ಅಸಲಿ ಪೋಸ್ಟರ್ ಈಗ ರಿಲೀಸ್.. ಉಪ್ಪಿ ಶಾಕ್‌ಗೆ ಅಭಿಮಾನಿಗಳು ತಲೆಕೆಳಗು!
ಟ್ರೆಂಡ್ ಸೆಟ್ಟರ್ ಅಂದರೆ ಮೊದಲಿಗೆ ನೆನಪಾಗುವ ಹೆಸರೇ ರಿಯಲ್ ಸ್ಟಾರ್ ಉಪೇಂದ್ರ. ನಿರ್ದೇಶಕ ಉಪೇಂದ್ರ.ಉಪೇಂದ್ರ ನಿರ್ದೇಶನ ಮತ್ತು ನಟನೆಯ ಹೊಸ ಸಿನಿಮಾದ ಪೋಸ್ಟರ್ ಸದ್ದು ಮಾಡುತ್ತಲೇ ಇದೆ. ಆದರೆ ನಿನ್ನೆ ಹೊರಬಂದಿದ್ದು ನಕಲಿ ಈಗ ಹೊರಬಂದಿದ್ದು ಅಸಲಿ ಎಂಬಂತಾಗಿದೆ. ಸ್ವತಃ ಉಪೇಂದ್ರ ಅವರೇ ಜನ ಅಸಾಮಾನ್ಯ ಎಂದು ಹೇಳಿದ್ದಾರೆ.
ಯು-ಐ. ಇಂಗ್ಲಿಷಿನ ಯು ಅಕ್ಷರದ ಒಳಗೆ ಐ ಅಕ್ಷರ ಸೇರಿಕೊಂಡಿರುವ ಚಿಹ್ನೆಯುಳ್ಳ ಚಿತ್ರದ ಪೋಸ್ಟರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಸೆ.18 ಉಪೇಂದ್ರ ಹುಟ್ಟುಹಬ್ಬದಂದು ಅಧಿಕೃತ ಘೋಷಣೆ ಹೊರಬೀಳಲಿದೆ.
ಗುರುವಾರ ಸಂಜೆ ಉಪೇಂದ್ರರ ಹೊಸ ಚಿತ್ರದ ಮತ್ತೊಂದು ವಿಭಿನ್ನ ಪೋಸ್ಟರ್ ಹರಿದಾಡುತ್ತಿದೆ. ಇಲ್ಲಿ ನೀವು ತಲೆಕೆಳಗೆ ಮಾಡಲೇಬೇಕು. ಮತ್ತೊಮ್ಮೆ ಅಭಿಮಾನಿಗಳಿಗೆ ಉಪ್ಪಿ ಮೋಡಿ ಮಾಡಿದ್ದಾರೆ.
ಜನ ಅಸಮಾನ್ಯ ಎಂದು ಕರೆದಿರುವ ಉಪ್ಪಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿಯೂ ಜನರು ಹೇಗೆ ಯೋಚಿಸುತ್ತಿದ್ದಾರೆ ಎಂಬ ವಿಚಾರ ಹಂಚಿಕೊಂಡಿದ್ದಾರೆ. ನಾನು..ನೀನು ಏನಾದರೂ ಸಂಬಂಧ ಇದೇಯಾ..?
ಪೋಸ್ಟರ್ ಅಡ್ಡಲಾಗಿ ಹಿಡಿದಿದ್ದು ಉಪ್ಪಿ 3 ಇರಬಹುದುದಾ ಎಂದು ಯೋಚನೆ ಮಾಡಲಾಗಿದೆ. ಅಂದು ಉಪೇಂದ್ರ ಐದು ವರ್ಷದ ಹಿಂದೆ ಉಪ್ಪಿ 2 ಇದೀಗ ಮುಂದಿನ ಭಾಗವೇ ಗೊತ್ತಿಲ್ಲ.
ಭ್ರಷ್ಟಾಚಾರಿಗಳಿಗಲ್ಲ ಪ್ರಜಾಕೀಯದ ವಿಚಾರಗಳಿಗೆ ಮಾತ್ರ ಎಂದು ಒಂದು ಪೋಟೋ ಟ್ರೆಂಡ್ ಆಗಿದೆ. ಮತದಾನ ಮಾಡಿದ ಕೈ ಬೆರಳಿನ ಶಾಯಿ ಗುರುತು ಮತ್ತು ಉಪೇಂದ್ರ ಅವರ ಸಿನಿಮಾದ ಪೋಸ್ಟರ್ ಹೋಲಿಕೆ ಮಾಡಿಲಾಗಿದೆ.
ಇನ್ನೊಂದು ಚಿತ್ರ ಸಹ ಉಪೇಂದ್ರರ ಡಿಫರೆಂಟ್ ಶೇಡ್ ಗಳನ್ನು ಹಂಚಿಕೊಂಡಿದೆ. ನಾನು ಅದಾದ ಮೇಲೆ ನೀನು ಈಗ ಈ ಚಿತ್ರದಲ್ಲಿ ನಾನು ಮತ್ತು ನೀನು ಇಒಬ್ಬರೂ ಇದ್ದೆ ಇರ್ತಾರೆ ಎಂದಿದೆ.