ಚಂದನವನದ ಈ ಬ್ಯೂಟಿಗಳು ನೋಡೋದಕ್ಕೆ ಬಾಲಿವುಡ್’ನ ಈ ನಾಯಕಿರಂತೆ ಕಾಣ್ಸಲ್ವಾ?
ಚಂದನವನದಲ್ಲಿ ಮಿಂಚುತ್ತಿರುವ ಈ ನಟಿಯರಿಗೂ, ಬಾಲಿವುಡ್ ನ ನಾಯಕಿಯರಿಗೂ ಅಲ್ವ ಸ್ವಲ್ಪ ಹೋಲಿಕೆ ಇದೆ ಅಂತ ನಮಗೆ ಅನಿಸ್ತಾ ಇದೆ. ನಿಮಗೂ ಹಾಗೆ ಅನಿಸುತ್ತಾ?

ಸ್ಯಾಂಡಲ್ ವುಡ್ ನಾಯಕಿಯರಲ್ಲಿ (Sandalwood actressess) ಎಲ್ಲರೂ ಚೆಲುವೆಯರೇ. ಒಬ್ಬರಿಗಿಂತ ಒಬ್ಬರು ಚೆಲುವಿನಲ್ಲಿ ಕಾಂಪಿಟೀಶನ್ ನೀಡ್ತಾರೆ. ಆದರೆ ಇವತ್ತು ನಾವು ಇತರ ಭಾಷೆಯ ನಟಿಯರ ಹೋಲಿಕೆ ಇರುವಂತಹ ಕನ್ನಡದ ನಟಿಯರ ಬಗ್ಗೆ ಇಲ್ಲಿದೆ ಮಾಹಿತಿ.
ಚೈತ್ರಾ ಜೆ ಆಚಾರ್ - ಆಲಿಯಾ ಭಟ್
ಕನ್ನಡದ ಬೋಲ್ಡ್ ಬ್ಯೂಟಿ, ಸಪ್ತ ಸಾಗರದಾಚೆ ಚೆಲುವೆ ಚೈತ್ರಾ ಜೆ ಆಚಾರ್ (Chaithra J Achaar) ಒಂದೊಂದು ಫೋಟೊಗಳಲ್ಲಿ ಆಲಿಯಾ ಭಟ್ ರಂತೆ ಕಾಣಿಸುತ್ತಾರೆ. ಅದಕ್ಕಾಗಿಯೆ ಅವರನ್ನು ಕನ್ನಡದ ಆಲಿಯಾ ಭಟ್ ಎನ್ನುತ್ತಾರೆ.
ಸೌಂದರ್ಯ -ನಿತ್ಯ ಮೆನನ್
ಬಹು ಭಾಷಾ ನಟಿ ಸೌಂದರ್ಯ ಅಂದಕ್ಕೆ ಸರಿಸಾಟಿ ಯಾರೂ ಇಲ್ಲ ಅಂತಾನೆ ಹೇಳಬಹುದು. ಆದರೂ ನಿತ್ಯ ಮೆನನ್ (Nithya Menon) ಅವರನ್ನು ನೋಡಲು ಕೊಂಚ ಮಟ್ಟಿಗೆ ಸೌಂದರ್ಯ ಹೋಲಿಕೆ ಕಾಣಿಸುತ್ತೆ.
ರಾಧಿಕಾ ಪಂಡಿತ್ - ಕಾವ್ಯಾ ಗೌಡ
ಇನ್ನು ಈ ಕನ್ನಡತಿಯರು ಕೂಡ ನೋಡೋದಕ್ಕೆ ಒಂದೇ ರೀತಿ ಇದ್ದಾರೆ. ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಹಾಗೂ ಕಿರುತೆರೆ ನಟಿ ಕಾವ್ಯಾ ಗೌಡ ಮುಖದಲ್ಲಿ ಸಾಮ್ಯತೆ ಇದೆ.
ಅಮೃತಾ ಅಯ್ಯಂಗಾರ್ - ಕರೀನಾ ಕಪೂರ್ ಖಾನ್
ಕನ್ನಡ ಚೆಲುವೆ ಅಮೃತಾ ಅಯ್ಯಂಗಾರ್ (Amrutha Ayyangar) ಕೂಡ ನೋಡೋದಕ್ಕೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಥರ ಇದ್ದಾರೆ ಅಲ್ವ? ಪೂರ್ತಿಯಾಗಿ ಅಲ್ಲ ಅಂದ್ರು ಕೊಂಚ ಮಟ್ಟಿಗೆಯಂತೂ ಹೋಲಿಕೆ ಇದೆ.
ಪ್ರಿಯಾಂಕ ತಿಮ್ಮೇಶ್ -ಭೂಮಿ ಫೆಡ್ನೇಕರ್
ಕನ್ನಡ ಬಿಗ್ ಬಾಸ್ ಹಾಗೂ ಕನ್ನಡ ಸಿನಿಮಾಗಳಲ್ಲಿ ಮಿಂಚಿದ ನಟಿ ಪ್ರಿಯಾಂಕ ತಿಮ್ಮೇಶ್ ಅವರು ನೋಡೋದಕ್ಕೆ ಒಂದು ಆಂಗಲ್ ನಲ್ಲಿ ಒಂದೇ ಥರ ಕಾಣಿಸ್ತಾರೆ.