- Home
- Entertainment
- Sandalwood
- 2 ಲಕ್ಷದ ಟಾಪ್ ಧರಿಸಿ ಏರ್‌ಪೋರ್ಟ್‌ಗೆ ಆಗಮಿಸಿದ ರಶ್ಮಿಕಾ ಮಂದಣ್ಣ; ನೆಲ ಒರೆಸುವ ಬಟ್ಟೆ ಎಂದು ಕಾಲೆಳೆದ ನೆಟ್ಟಿಗರು
2 ಲಕ್ಷದ ಟಾಪ್ ಧರಿಸಿ ಏರ್‌ಪೋರ್ಟ್‌ಗೆ ಆಗಮಿಸಿದ ರಶ್ಮಿಕಾ ಮಂದಣ್ಣ; ನೆಲ ಒರೆಸುವ ಬಟ್ಟೆ ಎಂದು ಕಾಲೆಳೆದ ನೆಟ್ಟಿಗರು
ರಶ್ಮಿಕಾ ಮಾತನಾಡುವ ಶೈಲಿಗೆ ಮಾತ್ರವಲ್ಲ ಧರಿಸುವ ಉಡುಪಿಗೂ ಟ್ರೋಲ್ ಆಗುತ್ತಾರೆ. 2.05 ಲಕ್ಷ ರೂಪಾಯಿ ಟಾಪ್ ನೋಡಿ ನೆಟ್ಟಿಗರು...

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರಿನಿಂದ ಇಳಿಯುತ್ತಿದ್ದಂತೆ ಬ್ಯುಸಿ ಬ್ಯುಸಿ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಹೈದರಾಬಾದ್ ಅಥವಾ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರಬಹುದು. ಈ ವೇಳೆ ರಶ್ಮಿಕಾ ತುಂಬಾನೇ ಸಿಂಪಲ್ ಆಗಿರುವ ಔಟ್‌ಫಿಟ್ ಧರಿಸಿದ್ದಾರೆ.
ರಶ್ಮಿಕಾ ಧರಿಸಿರುವ Dolce & Gabbana ಹೆಸರಿನ ಪೀಚ್ ಬಣ್ಣದ ಟಾಪ್ 2 ಲಕ್ಷದ 5 ಸಾವಿರ 881 ರೂಪಾಯಿ ಎನ್ನಲಾಗಿದೆ. ಬೆಲೆ ಕೇಳಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ.
ಈ ಟಾಪ್‌ಗೆ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಅದರ ಬೆಲೆ 2 ಲಕ್ಷ ಎನ್ನಲಾಗಿದೆ. ಅದಕ್ಕೆ ಮ್ಯಾಚ್ ಆಗುವ ಬೆಲ್ಟ್ ಮತ್ತು ಕಪ್ಪು ಬಣ್ಣದ ಬ್ಯಾಕ್ ನೋಡಬಹುದು.
Salvatore Ferragamo ಬ್ರ್ಯಾಂಡ್‌ನ ಕಪ್ಪು ಬಣ್ಣದ ಬೆಲ್ಟ್ ಬೆಲೆ 35 ಸಾವಿರ 455 ರೂಪಾಯಿ. ಒಟ್ಟಾರೆ ನಾಲ್ಕುವರೆ ಲಕ್ಷದ ಉಡುಪು ಧರಿಸಿ ರಶ್ಮಿಕಾ ಪ್ರಯಾಣ ಮಾಡುತ್ತಾರೆ.
'ಇಷ್ಟೊಂದು ದುಬಾರಿನಾ? ನೋಡಲು ನಮ್ಮನೆ ನೆಲ ಒರೆಸುವ ಬಟ್ಟೆ ರೀತಿ ಇದೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸಿಂಪಲ್ ಸುಂದರಿ ಎಂದು ಇನ್ನೂ ಕೆಲವರು ಹೊಗಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.