- Home
- Entertainment
- Sandalwood
- Sangeetha Sringeri: ಹೂವು ಹಿಡಿದು ಕಾಯ್ತಿದ್ದಾಳೆ ಈ ರಾಧೆ… ಬೇಗನೇ ನಿಮ್ ಕೃಷ್ಣ ಯಾರು ಹೇಳ್ಬಿಡಿ ಎಂದ ಫ್ಯಾನ್ಸ್
Sangeetha Sringeri: ಹೂವು ಹಿಡಿದು ಕಾಯ್ತಿದ್ದಾಳೆ ಈ ರಾಧೆ… ಬೇಗನೇ ನಿಮ್ ಕೃಷ್ಣ ಯಾರು ಹೇಳ್ಬಿಡಿ ಎಂದ ಫ್ಯಾನ್ಸ್
ಕನ್ನಡ ನಟಿ, ಬಿಗ್ ಬಾಸ್ ಸುಂದರಿ ಸಂಗೀತ ಶೃಂಗೇರಿ ನೀಲಿ ಟ್ರಾನ್ಪರೆಂಟ್ ಸೀರೆಯುಟ್ಟು ಯಾರಿಗೋ ಕಾಯ್ತಿದ್ದಾರೆ, ಫ್ಯಾನ್ಸ್ ಕೇಳ್ತಿದ್ದಾರೆ ಯಾರು ಆ ಹುಡುಗ ಹೇಳಿಬಿಡಿ ಎಂದು.

ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ಮೋಡಿ ಮಾಡಿದ ಬೆಡಗಿ ಸಂಗೀತ ಶೃಂಗೇರಿ. ಬಿಗ್ ಬಾಸ್ ಸೀಸನ್ 10 ರ ಮೂಲಕ ಸಖತ್ ಮನರಂಜನೆ ಕೊಟ್ಟು, ಸಖತ್ ಫೈಟ್ ಕೊಟ್ಟು, ಟಾಪ್ 3 ಫೈನಲಿಸ್ಟ್ ಆಗಿದ್ದ ಬೆಡಗಿ ಇವರು. ಬಿಗ್ ಬಾಸ್ ಬಳಿಕ ಸಂಗೀತಾ (Sangeetha Sringeri) ಅಭಿಮಾನಿಗಳ ಸಂಖ್ಯೆ ಕೂಡ ಸಿಕ್ಕಾಪಟ್ಟೆ ಹೆಚ್ಚಾಯ್ತು.
ಬಿಗ್ ಬಾಸ್ ನಿಂದ ಹೊರ ಬಂದ ನಂತರ ಸಂಗೀತ ಶೃಂಗೇರಿ, ಮಾರಿ ಗೋಲ್ಡ್ ಎನ್ನುವ ಸಿನಿಮಾದಲ್ಲಿ ದಿಗಂತ್ ಗೆ ನಾಯಕಿಯಾಗಿ ನಟಿಸಿದ್ದರು. ಅದಾದ ನಂತರ ಆಧ್ಯಾತ್ಮದಲ್ಲೇ ನಟಿ ಮುಳುಗಿದ್ದು, ಇದರ ಜೊತೆಗೆ ತಮ್ಮದೇ ಆದ ಬೀಡ್ಸ್ ಗಳ ಆನ್ ಲೈನ್ ಶಾಪ್ ತೆರೆದು, ಅದೇ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಮಿಂಚೋದು ಮಾತ್ರ ಮಿಸ್ ಮಾಡಿಲ್ಲ ನಟಿ.
ಹೌದು, ಸಂಗೀತ ಶೃಂಗೇರಿ ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟಿವ್ ಆಗಿದ್ದು, ಒಂದಲ್ಲ ಒಂದು ಫೋಟೊ ಶೂಟ್ ಮೂಲಕ ತಮ್ಮ ಇನ್’ಸ್ಟಾಗ್ರಾಂನಲ್ಲಿ ಮಿಂಚುತ್ತಿರುತ್ತಾರೆ. ಒಂದು ಸಲ ಟ್ರೆಡಿಶನಲ್ ವೇರ್ ಧರಿಸಿ ನಟಿ ಕಾಣಿಸಿಕೊಂಡರೆ, ಮತ್ತೊಮ್ಮೆ ಮಾಡರ್ನ್ ಅವತಾರದಲ್ಲಿ ಕಾಣಿಸಿಕೊಂಡು, ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿದ್ದರು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿರುವ ಸಂಗೀತ ಶೃಂಗೇರಿ, ಪಿಂಕ್ ಬಣ್ಣದ ಲಂಗ, ಬ್ಲೌಸ್ ಧರಿಸಿ, ಅದರ ಮೇಲೊಂದು ಟ್ರಾನ್ಸ್ಪರೆಂಟ್ ನೀಲಿ ಬಣ್ಣದ ನೆಟ್ ದುಪಟ್ಟಾ ಧರಿಸಿದ್ದು, ಕೈಯಲ್ಲಿ ತಾವರೆ ಹೂವು ಮುಡಿದು, ಅಭರಣ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ಸಂಗೀತ ತಮ್ಮ ಫೋಟೊ ಜೊತೆಗೆ ರಾಧೆಯ ಶಕ್ತಿ ಅವಳ ನಂಬಿಕೆಯಾಗಿತ್ತು - ಅವಳು ತನ್ನ ಜೀವನದಲ್ಲಿ ಕೃಷ್ಣನ ಉಪಸ್ಥಿತಿಯನ್ನು ಎಂದಿಗೂ ಅನುಮಾನಿಸಲಿಲ್ಲ ಎಂದು ಬರೆದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು, ನೀವು ಸಹ ನಿಮ್ಮ ಕೃಷ್ಣನಿಗೆ ಕಾಯ್ತಾ ಇದ್ದೀರಾ? ಹಾಗಿದ್ರೆ ನಿಮ್ಮ ಕೃಷ್ಣ ಯಾರು ಬೇಗನೆ ಹೇಳಿ ಎಂದು ಕೇಳಿಕೊಂಡಿದ್ದಾರೆ.
ಸಂಗೀತಾ ಅಂದಕ್ಕೆ ಮರುಳಾದ ಅಭಿಮಾನಿಗಳು ಅಪ್ಸರೆಯನ್ನೇ ಮೀರಿಸುವಂತಹ ದೇವತೆ, ಮುದ್ದು ಮನಸಿನ ಗೊಂಬೆ,ಪರಿಶುದ್ಧ ಮನಸ್ಸಿನ ರಾಧೆ ಸಂಗೀತ ಮೇಡಂ, ಪರಮ ಸುಂದರಿ, ನಮ್ಮ ಮುದ್ದು ರಾಧೆ ಎಂದು ಹೊಗಳಿದ್ದಾರೆ. ಅಷ್ಟೇ ಅಲ್ಲ, ಮೈಸೂರ್ ಸ್ಯಾಂಡಲ್ ಸೋಪಿಗೆ ತಮನ್ನಾ ಭಾಟಿಯಾ ಬದಲು ಇವರನ್ನೇ ಆಯ್ಕೆ ಮಾಡಬಹುದಿತ್ತೇನೋ… ಈಕೆ ಕರ್ನಾಟಕದ ಕ್ರಶ್ (karnataka Crush)ಎಂದು ಹೇಳಿದ್ದಾರೆ.