ಪುಸ್ತಕ ಹಿಡಿದು ಐರಾ ಗಾಢ ಅಧ್ಯಯನ, ಕಾರಣ ಕೊಟ್ಟ ರಾಧಿಕಾ ಪಂಡಿತ್!
ಬೆಂಗಳೂರು(ಜು.27) ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಪುಸ್ತಕ ಹಿಡಿದು ಕುಳಿತಿದ್ದಾಳೆ. ತಾಯಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಮಗಳು ಗಾಢ ಅಧ್ಯಯನದಲ್ಲಿ ತೊಡಗಿರುವ ಪೋಟೋ ಶೇರ್ ಮಾಡಿಕೊಂಡಿದ್ದಾರೆ.
ಡಿಸೆಂಬರ್ 2 ಐರಾ ಜನ್ಮದಿನ, ಈ ಬಾರಿಯ ಡಿಸೆಂಬರ್ ಗೆ ಎರಡು ವರ್ಷ ತುಂಬಲಿದೆ.
ಕಳೆದ ವರ್ಷದ ಜನ್ಮದಿನದಲ್ಲಿ ಇಡೀ ಸ್ಯಾಂಡಲ್ ವುಡ್ ಭಾಗಿಯಾಗಿತ್ತು.
ದಿನದಿಂದ ದಿನಕ್ಕೆ ಸಹಜವಾಗಿಯೇ ಮಗಳ ಗ್ರಹಿಸುವ ಶಕ್ತಿ, ಕಲಿಕೆ ಎಲ್ಲವೂ ಹೆಚ್ಚಾಗುತ್ತಿದೆ ಎಂದು ರಾಧಿಕಾ ತಿಳಿಸಿದ್ದಾರೆ.
ಪರೀಕ್ಷೆ ಎದುರಾದಾಗಲೂ ಯಾರು ಇಷ್ಟು ಏಕಾಗ್ರತೆಯಿಂದ ಓದುವುದು ಸುಳ್ಳು!
ಪೋನ್ ಟಿವಿ ಬದಲಾಗಿನ ಆಕೆಗೆ ನಾನು ಪುಸ್ತಕ ನೀಡುತ್ತಿದ್ದೇನೆ. ಈ ಮೂಲಕ ಆಕೆ ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಿದ್ದಾಳೆ.
ಹೌದು ಆಕೆಗೆ ಈಗ ಓದಲು ಸಾಧ್ಯವಾಗುವುದಿಲ್ಲ, ಆದರೆ ಚಿತ್ರದ ಮುಖೇನ ತಿಳಿದುಕೊಳ್ಳುತ್ತಿದ್ದಾಳೆ.
ಪುಸ್ಕ ನೀಡಿದ ರಘು ಮುಖರ್ಜಿ ಅವರಿಗೂ ಧನ್ಯವಾದ ಎಂದು ರಾಧಿಕಾ ಪಂಡಿತ್ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಐರಾ ಪುಟ್ಟ ಫ್ರೆಂಡ್ ನಂದನಾ ಪ್ರಭಾಕರ್ ಮುಖರ್ಜಿಗೆ ಧನ್ಯವಾದ ಹೇಳಲು ರಾಧಿಕಾ ಮರೆತಿಲ್ಲ.