MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಎಲ್ಲಿಯೂ ತಪ್ಪುಗಳಾಗದಂತೆ ಹಿರಿಯರ ಮಾರ್ಗದರ್ಶದಿಂದ ಸಿನಿಮಾ ಮಾಡಿದ್ದೇನೆ, ಟೀಕೆಗಳಿಗೆ ಮೈಸೂರಲ್ಲಿ ನಟ ರಿಷಭ್ ಉತ್ತರ

ಎಲ್ಲಿಯೂ ತಪ್ಪುಗಳಾಗದಂತೆ ಹಿರಿಯರ ಮಾರ್ಗದರ್ಶದಿಂದ ಸಿನಿಮಾ ಮಾಡಿದ್ದೇನೆ, ಟೀಕೆಗಳಿಗೆ ಮೈಸೂರಲ್ಲಿ ನಟ ರಿಷಭ್ ಉತ್ತರ

ಕಾಂತಾರ ಚಾಪ್ಟರ್ 1ರ ಯಶಸ್ಸಿನ ನಂತರ, ನಟ ರಿಷಬ್ ಶೆಟ್ಟಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಬಳಿಕ ಗಾಯತ್ರಿ ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ, ಚಿತ್ರದ ಯಶಸ್ಸಿಗೆ ಕನ್ನಡಿಗರನ್ನು ಶ್ಲಾಘಿಸಿದರು. ದೈವಾರಾಧನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

3 Min read
Gowthami K
Published : Oct 17 2025, 08:48 PM IST
Share this Photo Gallery
  • FB
  • TW
  • Linkdin
  • Whatsapp
17
ಗಾಯತ್ರಿ ಚಿತ್ರಮಂದಿರದಲ್ಲಿ ಶೆಟ್ರು
Image Credit : Asianet News

ಗಾಯತ್ರಿ ಚಿತ್ರಮಂದಿರದಲ್ಲಿ ಶೆಟ್ರು

ಕಾಂತಾರ ಚಾಪ್ಟರ್ 1ರ ಯಶಸ್ಸಿನ ಹಿನ್ನೆಲೆಯಲ್ಲಿ ನಟ ರಿಷಬ್ ಶೆಟ್ಟಿ ಗುರುವಾರ ನಗರದ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇ ಶ್ವರಿ ದರ್ಶನ ಪಡೆದ ಬಳಿಕ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಸಂಭ್ರಮ ನೋಡಿ ಖುಷಿಪಟ್ಟರು. ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಡಿವೈನ್ ಸ್ಟಾರ್‌ನಟ ರಿಷಬ್ ಶೆಟ್ಟಿ ಅವರನ್ನು ಚಿತ್ರಮಂದಿರದ ಮಾಲೀಕ ರಾಜಾರಾಂ ಆತ್ಮಯವಾಗಿ ಸ್ವಾಗತಿಸಿದರು. ಅಭಿಮಾನಿಗಳ ಜೊತೆ ಮಾತನಾಡಿದರು. ನಮ್ಮನ್ನ ನೋಡಲಿಕ್ಕೆ ನೀವು ಬರಬಹುದು. ನಿಮ್ಮನ್ನ ನೋಡಲಿಕ್ಕೆ ನಾವು ಬರಬಾರದಾ? ಎಂದು ಕಾಂತಾರ ಡೈಲಾಗ್ ಹೊಡೆದು ರಂಜಿಸಿದರು.

27
ಏಳು ಬೀಳು ದಾಟಿ ಅಭಿಮಾನಿಗಳ ಆಶೀರ್ವಾದ ನೋಡ್ತಿದ್ದೇವೆ
Image Credit : Asianet News

ಏಳು ಬೀಳು ದಾಟಿ ಅಭಿಮಾನಿಗಳ ಆಶೀರ್ವಾದ ನೋಡ್ತಿದ್ದೇವೆ

ಬಳಿಕ ಮಾತನಾಡಿದ ಅವರು, ಇಡೀ ಚಿತ್ರತಂಡ ಮೂರು ವರ್ಷದ ಕಷ್ಟ, ಟೀ ಕಾಫಿ ಕೊಡುವ ಹುಡುಗರಿಂದ ಎಲ್ಲರ ಶ್ರಮ ಹಾಕಿದ್ದಾರೆ. ಕಲಾವಿದರಾಗಿ ನಾವು ಇದನ್ನ ತುಂಬಾ ಎಂಜಾಯ್ ಮಾಡಿದ್ದೇವೆ. ನಾವು ಈ ಕ್ಷಣಗಳನ್ನ ಹೆಚ್ಚು ಸಂಭ್ರಮಪಡುತ್ತೇವೆ. ಹತ್ತಾರು ಅಡೆತಡೆ, ಕಷ್ಟ ನಷ್ಟ ಮೀರಿ ಒಂದು ಹಂತ ತಲುಪಿದ್ದೇವೆ. ಒಂದು ದೈವದ ಚಿತ್ರ ಹೇಳುವಾಗ ಪರೀಕ್ಷೆ ಸಹಜ. ಅಣ್ಣಾವು ಹೇಳಿದ್ರು ಅಭಿಮಾನಿಗಳನ್ನ ತಲುಪುವುದು ಕಷ್ಟ ಅಂತ. ಅದರಂತೆ ನಾವು ಏಳು ಬೀಳು ದಾಟಿ ಅಭಿಮಾನಿಗಳ ಆಶೀರ್ವಾದ ನೋಡ್ತಿದ್ದೇವೆ ಎಂದರು.

Related Articles

Related image1
Now Playing
ಕಾಂತಾರ ಚಾಪ್ಟರ್-1ಗಿತ್ತು ದೈವದ ಅನುಮತಿ! ವಿವಾದಗಳ ಬಗ್ಗೆ ಮೊದಲ ಬಾರಿ ರಿಷಬ್ ಮಾತು
Related image2
ಕಾಂತಾರ ಎಫೆಕ್ಟ್: ಐಎಂಡಿಬಿ ಲಿಸ್ಟ್‌ನಲ್ಲಿ ನಂ.1, 2 ಸ್ಥಾನದಲ್ಲಿ ರಿಷಬ್‌ ಶೆಟ್ಟಿ, ರುಕ್ಮಿಣಿ ವಸಂತ್
37
ಮನೋರಂಜನೆ ಮೀರಿ ದೈವದ ಬಗ್ಗೆ ಹೇಳುವ ಸಿನಿಮಾ
Image Credit : Rishab Shetty/ Instagram

ಮನೋರಂಜನೆ ಮೀರಿ ದೈವದ ಬಗ್ಗೆ ಹೇಳುವ ಸಿನಿಮಾ

ದೈವಗಳನ್ನ ಅಣಕಿಸುವ ಕೆಲಸ ಆಗುತ್ತಿದೆ. ಕೆಲವು ಸೋಶಿಯಲ್ ಮೀಡಿಯಾಗಳು ಮಾಡುತ್ತಿದ್ದಾರೆ. ಪದೇ ಪದೇ ಅವರ ಬಳಿ ಮನವಿ ಮಾಡುತ್ತಿದ್ದೇವೆ.ಇದು ಮನೋರಂಜನೆ ಮೀರಿ ದೈವದ ಬಗ್ಗೆ ಹೇಳುವ ಸಿನಿಮಾ. ನಮ್ಮಲ್ಲಿ ಕೋಲ ಹೇಗೆ ನಡೆಯುತ್ತದೆಯೋ ಹಾಗೆ ದೇವರನ್ನ ಭಕ್ತಿಯಿಂದ ಪೂಜಿಸಿದ್ದೇವೆ. ನಮ್ಮ ಮನೆಯಲ್ಲೂ ದೈವ ಸ್ಥಾನವಿದೆ. ನಾನು ಕೂಡ ದೈವರಾಧಕ. ಅದನ್ನ ನಂಬುವವರಿಗೆ ಹರ್ಟ್ ಆಗುತ್ತಿದೆ. ಕನ್ನಡ ಪ್ರೇಕ್ಷಕರು ಎಂದೂ ಕೈಬಿಟ್ಟಿಲ್ಲ. ಕನ್ನಡಿಗರು ಒಂದು ಒಳ್ಳೆ ಸಿನಿಮಾ ಮಾಡಿದರೆ ನಾವು ಬರ್ತೀವಿ ಅಂತಾರೆ. ಅದೇ ರೀತಿ ಕಾಂತಾರ ಚಿತ್ರವನ್ನ ಗೆಲ್ಲಿಸಿ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

47
ಚಿತ್ರ ಯಶಸ್ವಿ ಶೆಟ್ರು ಟೆಂಪಲ್ ರನ್
Image Credit : Instagram

ಚಿತ್ರ ಯಶಸ್ವಿ ಶೆಟ್ರು ಟೆಂಪಲ್ ರನ್

ಕಾಂತಾರ ಚಾಪ್ಟರ್ 1 ಯಶಸ್ವಿಯಾದ ಹಿನ್ನೆಲೆಯಲ್ಲಿ ನಟ ರಿಷಬ್ ಶೆಟ್ಟಿ ಟೆಂಪಲ್ ರನ್ ಮಾಡುತ್ತಿದ್ದು ಗುರುವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಚಾಮುಂಡಿ ತಾಯಿಯ ಗರ್ಭಗುಡಿಯ ಲ್ಲಿ ನಿಂತು ನಾಲ್ಕು ನಿಮಿಷ ಪ್ರಾರ್ಥನೆ ಸಲ್ಲಿಸಿದ ನಟ ರಿಷಬ್ ಶೆಟ್ಟಿ ಅವರು ಬಳಿಕ ದೇವರ ಹುಂಡಿಗೆ ಕಾಣಿಕೆ ಹಾಕಿದರು.

57
ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು
Image Credit : Instagram

ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು

ರಿಷಟ್ ಶೆಟ್ಟಿ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಸೆಲ್ಪಿಗೆ ಮುಗಿಬಿದ್ದರು. ಒತ್ತಡದ ನಡುವೆಯೂ ಕೆಲವರೊಂದಿಗೆ ರಿಷಬ್ ಶೆಟ್ಟಿ ಅವರು ಸೆಲ್ಪಿ ತೆಗೆಸಿಕೊಂಡರು. ಬಳಿಕ ಮಾತನಾಡಿದ ಅವರು, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಟ ರಿಷಬ್ ಶೆಟ್ಟಿ, ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಕಾಂತಾರ ಚಾಪ್ಟರ್1 ಯಶಸ್ವಿಯಾಗಿದೆ. ನಮ್ಮ ತಂಡದ ಶ್ರಮವನ್ನ ಜನರು ಒಪ್ಪಿದ್ದಾರೆ. ನಮ್ಮ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು, ಕಾಂತಾರ ಬಂದಾಗ ಜನರು ಇಷ್ಟ ಪಟ್ಟಿದ್ದರು. ಸಿನಿಮಾದ ಗಳಿಕೆ, ಆದಾಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ನಾನು ದೈವವನ್ನ ನಂಬುವಂತವನು. ದೈವದ ಅನುಮತಿ ಪಡೆದು ಸಿನಿಮಾ ಮಾಡಿದ್ದೇನೆ. ನಾಡಿನ ಜನತೆ ತುಂಬಾ ಅದ್ಭುತವಾತ ಯಶಸ್ಸು ಕೊಟ್ಟಿದ್ದಾರೆ. ಗಳಕೆಯ ಬಗ್ಗೆ ನಾನು ಮಾತನಾಡುವುದಿಲ್ಲ, ಕನ್ನಡಿಗರಿಗೆ ಧನ್ಯವಾದ ಅರ್ಪಿಸುತ್ತೇನೆ.

67
ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ: ರಿಷಭ್
Image Credit : instagram

ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ: ರಿಷಭ್

ದೈವರಾದಕರು ಸಿನಿಮಾ ಬಗ್ಗೆ ವಿರೋಧ ವ್ಯಕ್ತಪಡಿಸಿರಬಹುದು. ಆದರೆ ದೇವರ ವಿಚಾರಗಳನ್ನ ಸಿನಿಮಾದಲ್ಲಿ ಮಾತ್ರ ಮಾತನಾಡುತ್ತೇನೆ. ಯಾರು ಏನು ಬೇಕಾದರೂ ಮಾತನಾಡಲಿ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇಡೀ ತಂಡದ ಮೇಲೆ ದೈವದ ಆಶೀರ್ವಾದ ಇದೆ ಎಂದರು. ಎಲ್ಲಿಯೂ ತಪ್ಪುಗಳು ಆಗದಂತೆ ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ. ನಾನು ಹೊಸಬನಲ್ಲ. ದೈವದ ಸಿನಿಮಾ ಮಾಡುವವರು ಸರಿಯಾದ ರೀತಿಯಲ್ಲಿ ಸಿನಿಮಾ ಮಾಡಬೇಕು. ಕುಂದಾಪುರದ ಕೆರಾಡಿ ಗ್ರಾಮದಿಂದ ಬಂದು ಜನರಿಗೆ ರೀಚ್ ಆಗುವ ರೀತಿ ಸಿನಿಮಾ ಮಾಡುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗೆ ಒಳ್ಳೆಯ ಹೆಸರು ಬಂದಿದೆ. ಇದಿರಂದ ತುಂಬಾ ಖುಷಿ ಆಗುತ್ತಿದೆ ಎಂದು ಅವರು ಹೇಳಿದರು.

77
ಕಾಂತಾರ ಮುಂದಿನ ಚಾಪ್ಟರ್‌ ಬಗ್ಗೆ ಮಾತನಾಡಲ್ಲ
Image Credit : Instagram

ಕಾಂತಾರ ಮುಂದಿನ ಚಾಪ್ಟರ್‌ ಬಗ್ಗೆ ಮಾತನಾಡಲ್ಲ

ಕಾಂತಾರ ಮುಂದಿನ ಚಾಪ್ಟರ್‌ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನನ್ನ ಮುಂದಿನ ಚಿತ್ರ ಜೈ ಹನುಮಾನ. ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು. ನಟ ಅಮಿತಾಬ್ ಬಚ್ಚನ್ ಭೇಟಿ ಮಾಡಿದ್ದೆ. ಅಣ್ಣಾವ್ರ ಬಗ್ಗೆ ಬಹಳ ಮಾತನಾಡಿದರು. ಅವರು ತಮ್ಮ ಅನುಭವ ಹಂಚಿಕೊಂಡರು. ಅಂತಹ ಲೆಜೆಂಡ್ ಜೊತೆ ನಾನು ಕಾಲ ಕಳೆದದ್ದು ಖುಷಿ ಕೊಟ್ಟಿದೆ. ಫ್ಯಾನ್ಸ್ ವಾರ್‌ಬಗ್ಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಎಲ್ಲರ ಸಿನಿಮಾ ನೋಡಿ ಕನ್ನಡ ಸಿನಿಮಾ ಗೆಲ್ಲಿಸಿ ಅಂತ ಕೇಳಿಕೊಳ್ಳುತ್ತೇವೆ. ಥಿಯೇಟರ್‌ನಲ್ಲಿ ದೈವ ಆರಾಧನೆ ನೆಪದಲ್ಲಿ ಹುಚ್ಚಾಟ ಮಾಡಬೇಡಿ. ಅದಕ್ಕೆ ಒಂದು ಕ್ರಮ ಇರತ್ತದೆ. ದೈವ ಆರಾಧನೆಗೆ ಒಂದು ಶಿಸ್ತುಬದ್ಧಕ್ರಮವಿದೆ. ಆ ರೀತಿ ಮಾಡಬೇಡಿ ಅಂತ ಎಲ್ಲರಿಗೂ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಕಾಂತಾರ ಚಲನಚಿತ್ರ
ರಿಷಬ್ ಶೆಟ್ಟಿ
ಮೈಸೂರು
ಮನರಂಜನಾ ಸುದ್ದಿ
ಸ್ಯಾಂಡಲ್ವುಡ್ ಫಿಲ್ಮ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved