'ಆ ಕಾರಣ'ಕ್ಕೆ ಆತ್ಮ*ಹತ್ಯೆ ಮಾಡಿಕೊಂಡ ಮುಟ್ಠಾಳ.. ಸಿಡಿದೆದ್ದ ರಚಿತಾ ರಾಮ್!
ಬಾಡಿ ಶೇಮಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬೋಲ್ಡ್ ಎನ್ನಬಹುದಾದ ಉತ್ತರ ಕೊಟ್ಟಿದ್ದಾರೆ. 'ಹೆಣ್ಣು ಮಕ್ಕಳು ಯಾಕೆ ದಪ್ಪ ಆಗುತ್ತಾರೆ? ಅವರಿಗೆ ಎದುರಾಗುವ ದೈಹಿಕ ಸಮಸ್ಯೆಗಳೇನು?' ಈ ಬಗ್ಗೆ ರಚಿತಾ ರಾಮ್ ಮಾತಾಡಿದ್ದಾರೆ. ಇದಕ್ಕೆ

ಸ್ಯಾಂಡಲ್‌ವುಡ್ ನಟಿ, 'ಲೇಡಿ ಬಾಸ್' ಖ್ಯಾತಿಯ ನಟಿ ರಚಿತಾ ರಾಮ್ (Rachita Ram) ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗವನ್ನು ಆಳಿದವರು. ಇಂಥ ನಟಿ ರಚಿತಾ ರಾಮ್ ಇತ್ತೀಚೆಗೆ 'ಕಲ್ಟ್' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರಿಂದ ಬಾಡಿ ಶೇಮಿಂಗ್ ಬಗ್ಗೆ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಡಿಂಪಲ್ ಕ್ವೀನ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಸ್ವತಃ ರಚಿತಾ ರಾಮ್‌ಗೂ ಬಾಡಿ ಶೇಮಿಂಗ್ ಅನುಭವಗಳು ಆಗಿವೆ. ಅದನ್ನು ಅವರು ತುಂಬಾ ಸಮರ್ಥವಾಗಿ ಎದುರಿಸಿದ್ದಾರೆ. ಹೀಗಾಗಿ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅವರಿಂದ ಸ್ಟ್ರಾಂಗ್ ಉತ್ತರ ಸಿಕ್ಕಿದೆ.
ಬಾಡಿ ಶೇಮಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬೋಲ್ಡ್ ಎನ್ನಬಹುದಾದ ಉತ್ತರ ಕೊಟ್ಟಿದ್ದಾರೆ. 'ಹೆಣ್ಣು ಮಕ್ಕಳು ಯಾಕೆ ದಪ್ಪ ಆಗುತ್ತಾರೆ? ಅವರಿಗೆ ಎದುರಾಗುವ ದೈಹಿಕ ಸಮಸ್ಯೆಗಳೇನು?' ಈ ಬಗ್ಗೆ ರಚಿತಾ ರಾಮ್ ಮಾತಾಡಿದ್ದಾರೆ. 'ಯಾರೇ ಏನೇ ಅಂದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದಿದ್ದಾರೆ.
ಬಾಡಿ ಶೆಮಿಂಗ್‌ಗೆ ಒಳಾಗಾಗಿ ಜೀವ ಕಳೆದುಕೊಂಡವರನ್ನು 'ಮುಟ್ಠಾಳರು' ಎಂದಿದ್ದಾರೆ. ಬಾಡಿ ಶೇಮಿಂಗ್ ಅನುಭವಿಸಿ ಕೆಲವರು ಡಿಪ್ರೆಶನ್‌ಗೆ ಹೋಗುತ್ತಾರೆ. ಅದರಲ್ಲೂ ಕೆಲವರು ಆತ್ಮ*ಹತ್ಯೆಯನ್ನೂ ಮಾಡಿಕೊಳ್ಳುತ್ತಾರೆ. ಅಂಥವರ ಬಗ್ಗೆ ನಟಿ ರಚಿತಾ ರಾಮ್ ಆಡಿರುವ ಮಾತು ಹೀಗಿದೆ:-
'ಅವರವರ ದೇಹ ಅವರಿಗಷ್ಟೇ ಗೊತ್ತು.. ಇಲ್ಲಿರೋ ಎಲ್ಲಾ ಹೆಣ್ಣು ಮಕ್ಕಳ ಬಾಡಿ ಟೈಪ್ ಬೇರೆಬೇರೆ ತರಹವೇ ಇರುತ್ತೆ. ಕೆಲವರು ಡಯೆಟ್ ಮಾಡಿದರೂ ದಪ್ಪ ಆಗುತ್ತಾರೆ. ಕೆಲವರಿಗೆ ಪಿಸಿಒಡಿ ಹಾಗೂ ಪಿಸಿಒಸಿ ಸಮಸ್ಯೆ ಇರುತ್ತೆ. ಕೆಲವರು ಮಾನಸಿಕ ಒತ್ತಡದಿಂದಲೂ ದಪ್ಪ ಆಗುತ್ತಾರೆ. ಅವರವರ ಬಾಡಿ ಟೈಪ್ ಅವರಿಗೆ ಮಾತ್ರ ಗೊತ್ತಿರುತ್ತೆ. ಹಲವರು ವರ್ಕ್ಔಟ್ ಮಾಡುತ್ತಾರೆ, ಡಯೆಟ್ ಮಾಡುತ್ತಾರೆ. ಆದರೆ ಎಲ್ಲರೂ ಒಂದೇ ರೀತಿ ಜೀರೋ ಸೈಜ್ ಆಗಲು ಸಾಧ್ಯವಿಲ್ಲ.
ಮುಟ್ಟಿನ ಬಗ್ಗೆ ರಚಿತಾ ಟಾಕ್
"ಇಷ್ಟು ಓಪನ್ ಆಗಿ ಸುದ್ದಿಗೋಷ್ಠಿಯಲ್ಲಿ ನಾವು ಮಾತಾಡುತ್ತಿದ್ದೇವೆ ಅಂದಾಗ- ಮುಟ್ಟಾಗುವುದಕ್ಕೂ ಐದು ದಿನ ಮುನ್ನ ಬಾಡಿ ಕೋಲ್ಡ್ ಆಗುತ್ತೆ. ಮುಟ್ಟು ಮುಗಿದ ಐದು ದಿನಗಳು ಆದ್ಮೇಲೆ ಸಹ ನಾವು, ಅಂದರೆ ಹೆಣ್ಣುಮಕ್ಕಳು ಕುಗ್ಗಿ ಹೋಗುತ್ತೇವೆ. ಎಲ್ಲಾ ಗಂಡು ಮಕ್ಕಳಿಗೂ ನಾವು ಹೋಗಿ 'ನಾನು ಹೀಗಿದ್ದೇನೆ' ಎಂದು ಹೇಳುತ್ತ ಮೆಚ್ಚಿಸುವುದಕ್ಕೆ ಪ್ರಯತ್ನಿಸಲು ಆಗುವುದಿಲ್ಲ. ನಮ್ಮ ಬಾಡಿ, ನಮ್ಮ ಇಷ್ಟ.. ಅಷ್ಟಕ್ಕೂ ಇದು ನಮ್ಮ ಲೈಫ್.. ಕಿವಿ ಕೊಟ್ಕೊಂಡು ಹೋಗುತ್ತಿದ್ದರೆ, ನಾವು ಎಲ್ಲಾ ಹೆಣ್ಣುಮಕ್ಕಳು ಅಳುತ್ತಾ ಕುಳಿತುಕೊಳ್ಳಬೇಕಾಗುತ್ತೆ." ಎಂದು ರಚಿತಾ ರಾಮ್ ಹೇಳಿದ್ದಾರೆ.
ನಮ್ಮ ದೇಹವನ್ನು ಪೂಜಿಸಬೇಕು ಎಂದ ರಚಿತಾ ರಾಮ್
"ನಾವು ಹೇಗೇ ಇದ್ದರೂ ನಮ್ಮ ದೇಹವನ್ನು ನಾವು ಪೂಜಿಸಬೇಕು. ಇದು ನಮ್ಮ ದೇಹ. ನಾವು ಯಾಕೆ ಬೇರೆಯವರು ಏನೋ ಹೇಳ್ತಾರೆ ಎಂದು ಖಿನ್ನತೆಗೆ ಒಳಗಾಗಬೇಕು. ನನಗೆ ಏನು ಬೇಕು ಅಂತ ನನಗೆ ಗೊತ್ತಿದೆ. ಯಾರಿಗೆ ಏನು ಬೇಕು ಅಂತ ಅವರವರಿಗೆ ಗೊತ್ತಿರುತ್ತೆ.. ಕೆಲವರು ಐದು ಗಂಟೆ ನಿದ್ದೆ ಮಾಡಿದರೆ ಸಾಲೋದಿಲ್ಲ, ದಪ್ಪ ಆಗುತ್ತಾರೆ. ಅವರಿಗೆ ಎಂಟು ಗಂಟೆ ನಿದ್ದೆ ಮಾಡಲೇ ಬೇಕಾಗುತ್ತೆ. ನನಗೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು. ಇಲ್ಲಾ ಅಂದರೆ, ನಾನು ದಪ್ಪಗೆ ಕಾಣುತ್ತೇನೆ. ಅವರವರ ರೀತಿ-ನೀತಿ ಬೇರೆಯೇ ಇರುತ್ತೆ" ಎಂದು ರಚಿತಾ ರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆತ್ಮ*ಹತ್ಯೆ ಮಾಡಿಕೊಂಡವರು ಮುಟ್ಟಾಳರು
"ಬಾಡಿ ಶೇಮಿಂಗ್‌ನಿಂದ ಅವಮಾನಕ್ಕೆ ಒಳಗಾಗಿ ಆತ್ಮ*ಹತ್ಯೆ ಮಾಡಿಕೊಂಡವರು ಖಂಡಿತವಾಗಿಯೂ ಮುಟ್ಟಾಳರು. ನಾನು ಅಂಥವರ ಬಗ್ಗೆ ಮಾತಾಡೋದಕ್ಕೆ ಇಷ್ಟಪಡೋದಿಲ್ಲ. ಅದಕ್ಕೆ ಅವರು ಅರ್ಹರೂ ಅಲ್ಲ. ಒಂದು ಜೀವ, ಒಂದು ಜೀವನ. ಯಾಕೆ ಎಲ್ಲರೂ ನೆಗೆಟಿವ್ ಕಾಮೆಂಟ್‌ಗಳಿಗೆ ಕಿವಿ ಕೊಡುತ್ತಿದ್ದಾರೆ? ಸುತ್ತಲೂ ನೋಡಿದರೆ ಬೇಕಾದಷ್ಟು ಪೊಸೆಟಿವ್ ಅಂಶಗಳಿವೆ, ಕಣ್ಣು ತೆರೆದು ನೋಡಬೇಕಷ್ಟೇ.. ಎನೋ ಅವರಿವರ ಬಗ್ಗೆ ಮಾತಾಡುವವರು ಮಾತಾಡುತ್ತಲೇ ಇರುತ್ತಾರೆ.. ನಾವು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು" ಎಂದು ರಚಿತಾ ರಾಮ್ ಹೇಳಿದ್ದಾರೆ.
ನಟಿ ರಚಿತಾ ರಾಮ್ ಹೇಳಿಕೆಗೆ ನೆಟ್ಟಿಗರು ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಲವರು ರಚಿತಾ ರಾಮ್ ಅವರ ನೇರ ನಡೆ-ನುಡಿಗೆ ಶಹಬ್ಬಾಸ್ ಎಂದಿದ್ದರೆ ಹಲವರು ರಚಿತಾ ರಾಮ್ ಅವರು ದೇಹ-ಮನಸ್ಸು ಹಾಗೂ ಬಾಡಿ ಶೇಮಿಂಗ್ ಪರಿಣಾಮಗಳ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ, ಚೆನ್ನಾಗಿ ಟಿಪ್ಸ್ ಹೇಳಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ರಚಿತಾ ರಾಮ್ ಪರ ಮೆಚ್ಚುಗೆಯ ಅಲೆ ಎದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

