ಕ್ರಿಸ್ಮಿ ಮದುವೆ ಸಂಭ್ರಮ ಶುರು..! ಕ್ಯೂಟ್ ಜೋಡಿಯ ಫೋಟೋಸ್ ನೋಡಿ
First Published Feb 11, 2021, 12:49 PM IST
ಸ್ಯಾಂಡಲ್‌ವುಡ್‌ನ ಡಾರ್ಲಿಂಗ್ ಜೋಡಿ ಹಸೆಮಣೆ ಏರುತ್ತಿದೆ. ಮಿಲನಾ ಮತ್ತು ಕೃಷ್ಣ ಜೋಡಿಯ ವಿವಾಹ ಸಮಾರಂಭ ಸಂಭ್ರಮ ಶುರುವಾಗಿದೆ. Barrys.photography ಕ್ಲಿಕ್ಕಿಸಿದ ಚಂದದ ಫೋಟೋಸ್ ಇಲ್ನೋಡಿ

ಶುರುವಾಯ್ತು ಕೃಷ್ಣ - ಮಿಲನ ಮದುವೆ ಸಂಭ್ರಮ ಶುರುವಾಗಿದೆ.

ನಟಿ ಮಿಲನ ಹಾಗೂ ನಟ ಕೃಷ್ಣ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ

ಮದುವೆಗೂ ಮುನ್ನ ಮನೆಯಲ್ಲಿ ನಡೆಯೋ ಶಾಸ್ತ್ರದಲ್ಲಿ ಇಬ್ಬರು ಭಾಗಿಯಾಗಿದ್ದಾರೆ

ಅದ್ದೂರಿಯಾಗಿ ಮೆಹಂದಿ ಶಾಸ್ತ್ರ ನೆರವೇರಿದೆ.

ಡಾರ್ಲಿಂಗ್ ಜೋಡಿಯ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ

ಮೆಹಂದಿ ಅಂದ್ರೇನೇ ಅರಶಿನ ಬಣ್ಣದ ಡೆಕೊರೇಷನ್, ಉಡುಗೆ ಅಂತೆಲ್ಲ ಅನ್ಕೊಂಡಿದ್ರೆ ಈ ಜೋಡಿ ಡಿಫರೆಂಟ್ ಆಗಿದೆ.

ಕ್ರೀಂ ಕಲರ್ ಸೇರಿ ಎಲ್ಲವನ್ನೂ ತಿಳಿ ಬಣ್ಣದಲ್ಲೇ ಅಣಿಗೊಳಿಸಲಾಗಿದೆ

ಫೆಬ್ರವರಿ 14ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕುದ್ದಾಗಿ ತಮ್ಮ ಸಿನಿಮಾ ಗೆಳೆಯರಿಗೆ ಅಮಂತ್ರಣ ಪತ್ರಿಕೆ ಹಂಚಿದ್ದರು.

ಲವು ವರ್ಷಗಳಿಂದ ಪ್ರೀತಿಸುತ್ತಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಲವ್ ಮಾಕ್ಟೇಲ್ ಮೂಲಕ ಹಿಟ್ ಆಗಿದ್ದರು

ಶೂಟಿಂಗ್ ನಡುನಡುವೆ ಬಿಡುವು ಮಾಡಿಕೊಂಡು ಜೊತೆಯಾಗಿಯೇ ಮದುವೆ ಸಿದ್ಧತೆ ಮಾಡಿಕೊಂಡಿದ್ರು ಈ ಜೋಡಿ

ಎಲ್ಲಾನೂ ಡಿಫರೆಂಟ್ ಆಗಿರಬೇಕೆಂದು ಬಯಸುವ ಮಿಲನಾ ಪ್ರೀ ವೆಡ್ಡಿಂಗ್ ಡೆಕೊರೇಷನ್ ಹೇಗೆ ಆಯ್ಕೆ ಮಾಡಿಕೊಂಡಿದ್ದಾರೆ ನೋಡಿ

ಬ್ರೈಡ್ ಟು ಬಿ ಮಿಲನಾ ಅವರ ಬ್ಯಾಚುರಲ್ ಪಾರ್ಟಿ ಗ್ರ್ಯಾಂಡ್ ಆಗಿ ನಡೆದಿತ್ತು

ಭಾವೀ ಪತಿ ಡಾರ್ಲಿಂಗ್ ಕೃಷ್ಣ ಮತ್ತು ಗಲ್ರ್ಸ್ ಗ್ಯಾಂಗ್ ಜೊತೆ ಸಖತ್ ಎಂಜಾಯ್ ಮಾಡಿದ್ದರು ನಟಿ

ನನ್ನ ಗೊಂಬೆಯ ಬ್ಯಾಚುರಲ್ ಪಾರ್ಟಿ ಅಂತ ಕ್ಯಾಪ್ಶನ್ ಕೊಟ್ಟು ಕೃಷ್ಣ ಫೋಟೋ ಶೇರ್ ಮಾಡಿಕೊಂಡಿದ್ದರು.

ವಿಶೇಷ ಅಂದ್ರೆ ಮಿಲನಾ ಬ್ಯಾಚುರಲ್ ಪಾರ್ಟಿಯಲ್ಲಿ ಎಣ್ಣೆ ಇರಲಿಲ್ಲ. ಕೇಕ್ & ಕೂಲ್‌ಡ್ರಿಂಕ್ಸ್‌ನಲ್ಲಿ ಪಾರ್ಟಿ ನಡೆದಿರೋದು ವಿಶೇಷ.

ಗ್ರ್ಯಾಂಡ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸುತ್ತಿದ್ದರು ಕೃಷ್ಣ-ಮಿಲನ