ಗುರು ಶಿಷ್ಯರು ಚಿತ್ರದಲ್ಲಿ ರವಿಚಂದ್ರನ್ ಅಭಿಮಾನಿಯಾಗಿ ನಿಶ್ವಿಕಾ ನಾಯ್ಡು

First Published May 19, 2021, 10:50 AM IST

ನಟಿ ನಿಶ್ವಿಕಾ ನಾಯ್ಡು ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇದರ ಪ್ರಯುಕ್ತ ಶರಣ್ ನಾಯಕನಾಗಿ ನಟಿಸುತ್ತಿರುವ ‘ಗುರುಶಿಷ್ಯರು’ ಚಿತ್ರತಂಡದಿಂದ ವಿಶೇಷವಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗುತ್ತಿದೆ. ಶರಣ್ ಹಾಗೂ ತರುಣ್ ಸುಧೀರ್ ಜತೆಯಾಗಿ ನಿರ್ಮಿಸುತ್ತಿರುವ, ಜಡೇಶ್ ಕುಮಾರ್ ಹಂಪಿ ನಿರ್ದೇ ಶನದ ‘ಗುರು ಶಿಷ್ಯರು’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಿಶ್ವಿಕಾ ನಾಯ್ಡು ಜೊತೆ ಆರ್. ಕೇಶವಮೂರ್ತಿ ನಡೆಸಿದ ಸಂದರ್ಶನವಿದು.