MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಮಗುವಿನಂತಾದ ಅಮ್ಮನಿಗೆ ರೇಖಾದಾಸ್ ಆರೈಕೆ, ಕಷ್ಟದಲ್ಲೂ ತಾಯಿ ಕೈಬಿಡದ ನಟಿ

ಮಗುವಿನಂತಾದ ಅಮ್ಮನಿಗೆ ರೇಖಾದಾಸ್ ಆರೈಕೆ, ಕಷ್ಟದಲ್ಲೂ ತಾಯಿ ಕೈಬಿಡದ ನಟಿ

ಸ್ಯಾಂಡಲ್ ವುಡ್ ಹಿರಿಯ ನಟಿ ರೇಖಾದಾಸ್ ಕಷ್ಟದಲ್ಲೇ ಜೀವನ ಕಳೆದವರು. ಬಾಲ್ಯದಿಂದಲೇ ಬಡತನ ಅನುಭವಿಸಿದ್ದ ಅವರ ಜೀವನದಲ್ಲಿ ಸಾಕಷ್ಟು ನೋವು ತಿಂದಿದ್ದಾರೆ. ಆದ್ರೆ ಎಲ್ಲ ಕಷ್ಟದಲ್ಲಿ ಜೊತೆಗಿದ್ದ ಅಮ್ಮನನ್ನು ಮಾತ್ರ ಅವರು ಎಂದೂ ಬಿಟ್ಟಿಲ್ಲ. 

2 Min read
Author : Roopa Hegde
Published : May 02 2026, 06:21 PM IST
Share this Photo Gallery
  • FB
  • TW
  • Linkdin
  • Whatsapp
16
ಮಗುವಿನಂತಾದ ರೇಖಾದಾಸ್ ಅಮ್ಮ
Image Credit : Asianet News

ಮಗುವಿನಂತಾದ ರೇಖಾದಾಸ್ ಅಮ್ಮ

ಸ್ಯಾಂಡಲ್ ವುಡ್ ನಟಿ ರೇಖಾದಾಸ್ ಅಮ್ಮ ಮಗುವಿನಂತಾಗಿದ್ದಾರೆ. ಅವರಿಗೆ ಏಳಲು, ನಡೆದಾಡಲು ಸಾಧ್ಯವಿಲ್ಲ. ಸದಾ ಮಲಗಿರುವ ಅಮ್ಮನನ್ನು ಮಗುವಿನಂತೆ ಸಾಕ್ತಿದ್ದಾರೆ ರೇಖಾ ದಾಸ್. ತಮ್ಮ ಕಷ್ಟಗಳಲ್ಲಿ ಸದಾ ಜೊತೆಗಿದ್ದ ಅಮ್ಮನನ್ನು ರೇಖಾದಾಸ್ ದೂರ ಮಾಡಿಲ್ಲ. ಅವರ ಇಳಿವಯಸ್ಸಿನಲ್ಲಿ ಅಮ್ಮನಿಗೆ ಅಮ್ಮನಾಗಿದ್ದಾರೆ. ಈಗ ಅಮ್ಮನಿಗೆ ಸ್ನಾನ ಮಾಡಿಸುವ ವಿಡಿಯೋ ಒಂದನ್ನು ರೇಖಾದಾಸ್ ಹಂಚಿಕೊಂಡಿದ್ದಾರೆ.

26
ಬೆಡ್ ರಿಡನ್ ಆಗಿರುವವರಿಗೆ ಸ್ನಾನ ಮಾಡಿಸೋದು ಹೇಗೆ?
Image Credit : Asianet News

ಬೆಡ್ ರಿಡನ್ ಆಗಿರುವವರಿಗೆ ಸ್ನಾನ ಮಾಡಿಸೋದು ಹೇಗೆ?

ರೇಖಾದಾಸ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ಮಗಳೂ ಶ್ರವ್ಯಾ ರಾವ್ ಸೇರಿದಂತೆ ಅನೇಕರ ಜೊತೆಗಿರುವ ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ. ಆಗಾಗ ಅವರ ಅಮ್ಮನ ವಿಡಿಯೋಗಳನ್ನು ಅವರು ಪೋಸ್ಟ್ ಮಾಡ್ತಾರೆ. ಈಗ ಅಮ್ಮನ ಆರೈಕೆಯ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಅನೇಕರು ಬೆಡ್ ರಿಡನ್ ಆಗಿರುವ ನಿಮ್ಮ ಅಮ್ಮನ ಸ್ನಾನ ಹೇಗೆ ಮಾಡಿಸ್ತೀರಿ ಅಂತ ಕೇಳಿದ್ದರು. ಅದಕ್ಕೆ ವಿಡಿಯೋ ಮೂಲಕ ವಿವರಿಸಿದ್ದಾರೆ ರೇಖಾದಾಸ್.

Related Articles

Related image1
ಒಟಿಟಿಗೆ ಬಂದ ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌ರ Love Mocktail 3 Movie; ಯಾವಾಗ ರಿಲೀಸ್?‌
Related image2
Mom Era: ಮಾಲ್ಡೀವ್ಸ್‌ನಲ್ಲಿ ಮಗಳು-ಪತಿ ಜೊತೆ ಕಿಯಾರಾ: 'ತಾಯ್ತನದ ಖುಷಿ'ಯಲ್ಲಿ ಟಾಕ್ಸಿಕ್ ಬ್ಯೂಟಿ!
36
 ಅಮ್ಮನ ಆರೈಕೆ
Image Credit : Asianet News

ಅಮ್ಮನ ಆರೈಕೆ

ರೇಖಾದಾಸ್ ಟೆರೆಸ್ ಗೆ ಅಮ್ಮನನ್ನು ಕರೆತಂದಿದ್ದಾರೆ. ಪಾರಿವಾಳವನ್ನು ನೋಡ್ತಾ ಖುಷಿಯಾಗಿದ್ದ ಅವರ ಅಮ್ಮನನ್ನು ರೇಖಾದಾಸ್ ಪ್ರೀತಿಯಿಂದ ಮಾತನಾಡಿಸ್ತಿದ್ದಾರೆ. ನಂತ್ರ ನಿಧಾನವಾಗಿ ಕುಳಿತಲ್ಲೇ ಸ್ನಾನ ಮಾಡಿಸಿ, ಬೇರೆ ಬಟ್ಟೆ ಹಾಕಿ, ಬೆಡ್ ಗೆ ತಂದು ಮಲಗಿಸಿದ್ದಾರೆ.

46
ನೆಟ್ಟಿಗರ ಮೆಚ್ಚುಗೆ
Image Credit : Asianet News

ನೆಟ್ಟಿಗರ ಮೆಚ್ಚುಗೆ

ರೇಖಾದಾಸ್ ಈ ವಿಡಿಯೋ ನೋಡಿದ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಅಮ್ಮನ ಆರೈಕೆ ಮಾಡುವ ಭಾಗ್ಯ ಎಲ್ಲರಿಗೂ ಸಿಗೋದಿಲ್ಲ. ನಿಮಗೆ ಸಿಕ್ಕ ಅವಕಾಶವನ್ನು ನೀವು ಚೆನ್ನಾಗಿ ಮಾಡ್ತಿದ್ದೀರಿ. ಆ ದೇವರು ನಿಮಗೆ ಜೀವನದಲ್ಲಿ ನೆಮ್ಮದಿ, ಖುಷಿ ನೀಡ್ಲಿ ಅಂತ ಹಾರೈಸಿದ್ದಾರೆ. ಪಾಲಕರು ಹಾಸಿಗೆ ಹಿಡಿಯುತ್ತಿದ್ದಂತೆ ಅವರನ್ನು ದೂರ ಮಾಡುವ ಈ ಕಾಲದಲ್ಲಿ, ಆರ್ಥಿಕ ಸಮಸ್ಯೆ, ಕಷ್ಟವಿದ್ದಾಗ್ಲೂ ಅಮ್ಮನನ್ನು ಪ್ರೀತಿಯಿಂದ ನೋಡಿಕೊಂಡ ರೇಖಾದಾಸ್ ಎಲ್ಲರಿಗೆ ಮಾದರಿಯಾಗಿದ್ದಾರೆ.

56
ಜೀವನದಲ್ಲಿ ನೋವುಂಡ ರೇಖಾದಾಸ್
Image Credit : Asianet News

ಜೀವನದಲ್ಲಿ ನೋವುಂಡ ರೇಖಾದಾಸ್

ಸ್ಯಾಂಡಲ್ವುಡ್ ನಲ್ಲಿ ಹೆಚ್ಚು ಹಾಸ್ಯಪಾತ್ರಗಳಲ್ಲಿಯೇ ಕಾಣಿಸಿಕೊಂಡ ರೇಖಾದಾಸ್ ಬದುಕು ಮಾತ್ರ ದುಃಖಕರವಾಗಿದೆ. ಅವರ ತಂದೆ ನೇಪಾಳದವರು. ತಾಯಿ ರಾಜಸ್ತಾನದವರು. ತಂದೆ ಮಿಲಿಟರಿಯಲ್ಲಿ ಕೆಲಸ ಮಾಡ್ತಿದ್ದ ಕಾರಣ ರೇಖಾದಾಸ್ ಬೇರೆ ಬೇರೆ ಊರಿಗೆ ಹೋಗ್ತಿದ್ದರು. ನಂತ್ರ ಬೆಂಗಳೂರಿನಲ್ಲಿ ನೆಲೆನಿಂತ ಅವರಿಗೆ ಆರಂಭದಲ್ಲಿ ಕನ್ನಡ ಕಠಿಣವಾಯ್ತು. ಸಿನಿಮಾಕ್ಕಾಗಿ ಕನ್ನಡ ಕಲಿತ ರೇಖಾದಾಸ್ ಬದುಕು ಹಾಳಾಗಿದ್ದು ಓಂ ಪ್ರಕಾಶ್ ಅವರಿಂದ. ಓಂ ಪ್ರಕಾಶ್ ಒತ್ತಾಯಕ್ಕೆ 17ನೇ ವಯಸ್ಸಿನಲ್ಲಿಯೇ ಮದುವೆಯಾದ ರೇಖಾದಾಸ್ ಗಂಡನ ಜೊತೆ ಜೀವನ ನಡೆಸಿದ್ದು ಬರೀ ಒಂದುವರೆ ತಿಂಗಳು ಮಾತ್ರ.

66
ಬಡತನದಲ್ಲೂ ಕುಗ್ಗದ ರೇಖಾದಾಸ್
Image Credit : Asianet News

ಬಡತನದಲ್ಲೂ ಕುಗ್ಗದ ರೇಖಾದಾಸ್

ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ರೇಖಾದಾಸ್ ಗೆ ಕೆಲ ಸಮಯ ಕೆಲ್ಸವೇ ಇರ್ತಿರಲಿಲ್ಲ. ನಾಟಕ ಕಂಪನಿ ಅವರಿಗೆ ಬದುಕು ನೀಡಿತ್ತು. ಧಾರಾವಾಹಿಯಲ್ಲೂ ನಟಿಸಿರುವ ರೇಖಾದಾಸ್ ಗೆ ಈಗ ಮಗಳೇ ಭರವಸೆ. ಓಂ ಪ್ರಕಾಶ್ ರಿಂದ ಸಂಪೂರ್ಣ ದೂರವಾಗಿರುವ ರೇಖಾದಾಸ್, ಕಷ್ಟಗಳ ಮೇಲೆ ಕಷ್ಟ ಅನುಭವಿಸಿದ್ದಾರೆ. ತಮ್ಮ ಮೇಕಪ್ ಮೂಲಕವೇ ಎಲ್ಲರಿಂದ ಭಿನ್ನವಾಗಿ ಕಾಣ್ತಿದ್ದ ರೇಖಾದಾಸ್, ಟೆನಿಸ್ ಕೃಷ್ಣ ಅವರಿಗೆ 100 ಸಿನಿಮಾಗಳಲ್ಲಿ ಪತ್ನಿಯಾಗಿದ್ದರು. ರೇಖಾದಾಸ್ 680 ಕನ್ನಡ ಸಿನಿಮಾ, 500 ಸೀರಿಯಲ್ ಹಾಗೂ 3500 ಹ್ಯಾಸ್ಯ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. 6 ಸಾವಿರ ನಾಟಕ, 3ಸಾವಿರ ಆರ್ಕೆಸ್ಟ್ರಾ ಅವರ ಸಾಧನೆ ಪಟ್ಟಿಯಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ದೆಹಲಿಗೆ ಹೋಗಿ ಅಮಿತ್‌ ಶಾರನ್ನು ಭೇಟಿಯಾದ Rishab Shetty ; ಕುತೂಹಲ ಮೂಡಿಸಿದ ಭೇಟಿ; ಉದ್ದೇಶ ಏನಾಗಿತ್ತು?
Recommended image2
ಒಟಿಟಿಗೆ ಬಂದ ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌ರ Love Mocktail 3 Movie; ಯಾವಾಗ ರಿಲೀಸ್?‌
Recommended image3
PHOTOS: ವಿವಾಹ ವಾರ್ಷಿಕೋತ್ಸವದಂದು ಪತಿ ಚಿರಂಜೀವಿ ಸರ್ಜಾ ಕನಸು ಈಡೇರಿಸಿದ ನಟಿ ಮೇಘನಾ ರಾಜ್‌ ಸರ್ಜಾ!
Related Stories
Recommended image1
ಒಟಿಟಿಗೆ ಬಂದ ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌ರ Love Mocktail 3 Movie; ಯಾವಾಗ ರಿಲೀಸ್?‌
Recommended image2
Mom Era: ಮಾಲ್ಡೀವ್ಸ್‌ನಲ್ಲಿ ಮಗಳು-ಪತಿ ಜೊತೆ ಕಿಯಾರಾ: 'ತಾಯ್ತನದ ಖುಷಿ'ಯಲ್ಲಿ ಟಾಕ್ಸಿಕ್ ಬ್ಯೂಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved