- Home
- Entertainment
- Sandalwood
- Rishab Shetty Temple Visit: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ರಿಷಭ್ ಶೆಟ್ಟಿ... ಸದ್ಯದಲ್ಲೇ ಬಿಗ್ ನ್ಯೂಸ್ ಕೊಡ್ತಾರಾ ಶೆಟ್ರು?
Rishab Shetty Temple Visit: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ರಿಷಭ್ ಶೆಟ್ಟಿ... ಸದ್ಯದಲ್ಲೇ ಬಿಗ್ ನ್ಯೂಸ್ ಕೊಡ್ತಾರಾ ಶೆಟ್ರು?
ನಟ ನಿರ್ದೇಶಕ ರಿಷಭ್ ಶೆಟ್ಟಿ ಪತ್ನಿ ಸಮೇತ ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಾನಕ್ಕೆ ಭೇಟಿ ನೀಡಿದ್ದು, ಇದು ಬಿಗ್ ಅಪ್ ಡೇಟ್ ಕೊಡುವ ಸೂಚನೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ನಟ, ನಿರ್ದೇಶಕನಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಭ್ ಶೆಟ್ಟಿ (Rishab Shetty) ಕಾಂತಾರಾ ಚಾಪ್ಟರ್ 1 ರಿಲೀಸ್ ಬಗ್ಗೆ ಈಗಾಗಲೇ ತಿಳಿಸಿದ್ದು, ಇದೀಗ ಮತ್ತೊಂದು ದೊಡ್ಡ ಅಪ್ ಡೇಟ್ ಕೊಡೋದಕ್ಕೆ ನಟ ತಯಾರಿ ನಡೆಸಿದ್ದಾರೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ಕಾರಣ ರಿಷಭ್ ಶೆಟ್ಟಿಯವರ ಕೊಲ್ಲೂರು ಭೇಟಿ.
ಹೌದು, ರಿಷಭ್ ಶೆಟ್ಟಿಯವರು ಪತ್ನಿ ಪ್ರಗತಿ ಶೆಟ್ಟಿ ಜೊತೆ ಇತಿಹಾಸ ಪ್ರಸಿದ್ಧ ಕೊಲ್ಲೂರು ಮುಕಾಂಬಿಕಾ ದೇಗುಲಕ್ಕೆ (Kollur Mookambika temple) ಭೇಟಿ ನೀಡಿ, ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿ ಬಂದಿದ್ದಾರೆ. ಶ್ರೀ ಕೊಲ್ಲೂರು ಮುಕಾಂಬಿಕೆ ಸನ್ನಿದಿಯಲ್ಲಿ ಎನ್ನುವ ಕ್ಯಾಪ್ಶನ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿ, ದೇವಸ್ಥಾನದಲ್ಲಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ರಿಷಭ್ ಶೆಟ್ಟಿ ಶೀಘ್ರದಲ್ಲೇ ಸಿನಿಮಾ ಕುರಿತಾಗಿ ಬಿಗ್ ನ್ಯೂಸ್ ಕೊಡಲಿದ್ದಾರೆ ಎಂದು ಹೇಳಿದ್ದಾರೆ.
ಕಾಂತಾರ ಚಾಪ್ಟರ್ 1 ಗೆ (Kantara Chapter 1) ಕಾಯುತ್ತಿರುವ ಅಭಿಮಾನಿಗಳು, ಇದೀಗ ಶೆಟ್ರು ದೇಗುಲಕ್ಕೆ ಭೇಟಿ ನೀಡಿದ್ದು ನೋಡಿ, ನಟರು ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ಅಂದ್ರೆ ಸದ್ಯದಲ್ಲೇ ದೊಡ್ಡ ನ್ಯೂಸ್ ಕೊಡ್ತಿದ್ದಾರೆ ಎಂದು ಅರ್ಥ. ಹೊಸ ಮೂವಿ, ಚಿತ್ರದ ಟ್ರೈಲರ್ ಬಿಡುಗಡೆ ಹೀಗೆ ಯಾವುದೇ ಗುಡ್ ನ್ಯೂಸ್ ಕೊಡುವ ಸಾಧ್ಯತೆ ಇದೆ ಸ್ಟೇ ಟ್ಯೂಂಡ್ ಎಂದು ಕಾಮೆಂಟ್ ಮೂಲಕ ಅಭಿಮಾನಿಗಳು ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ , ರಿಷಬ್ ಶೆಟ್ಟಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜುಲೈ 7ರಂದು ಶೆಟ್ರು ಪರಶುರಾಮನ ಅವತಾರದಲ್ಲಿರುವ ಪೋಸ್ಟರ್ ಶೇರ್ ಮಾಡಿ, ಡಿವೈನ್ ಸಿನಿಮ್ಯಾಟಿಕ್ನ ಬಹುನಿರೀಕ್ಷಿತ ಪ್ರೀಕ್ವೆಲ್. ಕಾಂತಾರ ಅಧ್ಯಾಯ 1 ಅಕ್ಟೋಬರ್ 2, 2025ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ದಂತಕಥೆಯ ಮುನ್ನುಡಿ.. ಆ ನುಡಿಗೊಂದು ಪರಿಚಯ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ ಎಂದಿದ್ದರು. ಹೊಸ ಪೋಸ್ಟರ್ ನಾಲ್ಲಿ ರಿಷಬ್ ಶೆಟ್ಟಿ ಒಂದು ಕೈಯಲ್ಲಿ ಕೊಡಲಿ ಹಾಗೂ ಗುರಾಣಿ ಹಿಡಿದಿದ್ದು, ಅದಕ್ಕೆ ಬಾಣಗಳು ಚುಚ್ಚಿಕೊಂಡಿವೆ. ಅಂದರೆ ಇದು ಪರಶುರಾಮನ ಕಥೆಯನ್ನು ತಿಳಿಸುವ ಸಿನಿಮಾ ಆಗಿರಬಹುದು ಎನ್ನಲಾಗಿದೆ.
ಕಾಂತಾರ ಸಿನಿಮಾಗೆ ದೇಶಾದ್ಯಂತ ನಿರೀಕ್ಷೆಗೂ ಮೀರಿದ ಗೆಲುವು ಸಿಕ್ಕಿತ್ತು. ಹಾಗಾಗಿ ಆ ಸಿನಿಮಾದಿಂದ ಇದೀಗ ಪ್ರೀಕ್ವೆಲ್ ಗೆ ಶೆಟ್ರ ಸಂಭಾವನೆ (remuneration) ದುಬಾರಿಯಾಗಿದೆ ಎನ್ನುವ ಮಾಹಿತಿ ಕೂಡ ಕೇಳಿ ಬರುತ್ತಿದೆ. ಕಾಂತಾರ ಸಿನಿಮಾಕ್ಕಿಂತ 2400 ಪಟ್ಟು ಹೆಚ್ಚು (2400%) ಸಂಭಾವನೆ ಕಾಂತಾರ ಪ್ರೀಕ್ವೆಲ್‌ಗೆ ಅವರಿಗೆ ಸಿಕ್ಕಿದೆ ಎಂಬ ಮಾಹಿತಿ ಇದೆ. ಅಂದ್ರೆ ಸುಮಾರು 4 ಕೋಟಿಗೂ ಅಧಿಕ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ. ಆದರೆ ಯಾವುದೂ ಖಚಿತವಾಗಿಲ್ಲ.
ಇನ್ನು ಕಾಂತಾರ ಸಿನಿಮಾ ಜೊತೆಗೆ ರಿಷಭ್ ಶೆಟ್ಟಿ ಹನುಮಾನ್ (Hanuman) ಸಿನಿಮಾದಲ್ಲಿ ಹನುಮಂತನಾಗಿ ನಟಿಸುತ್ತಿದ್ದು, ಜೊತೆಗೆ ಶಿವಾಜಿ ಮಹಾರಾಜರಾಗಿ ಹಿಂದಿ ಸಿನಿಮಾದಲ್ಲೂ ನಟಿಸುವುದಾಗಿ ಈಗಾಗಲೇ ಮಾಹಿತಿ ಇದೆ. ಆ ಸಿನಿಮಾಗಳು ಕೂಡ ಸದ್ಯದಲ್ಲೇ ಸೆಟ್ಟೇರಲಿದೆ. ಇದರ ಜೊತೆಗೆ ಇದೀಗ ಹೊಸದಾಗಿ ಬಂದ ಮಾಹಿತಿಯ ಪ್ರಕಾರ ರಿಷಭ್ ಶೆಟ್ಟಿ ತೆಲುಗಿನ ಬಿಗ್ ಪ್ರೊಡಕ್ಷನ್ ಹೌಸ್ ಸಿತಾರಾ ಜೊತೆ ಕೂಡ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಮುಂದೆ ರಿಷಭ್ ಶೆಟ್ಟಿ ಯಾವ ಗುಡ್ ನ್ಯೂಸ್ ಕೊಡಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು.