 ರ ಮೂಲಕ ಭಾರಿ ಸದ್ದು ಮಾಡಿದ್ದ ಸಂಗೀತಾ ಶೃಂಗೇರಿ (Sangeetha Sringeri) ಮೇ 13ರಂದು ತಮ್ಮ 28ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಸಂಗೀತ ಹುಟ್ಟುಹಬ್ಬವನ್ನು ಅವರ ಫ್ಯಾಮಿಲಿ ಸಂಭ್ರಮದಿಂದ ಆಚರಿಸಿದ್ದು, ಸರ್ಪ್ರೈಸ್ ಬರ್ತ್ ಡೇ ಪಾರ್ಟಿ (Surprise birthday party) ನೀಡಿದ್ದಾರೆ. ಹುಟ್ಟುಹಬ್ಬಕ್ಕೆ ಸಂಗೀತ ನೀಲಿ ಬಣ್ಣದ ಗೌನ್ ಡ್ರೆಸ್ ಧರಿಸಿದ್ದು ಮುದ್ದಾಗಿ ಕಾಣಿಸುತ್ತಿದ್ದರು.
ಸಂಗೀತ ಕ್ಲೋಸ್ ಫ್ರೆಂಡ್ಸ್ ಮತ್ತು ಅಣ್ಣ ಸಂತೋಷ್ ಮತ್ತು ಅತ್ತಿಗೆ ಸುಚಿ ಮಧ್ಯರಾತ್ರಿ ಸುಂದರವಾಗಿ ಡೆಕೊರೇಟ್ ಮಾಡಿದ್ದ ಸ್ಥಳಕ್ಕೆ ಸಂಗೀತಾ ಅವರನ್ನು ಕರೆದೊಯ್ಡು ಸರ್ಪ್ರೈಸ್ ನೀಡಿದ್ದರು. ಸಂಗೀತಾ ಇಂಥಹ ಸುಂದರ ಮೆಮೊರಿ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 10 ರಲ್ಲಿ ಸಿಂಹಿಣಿಯಂತೆ ಮಿಂಚಿ ಟಾಪ್ 3 ಆಗಿ ಹೊರಹೊಮ್ಮಿದ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಸಹಸ್ಪರ್ಧಿಗಳು ಹಾಗೂ 777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಸಹ ಶುಭ ಕೋರಿದ್ದಾರೆ.
ಹುಟ್ಟು ಹಬ್ಬದ ಶುಭ ದಿನದಂದು ಸಂಗೀತ ಶೃಂಗೇರಿ ತಮ್ಮ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Punith Rajkumar) ಅವರ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ. ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಅಷ್ಟೇ ಅಲ್ಲ ಅಪ್ಪು ಸಮಾಧಿ ದರ್ಶನ ಪಡೆಯಲು ಬಂದ ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ನಿಮ್ಮಈ ಪ್ರೀತಿಯ 'ಅಪ್ಪು'ಗೆ ನನ್ನ ಸದಾ ಕಾಯುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕ್ಯಾಪ್ಶನ್ ಬರೆದು ಸೋಶಿಯಲ್ ಮೀಡಿಯಾದಲ್ಲಿ ಸಂಗೀತ ಫೋಟೋ ಹಂಚಿಕೊಂಡಿದ್ದಾರೆ.
ಇನ್ನು ಸಂಗೀತ ಹುಟ್ಟುಹಬ್ಬಕ್ಕೆ ಅವರ ಬಿಗ್ ಬಾಸ್ ನ ಆತ್ಮೀಯರಾದ ಡ್ರೋನ್ ಪ್ರತಾಪ್ (Drone Prathap) ಮತ್ತು ನೀತು ವನಜಾಕ್ಷಿ (Neetu Vanajakshi), ಮನೆಗೆ ಭೇಟಿ ನೀಡಿ, ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಪ್ರತಾಪ್ ತಮ್ಮ ಪ್ರೀತಿಯ ದೀದಿಗೆ ಡ್ರೆಸ್ ಗಿಪ್ಟ್ ಆಗಿ ನೀಡಿದ್ದಾನೆ. ಈ ಸಂದರ್ಭದಲ್ಲಿ ಸಂಗೀತಾ ಪ್ರತಾಪ್ ಗೆ ಅರತಿ ಎತ್ತಿ, ಕುಂಕುಮ ಹಚ್ಚಿ ರಾಖಿ ಕೂಡ ಕಟ್ಟಿದ್ದಾರೆ.