ಅನ್ನದಾತನ ಸ್ಮರಿಸಿದ ಸ್ಯಾಂಡಲ್‌ವುಡ್ ಸ್ಟಾರ್‌ಗಳು
First Published Dec 23, 2020, 9:02 PM IST
ಬೆಂಗಳೂರು(ಡಿ. 23)ರಾಷ್ಟ್ರೀಯ ರೈತರ ದಿನದ ಅಂಗವಾಗಿ ಎಲ್ಲರೂ ಅನ್ನದಾತನಿಗೆ ಶುಭಾಶಯ ಕೋರಿದ್ದಾರೆ. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ರೈತನ ಕೊಡುಗೆಯನ್ನು ಸ್ಮರಿಸಿದ್ದಾರೆ.

ರೈತರು ನಿಜವಾದ ವೀರರು. ಸಮರ್ಪಣೆ ಮತ್ತು ಶ್ರಮದಿಂದ ಬಂಜರು ಭೂಮಿಯನ್ನು ಆಹಾರ ಉತ್ಪಾದಿಸುವ ಭುಮಿಯಾಗಿ ಪರಿವರ್ತಿಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಮರಿಸಿಕೊಂಡಿದ್ದಾರೆ.

ಅನ್ನದಾತ ಸುಖೀಭವ ಎಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ರೈತ ದಿನಕ್ಕೆ ಶುಭಾಶಯ ತಿಳಿಸಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?