- Home
- Entertainment
- Sandalwood
- ರಾಕಿ ಹಬ್ಬ ಆಚರಿಸಿದ ರಿಷಭ್ ಶೆಟ್ಟಿ ಮಕ್ಕಳು: ಪ್ರೀತಿಯ ಚಿಂಟು ಅಣ್ಣನ ಜೊತೆ ಪ್ರಗತಿ ಶೆಟ್ಟಿ ರಕ್ಷಾ ಬಂಧನ ಸಂಭ್ರಮ
ರಾಕಿ ಹಬ್ಬ ಆಚರಿಸಿದ ರಿಷಭ್ ಶೆಟ್ಟಿ ಮಕ್ಕಳು: ಪ್ರೀತಿಯ ಚಿಂಟು ಅಣ್ಣನ ಜೊತೆ ಪ್ರಗತಿ ಶೆಟ್ಟಿ ರಕ್ಷಾ ಬಂಧನ ಸಂಭ್ರಮ
ಸೋದರ ಸೋದರಿಯರ ಹಬ್ಬ ರಕ್ಷಾ ಬಂಧನವನ್ನು ದೇಶಾದ್ಯಂತ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಕಿರಿಯರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ರಕ್ಷಾಬಂಧನ ಹಬ್ಬ ಆಚರಿಸಿದ್ದು ಸಾಮಾಜಿಕ ಜಾಲತಾಣಗಳು ರಕ್ಷಾ ಬಂಧನದ ಸುಂದರ ಫೋಟೋಗಳಿಂದ ತುಂಬಿ ಹೋಗಿವೆ. ಅದೇ ರೀತಿ ನಟ ರಿಷಭ್ ಶೆಟ್ಟಿ ಕೂಡ ತಮ್ಮ ಮಕ್ಕಳಿಬ್ಬರು ರಕ್ಷಾಬಂಧನ ಹಬ್ಬ ಆಚರಿಸಿದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

ರಕ್ಷಿತ್ ಶೆಟ್ಟಿ ಪ್ರಗತಿ ಶೆಟ್ಟಿ ರಾಖಿ ಸಂಭ್ರಮ
ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ರಕ್ಷಾ ಬಂಧನ ಹಬ್ಬವನ್ನು ನಟ, ಸೋದರ ರಕ್ಷಿತ್ ಶೆಟ್ಟಿ ಜೊತೆ ಸಂಭ್ರಮದಿಂದ ಆಚರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಪ್ರಗತಿ ಶೆಟ್ಟಿ ರಾಖಿ ಸಂಭ್ರಮ
ನನ್ನ ಚಿಂಟು ಅಣ್ಣನ ಜೊತೆ ರಕ್ಷಾಬಂಧನದ ಕ್ಷಣಗಳು ಎಲ್ಲರಿಗೂ ರಕ್ಷಾಬಂಧನ ಹಬ್ಬದ ಶುಭಾಶಯಗಳು ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಪ್ರಗತಿ ಶೆಟ್ಟಿ ರಾಖಿ ಸಂಭ್ರಮ
ರಿಷಭ್ ನನಗೆ ಬರೀ ಸ್ನೇಹಿತ ಮಾತ್ರವಲ್ಲ ಆತ ನನ್ನ ಪ್ರೀತಿಯ ಅಣ್ಣ ಎಂದು ಪ್ರಗತಿ ಶೆಟ್ಟಿ ಹೇಳಿಕೊಂಡಿದ್ದರು, ಅಲ್ಲದೇ ಈ ಹಿಂದೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವೇಳೆ ತುಂಬಾ ವಿಶೇಷವಾಗಿ ವಿಶ್ ಮಾಡಿದ್ದರು.
ರಕ್ಷಿತ್ ಶೆಟ್ಟಿ ಪ್ರಗತಿ ಶೆಟ್ಟಿ ರಾಖಿ ಸಂಭ್ರಮ
ಕಷ್ಟ ಸುಖ ಏನೇ ಬಂದರೂ ಮೊದಲಿಗೆ ನನಗೆ ನೆನಪಾಗೋದು ನೀನೆ, ನಿನ್ನಿಂದಲೇ ನನಗೆ ಆಧ್ಯಾತ್ಮದ ಮೇಲೆ ಆಸಕ್ತಿ ಬಂದಿದೆ. ನನಗೆ ಸದಾ ಭಾವನಾತ್ಮಕ ಬೆಂಬಲ ನೀಡುವ ನನಗಾಗಿ ಸದಾ ಇರುವ ನನ್ನ ಪ್ರೀತಿಯ ಚಿಂಟು ಅಣ್ಣ ಎಂದು ಪ್ರಗತಿ ಬರೆದುಕೊಂಡಿದ್ದರು.
ರಕ್ಷಿತ್ ಶೆಟ್ಟಿ ಪ್ರಗತಿ ಶೆಟ್ಟಿ ರಾಖಿ ಸಂಭ್ರಮ
ರಕ್ಷಿತ್ ಶೆಟ್ಟಿ ಸಿನಿಮಾ ಬಗ್ಗೆ ಹೇಳುವುದಾದರೆ ಪ್ರಸ್ತುತ ಅವರ ಸಪ್ತಸಾಗರದಾಚೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್ 1 ರಂದು ಸಿನಿಮಾ ತೆರೆ ಕಾಣಲಿದ್ದು, ಸಿನಿಮಾ ತಂಡ ಸಿನಿಮಾದ ಪ್ರಮೋಷನ್‌ನಲ್ಲಿ ತೊಡಗಿದೆ.
ರಿಷಭ್ ಶೆಟ್ಟಿ ಮಕ್ಕಳ ರಾಖಿ ಸಂಭ್ರಮ
ಅದೇ ರೀತಿ ನಟ ರಿಷಭ್ ಶೆಟ್ಟಿ ಕೂಡ ತಮ್ಮ ಮಕ್ಕಳಿಬ್ಬರು ರಕ್ಷಾಬಂಧನ ಹಬ್ಬ ಆಚರಿಸಿದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ರಿಷಭ್ ಶೆಟ್ಟಿ ಮಕ್ಕಳ ರಾಖಿ ಸಂಭ್ರಮ
ರಿಷಭ್ ಮಗ ರಣ್‌ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯಾ ಶೆಟ್ಟಿ ತಮ್ಮ ಮೊದಲ ರಾಖಿ ಹಬ್ಬವನ್ನು ಆಚರಿಸಿದ್ದು, ಅಣ್ಣ ತಂಗಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಣ್ಣನಿಗೆ ರಾಖಿ ಕಟ್ಟಿದ ಪುಟಾಣಿ ರಾಧ್ಯಾ ನಂತರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.
ರಿಷಭ್ ಶೆಟ್ಟಿ ಮಕ್ಕಳ ರಾಖಿ ಸಂಭ್ರಮ
ಅಣ್ಣ ರಣ್‌ವಿತ್ ಶೆಟ್ಟಿ ಕೂಡ ತಂಗಿಗೆ ಆಶೀರ್ವಾದ ಮಾಡಿದ್ದು. ರಣ್‌ವಿತ್ ಶೆಟ್ಟಿ ಬಿಳಿ ಪಂಚೆ ಮೆರೂನ್ ಬಣ್ಣದ ಜುಬ್ಬಾ ಧರಿಸಿದ್ದಾನೆ, ಸೋದರಿ ರಾಧ್ಯಾಗೆ ಫ್ರಾಕ್ ತೊಡಿಸಲಾಗಿದೆ. ಅಣ್ಣನ ಹಣೆಗೆ ರಾಧ್ಯಾ ಸಿಂಧೂರವಿಟ್ಟಿದ್ದು, ಮುದ್ದಿನ ತಂಗಿಗೆ ರಣ್‌ವಿತ್ ಸಿಂಗ್ ಸಿಹಿ ತಿನ್ನಿಸುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದಾಗಿದೆ.
ರಿಷಭ್ ಶೆಟ್ಟಿ ಮಕ್ಕಳ ರಾಖಿ ಸಂಭ್ರಮ
ಬ್ಲಾಕ್ ಕೂಲಿಂಗ್ ಗ್ಲಾಸ್ ಹಾಕಿ ಮೆಟ್ಟಿಲ ಮೇಲೆ ಕುಳಿತು ಅಣ್ಣ ತಂಗಿ ಫೋಟೋಗಳಿಗೆ ಸಖತ್ ಆಗಿ ಫೋಸ್ ನೀಡಿದ್ದಾರೆ. ಫೇಸ್‌ಬುಕ್‌ನಲ್ಲಿ ಫೋಟೋ ಪೋಸ್ಟ್ ಮಾಡಲಾಗಿದ್ದು, ಅಭಿಮಾನಿಗಳು ಮುದ್ದು ಕಂದಮ್ಮಗಳಿಗೆ ಕಂದಮ್ಮಗಳಿಗೆ ರಕ್ಷಾಬಂಧನದ ಶುಭಾಶಯ ತಿಳಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಿಷಭ್ ಶೆಟ್ಟಿ ಮಕ್ಕಳ ರಾಖಿ ಸಂಭ್ರಮ
ಅಣ್ಣ ತಮ್ಮಂದಿರ ಶಾಶ್ವತ ಬಂಧದ ಸಡಗರಕ್ಕೆ ಸಾಕ್ಷಿಯಾಗುವ ರಕ್ಷಾ ಬಂಧನ ಹಬ್ಬದ ಶುಭಾಶಯಗಳು ಎಂದು ಬರೆದು ನಟ ನಿರ್ದೇಶಕ ರಿಷಭ್ ಶೆಟ್ಟಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ರಿಷಭ್ ಶೆಟ್ಟಿ ಮಕ್ಕಳ ರಾಖಿ ಸಂಭ್ರಮ
ಕಾಂತಾರ ಸಿನಿಮಾ ಶೂಟಿಂಗ್ ಸಮಯದಲ್ಲಿ ರಿಷಭ್ ಪತ್ನಿ ಪ್ರಗತಿ ಶೆಟ್ಟಿ 2ನೇ ಮಗುವಿಗೆ ಗರ್ಭಿಣಿಯಾಗಿದ್ದರು. ಆದರೂ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನ್ ಮಾಡುವ ಕೆಲಸದಲ್ಲಿ ಪ್ರಗತಿ ಶೆಟ್ಟಿ ಬ್ಯುಸಿಯಾಗಿದ್ದರು.
ರಿಷಭ್ ಶೆಟ್ಟಿ ಮಕ್ಕಳ ರಾಖಿ ಸಂಭ್ರಮ
ಮಾರ್ಚ್‌ನಲ್ಲಿ ಮಗಳು ರಾಧ್ಯಾ ಶೆಟ್ಟಿ ಮೊದಲ ಹುಟ್ಟುಹಬ್ಬವನ್ನು ದಂಪತಿ ಅದ್ಧೂರಿಯಾಗಿ ಆಚರಿಸಿದ್ದರು. 2016ರಲ್ಲಿ ಪರಿಚಯಸ್ಥರೊಬ್ಬರ ಮೂಲಕ ಪ್ರಗತಿ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಭೇಟಿಯಾಗಿದ್ದು, 2017ರಲ್ಲಿ ಮದುವೆಯಾಗಿದ್ದರು. ವಸ್ತ್ರ ವಿನ್ಯಾಸಕಿಯಾಗಿರುವ ಪ್ರಗತಿ ಶೆಟ್ಟಿ ಕಾಂತಾರ ಸಿನಿಮಾಗೆ ಕಸ್ಟ್ಯೂಮ್ ಡಿಸೈನ್ ಮಾಡಿದ್ದರು. ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಪ್ರಸ್ತುತ ಕಾಂತಾರ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಪತ್ನಿ ಮಕ್ಕಳ ಜೊತೆ ಸುಂದರ ಸಮಯ ಕಳೆಯುವ ಇವರು ಖುಷಿಯ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.