ಇದ್ದಕ್ಕಿದ್ದಂತೆ ಮೇಘನಾ ರಾಜ್ ಕೊಟ್ರು ಬ್ರೇಕಿಂಗ್.. ಆ ದಿನಕ್ಕೆ ಕಾಯಬೇಕು!
ಬೆಂಗಳೂರು(ಫೆ. 10) ಜೂನಿಯರ್ ಚಿರು ಆರೈಕೆಯಲ್ಲಿ ಬ್ಯುಸಿಯಾಗಿರುವ ನಟಿ ಮೇಘನಾ ರಾಜ್ ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆ ಭೋಜನ ಸವಿದಿದ್ದಾರೆ.ರಾಗಿಣಿ ಪ್ರಜ್ವಲ್ ಹಾಗೂ ಪನ್ನಗಾ ಭರಣ ಶೇರ್ ಮಾಡಿಕೊಂಡ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಡ ನಡುವೆ ಮೇಘನಾ ಮತ್ತೊಂದು ದುದ್ದಿ ಕೊಟ್ಟಿದ್ದಾರೆ. ಹಾಗಾದರೆ ಏನದು ವಿಚಾರ ಇಲ್ಲಿದೆ ವಿವರ..
ಮೇಘನಾ ರಾಜ್ ಅಭಿಮಾನಿಗಳಿಗೆ ಕುತೂಹಲ ಕೆರಳಿಸುವ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಮಗನ ಜೊತೆ ಬ್ಯುಸಿಯಾಗಿರುವ ಮೇಘನಾ ರಾಜ್ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವುದರ ಬಗ್ಗೆ ಈ ಹಿಂದೆ ಸಂದರ್ಶವೊಂದರಲ್ಲಿ ಹೇಳಿದ್ದರು.
ಬಣ್ಣವೇ ಬದುಕು ಎಂದು ಭಾವಿಸಿರುವ ನಟಿ ಎಂದಿಗೂ ಚಿತ್ರರಂಗದಿಂದ ದೂರು ಉಳಿಯುವುದಿಲ್ಲ ಎಂಬ ಭರವಸೆ ನೀಡಿದ್ದರು.
ಇದೇ ಫೆಬ್ರವರಿ 19ರಂದು ಧ್ರುವ ಸರ್ಜಾ ಪೊಗರು ಸಿನಿಮಾ ರಿಲೀಸ್ ಆಗಲಿದ್ದು, ಮೇಘನಾ ಕೂಡ ಕೆಲವೊಂದು ಫೋಟೋ ಹಾಗೂ ವಿಡಿಯೋ ಶೇರ್ ಮಾಡುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ.
ಈಗ ಅದೆಲ್ಲದಕ್ಕೂ ಮೀರಿದ ಒಂದು ಸುದ್ದಿ ನೀಡಿದ್ದಾರೆ.
ಫೆ. 12 , 2021 ಒಂದು ವಿಶೇಷ ಸುದ್ದಿ ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ.
ಇದಕ್ಕೆ ಸಾಕಷ್ಟು ಕಮೆಂಟ್ ಗಳು ಬಂದಿವೆ.ಏನು ಸುದ್ದಿ ಎಂದು ಕೇಳಿದವರಿಗೆ ನೀವೇ ಗೆಸ್ ಮಾಡಿ ಎಂದು ನಟಿ ಹೇಳಿದ್ದಾರೆ.
ಮಗುವಿಗೆ ಹೆಸರು ಇಡುತ್ತಿದ್ದೀರಾ ಎಂದು ಅಭಿಮಾನಿಗಳು ಕೇಳಿದ್ದಾರೆ.
ಅಥವಾ ಮಗುವಿನ ಪೋಟೋ ಶೇರ್ ಮಾಡಿಕೊಳ್ಳುತ್ತೀರಾ ಎಂದು ಕೇಳಲಾಗಿದೆ.
ನಾವು ಕೂಡಾ ಆ ಸುದ್ದಿಗೆ ಕಾಯುತ್ತಿದ್ದು ಉತ್ತರ ಬೇಗನೇ ಹೇಳಿ ಮೇಡಂ ಎಂದು ದುಂಬಾಲು ಬಿದ್ದವರು ಇದ್ದಾರೆ.