ಚಿರನಿದ್ರೆಗೆ ಜಾರಿದ ಚರಂಜೀವಿ ಅಂತಿಮ ದರ್ಶನ ಪಡೆದ ಸ್ಯಾಂಡಲ್‌ವುಡ್!

First Published Jun 8, 2020, 11:10 AM IST

'ವಾಯುಪುತ್ರ'ನಿಂದ ಸಿನಿ ಜರ್ನಿ ಆರಂಭಿಸಿ, 'ಶಿವಾರ್ಜುನ' ತನಕ ನಟಿಸಿ, ಹೃದಯವಂತನಾಗಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರನಾಗಿದ್ದ ಚಿರಜೀವಿ ಚಿರನಿದ್ರೆಗೆ ಜಾರಿರುವುದನ್ನು ಕಲ್ಪಿಸಿಕೊಳ್ಳುವುದೂ ಎಲ್ಲರಿಗೂ ಕಷ್ಟವಾಗಿದೆ. ಆದರೆ, ವಿಧಾಯಟವೇ ಬೇರೆ. ಸ್ಯಾಂಡಲ್‌ವುಡ್ ಪ್ರೀತಿಯ ಚಿರು ಕೈಯಲ್ಲಿ ಇನ್ನೂ ನಾಲ್ಕು ಚಿತ್ರಗಳಿದ್ದವು. ತಂದೆಯಾಗುವ ಸಂಭ್ರಮದಲ್ಲಿದ್ದರು. ಲಾಕ್‌ಡೌನ್‌ನಲ್ಲಿ ಮಡದಿ, ತಮ್ಮ, ನಾದಿನಿ, ಪೋಷಕರೊಂದಿಗೆ ನೆಮ್ಮದಿಯ, ಖುಷಿ ಕ್ಷಣಗಳನ್ನು ಕಳೆದ ಚಿರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಇವರ ಅಂತಿಮ ದರ್ಶನ ಪಡೆಯಲು ಇಡೀ ಗಾಂಧಿನಗರವೇ ಅಪೋಲೋ ಆಸ್ಪತ್ರೆ ಹಾಗೂ ಕೆ.ಆರ್.ರಸ್ತೆಯಲ್ಲಿರುವ ಅವರ ಮನೆಗೆ ದೌಡಾಯಿಸಿತ್ತು. ಅದರ ಕೆಲವು ಝಲಕ್..

ಫೋಟೋಸ್: ವೀರಮಣಿ